Latest Updates
-
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ
ರೆಸಿಪಿ: ನುಗ್ಗೆ ಹೂವಿನ ಪಲ್ಯ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಕೆಲವೊಂದಿಷ್ಟು ಕಾಯಿಲೆಗಳಿಗೆ ಪದೇ ಪದೇ ಆಸ್ಪತ್ರೆಗೆ ಹೋಗಿ ಔಷಧಿ ಸೇವನೆ ಮಾಡುವುದಕ್ಕಿಂತ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ತಯಾರಿಸಿಕೊಳ್ಳಬಹುದು. ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುವುದರಿಂದ, ನಾವು ಅಂತಹ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.

ನುಗ್ಗೆ ಹೂವಿನ ಪಲ್ಯ!
ನುಗ್ಗೆಕಾಯಿ, ನುಗ್ಗೆ ಸೊಪ್ಪು ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿಯಾಗಿರುವ ಆಹಾರ
ಎಂಬುದು ಎಲ್ಲರಿಗೂ ಗೊತ್ತು. ನುಗ್ಗೆ ಸೊಪ್ಪಿನ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು
ಸೇವಿಸಿದರೆ ಮದುವೆಯ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ಪುರುಷತ್ವ ಹೆಚ್ಚಿಸಲು
ಕೂಡ ನುಗ್ಗೆಕಾಯಿ ಸಹಾಯಕವಾಗಿದೆ. ಅದೇ ರೀತಿ ವಿಟಮಿನ್ ಎ, ವಿಟಮಿನ್ ಬಿ1,
ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಅಂಶಗಳು ಹೇರಳವಾಗಿರುವ ನುಗ್ಗೆ ಹೂವು ಕೂಡ
ಆರೋಗ್ಯಕ್ಕೆ ಬಹಳ ಪರಿಣಾಮಕಾರಿಯಾಗಿರುವ ಆಹಾರ ಪದಾರ್ಥವಾಗಿದೆ.
ನುಗ್ಗೆ ಹೂವು ಚರ್ಮದ ಸೋಂಕು ನಿವಾರಣೆಗೆ ಅತ್ಯುತ್ತಮ ಪರಿಹಾರವಾಗಿದೆ. ಅಷ್ಟೇ ಅಲ್ಲದೆ ಸಂಧಿವಾತ ಸಮಸ್ಯೆ ನಿವಾರಣೆ, ಮೂಳೆ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ತೂಕ ಕಡಿಮೆ ಮಾಡಿಕೊಳ್ಳುವುದರಲ್ಲಿಯೂ ಕೂಡ ನುಗ್ಗೆ ಹೂವುಗಳು ಪರಿಣಾಮಕಾರಿಯಾಗಿವೆ. ಹಾಗಾಗಿ ನುಗ್ಗೆ ಹೂವಿನಿಂದ ಪಲ್ಯ ತಯಾರಿಸಿಕೊಂಡು ಸೇವನೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ನುಗ್ಗೆ ಹೂವಿನ ಪಲ್ಯ ಮಾಡಲು ಬೇಕಾಗಿರುವ ವಸ್ತುಗಳು!
ನುಗ್ಗೆ ಹೂವು ಒಂದು ಬೌಲ್ ನಷ್ಟು (ಅಥವಾ ಮನೆಯಲ್ಲಿ ಎಷ್ಟು ಜನ ಇದ್ದಾರೋ ಅಷ್ಟು
ಜನರಿಗೆ ಸಾಕಾಗುವಷ್ಟು)
ಈರುಳ್ಳಿ ಎರಡರಿಂದ ಮೂರು)
ತೆಂಗಿನ ತುರಿ ಎರಡು ದೊಡ್ಡ ಚಮಚ
ಅಡುಗೆ ಎಣ್ಣೆ ಒಂದು ದೊಡ್ಡ ಚಮಚ
ಹಸಿಮೆಣಸಿನಕಾಯಿ 3 ರಿಂದ 4 (ಖಾರಕ್ಕೆ ಅನುಗುಣವಾಗಿ)
ಕರಿಬೇವಿನ ಸೊಪ್ಪು 5 ರಿಂದ 10 ಎಲೆಗಳು
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆ ಪುಡಿ ಅಥವಾ ಹುಣಸೆಹಣ್ಣು ಸ್ವಲ್ಪ
ಒಗ್ಗರಣೆಗೆ ಸಾಸಿವೆ ಮತ್ತು ಜೀರಿಗೆ (ಒಣ ಮೆಣಸು ಬೇಕಿದ್ದವರು ಬಳಸಬಹುದು)
ನುಗ್ಗೆ ಸೊಪ್ಪಿನ ಪಲ್ಯ ಮಾಡುವ ವಿಧಾನ!
ಮೊದಲಿಗೆ ನುಗ್ಗೆ ಸೊಪ್ಪನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒಂದು ಪಾತ್ರೆಗೆ ನೀರು
ಉಪ್ಪು ಹಾಗೂ ಅರಿಶಿಣ ಹಾಕಿ, ಐದು ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ. ಯಾವುದೇ
ಕ್ರಿಮಿ ಕೀಟಗಳು ಇದ್ರೆ ಹೋಗಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.
ಇನ್ನು ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಬಿಸಿಗೆ ಇಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಾಸಿವೆ ಹಾಗೂ ಜೀರಿಗೆ ಹಾಕಿ ಚಟಪಟ ಆದ ತಕ್ಷಣ, ಕರಿಬೇವನ್ನು ಹಾಕಿ. ಹೆಚ್ಚಿಟ್ಟುಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ. ಹಸಿ ಮೆಣಸಿನ ಬದಲು ಒಣ ಮೆಣಸು ಸೇರಿಸಬಹುದು. ಈಗ ಸ್ವಲ್ಪ ಹುರಿದು ಎತ್ತಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ.
ಈರುಳ್ಳಿಯನ್ನು ಸ್ವಲ್ಪ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ. ನುಗ್ಗೆ ಹೂವುಗಳನ್ನು ನೀರನ್ನು ಬಸಿದು, ಸೇರಿಸಿ. ಬಳಿಕ ಹೂವನ್ನು ಮೊಗಚಿ. ಚಿಟಿಕೆ ಅರಿಶಿಣ ಹಾಗೂ ಉಪ್ಪನ್ನು ಸೇರಿಸಿ ಬೇಯಲು ಬಿಡಿ.
ನುಗ್ಗೆ ಹೂವಿನ ಪಲ್ಯ ಫ್ರೈ ಮಾಡುವಾಗ ನೀರನ್ನು ಸೇರಿಸಬಾರದು. ಯಾಕೆಂದರೆ ನುಗ್ಗೆ ಹೂವು ಸ್ವಲ್ಪ ಕಹಿಯಾಗಿರುತ್ತದೆ ಹಾಗಾಗಿ ನೀರು ಸೇರಿಸದೆ ಎಣ್ಣೆಯಲ್ಲಿಯೇ ಫ್ರೈ ಮಾಡಿದರೆ ಒಳ್ಳೆಯದು. ಈರುಳ್ಳಿ ಹಾಕುವುದರಿಂದ ನುಗ್ಗೆ ಹೂವಿನ ಹಸಿ ವಾಸನೆ ಹೋಗುತ್ತದೆ.
ನುಗ್ಗೆ ಹೂವು ಚೆನ್ನಾಗಿ ಬೆಂದ ನಂತರ, ಕೊನೆಯಲ್ಲಿ ಕಾಯಿತುರಿಯನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಈ ಪಲ್ಯವನ್ನು ಸೇವಿಸಿ. ವರ್ಷಪೂರ್ತಿ ಈ ನುಗ್ಗೆ ಹೂವು ಸಿಗುವುದಿಲ್ಲ ಹಾಗಾಗಿ ಸಿಕ್ಕ ಸಮಯದಲ್ಲಿ ತಪ್ಪದೇ ಇದರಿಂದ ಆಹಾರ ತಯಾರಿಸಿಕೊಂಡು ಸೇವನೆ ಮಾಡಿ.



Click it and Unblock the Notifications
