Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೆಸಿಪಿ: ಈರುಳ್ಳಿ-ಬೆಳ್ಳು-ಒಣಮೆಣಸಿನ ಈ ಚಟ್ನಿ ಇಡ್ಲಿ-ದೋಸೆಗೆ ಸೂಪರೋ ಸೂಪರ್!
ದೋಸೆ ಅಥವಾ ಇಡ್ಲಿ ಎಷ್ಟೇ ಚೆನ್ನಾಗಿ ಮಾಡಿದರೂ ಅದರ ರುಚಿ ಹೆಚ್ಚುವುದು ಕಾಂಬಿನೇಷನ್ ಚೆನ್ನಾಗಿ ಇದ್ದಾಗ ಮಾತ್ರ, ಹಾಗಂತ ಪ್ರತಿಬಾರಿ ಒಂದೇ ಟೇಸ್ಟ್ ಮಾಡಿದರೆ ಖುಷಿಯಾಗಲ್ಲ, ಅದರಲ್ಲೂ ದೋಸೆ, ಇಡ್ಲಿಗೆ ಚಟ್ನಿ ಕಾಂಬಿನೇಷನ್ ಸೂಪರ್.
ಅದರಲ್ಲೂ ನೀವು ವೆರೈಟಿ ರುಚಿಯ ಚಟ್ನಿ ಮಾಡಿದರೆ ಇನ್ನೂ ಸೂಪರ್. ನಾವಿಲ್ಲಿ ಈರುಳ್ಳಿ, ಬೆಳ್ಳುಳ್ಳಿ ಒಣ ಮೆಣಸು ಹಾಕಿ ಮಾಡುವ ಚಟ್ನಿ ರೆಸಿಪಿ ನೀಡಿದ್ದೇವೆ, ಈ ಚಟ್ನಿ ರುಚಿ ತುಂಬಾನೇ ಸೂಪರ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿ
8 ಒಣಮೆಣಸು
3 ಚಮಚ ಎಣ್ಣೆ
10 ಬೆಳ್ಳುಳ್ಳಿ ಎಸಳು
3 ಈರುಳ್ಳಿ
ಸ್ವಲ್ಪ ಹುಣಸೆಹಣ್ಣು
1/2 ಚಮಚ ಉಪ್ಪು
ಒಗ್ಗರಣೆಗೆ
2 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಉದ್ದಿನ ಬೇಳೆ
ಚಿಟಿಕೆಯಷ್ಟು ಇಂಗು
ಸ್ವಲ್ಪ ಕರಿಬೇವು
ಮಾಡುವ ವಿಧಾನ:
* ಒಂದು ಕಪ್ ಬಿಸಿ ನೀರಿಗೆ 8-10 ಒಣ ಮೆಣಸು ನೆನೆಹಾಕಿ ( 10 ನಿಮಿಷ
ನೆನೆಹಾಕಿ)
* ನಂತರ ಬಾಣಲೆ ಬಿಸಿ ಮಾಡಿ 2-3 ಚಮಚ ಎಣ್ಣೆ ಹಾಕಿ, ನಂತರ 15-18 ಬೆಳ್ಳುಳ್ಳಿ
ಹಾಕಿ ಫ್ರೈ ಮಾಡಿ.
* ನಂತರ ಈರುಳ್ಳಿ ಸೇರಿಸಿ.
* ಈರುಳ್ಳಿ-ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
* ನಂತರ ಅವುಗಳನ್ನು ಬ್ಲೆಂಡರ್ನಲ್ಲಿ ಹಾಕಿ.
* ನಂತರ ಒಣ ಮೆಣಸು, ಹುಣಸೆಹಣ್ಣು, ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿ.
ನಂತರ ಹಸಿ ಚಟ್ನಿಗೆ ಒಗ್ಗರಣೆ ಕೊಡಿ
* ಒಗ್ಗರಣೆಗೆ ಮೊದಲು ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್
ಶಬ್ದ ಮಾಡುವಾಗ ಉದ್ದಿನ ಬೇಳೆ ಹಾಕಿ ನಂತರ ಕರಿಬೇವು ಹಾಕಿ.
ಈ ಚಟ್ನಿಯನ್ನು ನೀವು ದೋಸೆ, ಇಡ್ನಿ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.



Click it and Unblock the Notifications
