For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಈ ಓಟ್ಸ್ ಕಿಚಡಿ ಮಧುಮೇಹಿಗಳಿಗೂ ಒಳ್ಳೆಯದು

Posted By:
|

ತೂಕ ಹೆಚ್ಚಾಗುತ್ತಿದೆ ಎಂಬ ಚಿಂತೆಯೇ? ಅದರಲ್ಲೂ ಈ ಲಾಕ್‌ಡೌನ್‌ ಬಳಿಕ ಮನೆಯಲ್ಲಿಯೇ ಇದ್ದೇವೆ, ಜಿಮ್, ವಾಕಿಂಗ್ ಅಂತ ಹೋಗಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ತೂಕ ಹೆಚ್ಚಾಗುತ್ತಿದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ನಿಮಗೆ ಹೇಳಿ ಮಾಡಿಸಿದ ಕಿಚಡಿ ರೆಸಿಪಿ.

ಇಲ್ಲಿ ನಾವು ಓಟ್ಸ್ ಕಿಚಡಿ ನೀಡಿದ್ದೇವೆ, ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯಿರಿ. ಈ ಕಿಚಡಿಯಲ್ಲಿ ಪ್ರೊಟೀನ್ ಹಾಗೂ ನಾರಿನಂಶ ಅಧಿಕವಿದೆ, ಕ್ಯಾಲೋರಿಯೂ ಹೆಚ್ಚಿಲ್ಲ. ಇದನ್ನು ಸವಿಯುವ ಮೂಲಕ ಮೈ ತೂಕ ಕಡಿಮೆ ಮಾಡಬಹುದು.

ಇನ್ನು ಮಧುಮೇಹಿಗಳಿಗೆ ಪಥ್ಯ ಆಹಾರ ಸೇವಿಸಿ ಬೋರಾಗಿರುತ್ತದೆ, ಅಂಥವರು ಈ ರೀತಿಯ ಕಿಚಡಿ ಟ್ರೈ ಮಾಡಿದರೆ ಬಾಯಿಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ನಾವು ಓಟ್ಸ್ ಕಿಚಡಿ ರೆಸಿಪಿ ನೀಡಿದ್ದೇವೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Oats kichdi Recipe, ಓಟ್ಸ್ ಕಿಚಡಿ ರೆಸಿಪಿ
Oats kichdi Recipe, ಓಟ್ಸ್ ಕಿಚಡಿ ರೆಸಿಪಿ
Prep Time
10 Mins
Cook Time
10M
Total Time
20 Mins

Recipe By: Reena TK

Recipe Type: Kichdi

Serves: 2

Ingredients
  • ಬೇಕಾಗುವ ಸಾಮಗ್ರಿ

    *1 ಕಪ್ ಓಟ್ಸ್

    * 4 ಚಮಚ ಹೆಸರು ಬೇಳೆ

    * 3 ಚಮಚ ಎಣ್ಣೆ

    * ಒಂದೊಂದು ಚಮಚ ಬೆಳ್ಳುಳ್ಳಿ , ಹಸಿ ಮೆಣಸಿನಕಾಯಿ ಪೇಸ್ಟ್

    * 1 ಚಮಚ ಅರಿಶಿಣಪುಡಿ

    * ರುಚಿಗೆ ತಕ್ಕ ಉಪ್ಪು

    * ಡ್ರೈ ಫ್ರೂಟ್ಸ್ (ನಿಮ್ಮ ಆಯ್ಕೆಗೆ ಬಿಟ್ಟದ್ದು)

Red Rice Kanda Poha
How to Prepare
  • ಮಾಡುವ ವಿಧಾನ:

    * ಕುಕ್ಕರ್‌ಗೆ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಬಿಸಿ ಮಾಡಿ, ನಂತರ ಹಸಿ ಮೆಣಸಿನಕಾಯಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್ ಹಾಕಿ 1-2 ನಿಮಿಷ ಸೌಟ್‌ನಲ್ಲಿ ಆಡಿಸಿ.

    *ಓಟ್ಸ್‌ ಹಾಗೂ ಹೆಸರು ಬೇಳೆ ಹಾಕಿ ಸೌಟ್‌ನಿಂದ ತಿರುಗಿಸಿ, ನತರ 4 ಕಪ್‌ ನೀರು ಹಾಕಿ ಉಪ್ಪು, ಅರಿಶಿಣ ಹಾಕಿ ಮಿಶ್ರ ಮಾಡಿ ಎರಡು ವಿಶಲ್‌ ಬರುವವರೆಗೆ ಬೇಯಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಡ್ರೈಫ್ರೂಟ್ಸ್‌ನಿಂದ ಅಲಂಕರಿಸಿ, ಸವಿಯಿರಿ.

Instructions
  • ಸಲಹೆ: ಇದು ಬಾಯಿಗೆ ರುಚಿ ನೀಡುತ್ತದೆ, ದೇಹಕ್ಕೆ ಅಗ್ಯತವಿರುವ ಪೋಷಾಂಶವೂ ದೊರೆಯುವುದು, ತೂಕವೂ ಹೆಚ್ಚಾಗುವುದಿಲ್ಲ. ಮೈ ತೂಕ ಕಡಿಮೆಯಾಗಬೇಕೆಂದು ಬಯಸುವವರು ಈ ರೆಸಿಪಿ ಟ್ರೈ ಮಾಡಬಹುದು.
Nutritional Information
  • ಕ್ಯಾಲೋರಿ - 175cal
  • ಪ್ರೊಟೀನ್ - 6.6 ಗ್ರಾಂ
  • ಕಾರ್ಬ್ಸ್ - 20ಗ್ರಾಂ
[ 4.5 of 5 - 49 Users]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X