Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕ್ರಿಸ್ಮಸ್ ಹಬ್ಬದ ವಿಶೇಷ: ಮಲೇಶಿಯನ್ ಚಿಕನ್ ರೆಸಿಪಿ!
ಕ್ರಿಸ್ಮಸ್-ಹೊಸವರ್ಷದಲ್ಲಿ ಪಾರ್ಟಿಯ ಅಬ್ಬರ ಹೆಚ್ಚಾಗಿರುತ್ತದೆ.ಪ್ರತಿಯೊಬ್ಬರು ಮನೆಗಳಲ್ಲಿ ಸ್ನೇಹಿತರನ್ನು ಕರೆದು ಕ್ರಿಸ್ಮಸ್‌ನ ಆಚರಣೆಯಲ್ಲಿ ತೊಡಗುತ್ತಾರೆ,ಅದಕ್ಕೆಂದೇ ಇಂದು ವಿಶೇಷ ರೆಸಿಪಿಯೊಂದಿಗೆ ಬಂದಿದೆವೆ,ಅದೇ ಮಲೇಶಿಯನ್ ಚಿಕನ್ ರೆಸಿಪಿ
ಡಿಸೆಂಬರ್ ಬಂತೆಂದರೆ ಸಾಕು. ಕ್ರಿಸ್ಮಸ್ ಹಬ್ಬದ ಆಚರಣೆ ಆರಂಭವಾಗುತ್ತದೆ. ಯುರೋಪ್‌ನ ಕೆಲವೊಂದು ರಾಷ್ಟ್ರಗಳಲ್ಲಿ ತಿಂಗಳು ಪೂರ್ತಿ ಜನರು ಕ್ರಿಸ್ಮಸ್ ಗುಂಗಿನಲ್ಲಿಯೇ ಇರುತ್ತಾರೆ. ಕ್ರಿಸ್ಮಸ್ ಕಳೆದ ಕೂಡಲೇ ಹೊಸ ವರ್ಷವೂ ಬರುವುದರಿಂದ ಎರಡು ಆಚರಣೆಗಳು ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ.
ಅದರಲ್ಲೂ ಕ್ರಿಸ್ಮಸ್ ಮತ್ತು ಹೊಸವರ್ಷದಲ್ಲಿ ಪಾರ್ಟಿಯ ಅಬ್ಬರವೂ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ಮನೆಗಳಲ್ಲಿ ಬಂಧುಗಳನ್ನು ಹಾಗೂ ಸ್ನೇಹಿತರನ್ನು ಕರೆದು ಕ್ರಿಸ್ಮಸ್‌ನ ಆಚರಣೆಯಲ್ಲಿ ತೊಡಗುತ್ತಾರೆ.
ಕ್ರಿಸ್ಮಸ್‌ಗೆ ವಿವಿಧ ರೀತಿಯ ತಿಂಡಿ ತಿನಿಸುಗಳು ಹಾಗೂ ಆಹಾರವನ್ನು ತಯಾರಿಸಲಾಗುತ್ತದೆ. ಭಾರತೀಯ ಶೈಲಿಯ ಅಡುಗೆಯನ್ನು ನೀವು ಪ್ರತೀ ಕ್ರಿಸ್ಮಸ್‌ಗೂ ಮಾಡುತ್ತಿರಬಹುದು. ಆದರೆ ಈ ಸಲ ಬೋಲ್ಡ್ ಸ್ಕೈಯು ಮಲೇಶಿಯನ್ ಚಿಕನ್ ಬಗ್ಗೆ ನಿಮಗೆ ಹೇಳಿಕೊಡಲಿದೆ. ಇದನ್ನು ತಯಾರಿಸುವುದು ಹೇಗೆಂದು ತಿಳಿದುಕೊಂಡು ಈ ಸಲದ ಕ್ರಿಸ್ಮಸ್ ಗೆ ವಿಶೇಷ ಅಡುಗೆ ಮಾಡಿ ಬಡಿಸಿ. ಖಂಡಿತವಾಗಿಯೂ ಬಂದ ಅತಿಥಿಗಳು ನಿಮ್ಮ ಗುಣಗಾನ ಮಾಡುತ್ತಾರೆ. ಹೆಚ್ಚಿಗೆ ತಿಳಿಯಲು ಮುಂದೆ ಓದಿಕೊಳ್ಳಿ.... ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!
*ನಾಲ್ಕು ಜನರಿಗೆ ಆಗುವಷ್ಟು
*ಸಮಯ 20 ನಿಮಿಷ
*ಅಡುಗೆ ಸಮಯ 12 ನಿಮಿಷ
ವಿಧಾನ
•ಕೋಳಿಯ ಕಾಲಿನ ಭಾಗವನ್ನು ಅರ್ಧ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.
•ಅದಕ್ಕೆ ಉಪ್ಪು, ಕರಿಮೆಣಸು, ಬೆಳ್ಳುಳ್ಳಿ ಹುಡಿ, ಎಣ್ಣೆ, ಆಯ್ಸ್ಟರ್ ಸಾಸ್, ಮಸಾಲೆ ಪುಡಿ ಹಾಕಿಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಹಾಗೆ ಬಿಡಿ.
•ಆಳವಾದ ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಕುದಿಸಿ. ಮಸಾಲೆ ಹಾಕಿರುವಂತಹ ಕೋಳಿಯ ತುಂಡುಗಳನ್ನು ಅದರಲ್ಲಿ ಬಿಟ್ಟು ಸುಮಾರು 2-3 ನಿಮಿಷಕಾಲ ಚೆನ್ನಾಗಿ ಫ್ರೈ ಮಾಡಿ...
• ಇನ್ನು ಗ್ಯಾಸ್ ಸ್ಟೌವ್ ಉರಿ ಸಣ್ಣಗೆ ಮಾಡಿಕೊಂಡು ಕೋಳಿ ತುಂಡಿನ ಒಳಭಾಗ ಬೇಯಲು ಬಿಡಿ.
• ಕೋಳಿಯ ತುಂಡುಗಳನ್ನು ಹೊರತೆಗೆದು ಸ್ವಚ್ಛವಾಗಿರುವ ಅಡುಗೆ ಕಾಗದದಲ್ಲಿ ಹಾಕಿಡಿ. ಇದು ಎಣ್ಣೆಯನ್ನು ಹೀರಿಕೊಳ್ಳುವುದು.
• ಈಗ ಮಲೇಶಿಯನ್ ಚಿಕನ್ ತಯಾರಾಗಿದೆ. ಇದಕ್ಕೆ ಈರುಳ್ಳಿ ಎಳೆಯನ್ನು ಕತ್ತರಿಸಿ ಹಾಕಿ ಶೃಂಗರಿಸಿ.
ಇದು ತುಂಬಾ ಸುಲಭವಾಗಿರುವಂತದ್ದಾಗಿದೆ. ಹೆಚ್ಚು ಸಮಯವೂ ಬೇಕಾಗಿಲ್ಲ. ಮಲೇಶಿಯನ್ ಚಿಕನ್ ಮಾಡಿಕೊಂಡು ಅತಿಥಿಗಳಿಗೆ ಬಡಿಸಲು ತಯಾರಾಗಿದ್ದೀರಿ ತಾನೇ? ನೀವು ತಯಾರಿಸಿದ ಬಳಿಕ ಪ್ರತಿಕ್ರಿಯೆಯನ್ನು ನಮಗೂ ತಿಳಿಸಲು ಮರೆಯಬೇಡಿ.....



Click it and Unblock the Notifications
