For Quick Alerts
ALLOW NOTIFICATIONS  
For Daily Alerts

ನೆಲ ಬಸಳೆ ಸಾರಿನ ರೆಸಿಪಿ: ಇದು ಮಧುಮೇಹಿಗಳಿಗೆ ತುಂಬಾನೇ ಪ್ರಯೋಜನಕಾರಿ

Posted By:
|

ಹಿಂದಿನವರ ಆರೋಗ್ಯದ ಗುಟ್ಟೇನು ಎಂದು ಈಗೀನ ಕಾಲದ ನಾವೆಲ್ಲಾ ಆಗಾಗ ಮಾತನಾಡ್ತಾ ಇರ್ತೀವಿ. ಕೆಲವರು ವಯಸ್ಸು 80 ದಾಟಿದರೂ ಇನ್ನೂ ಗಟ್ಟಿಮುಟ್ಟಾಗಿರುತ್ತಾರೆ. ಅದಕ್ಕೆ ಕಾರಣ ಅವರ ಜೀವನಶೈಲಿ ಹಾಗೂ ಆಹಾರಶೈಲಿಯಾಗಿತ್ತು. ನಾವಿಂದು ಒಂದು ಅದ್ಭುತವಾದ ರೆಸಿಪಿಯೊಂದಿಗೆ ಬಂದಿದ್ದೇವೆ.

Nela Basale Or Talinum fruticosum Curry Recipe In Kannada

ನೆಲ ಬಸಳೆ ಕೇಳಿದ್ದೀರಾ? ಹೆಚ್ಚಿನವರಿಗೆ ಇದರ ಪರಿಚಯ ತುಂಬಾನೇ ಕಡಿಮೆ, ಇದು ತೋಟದಲ್ಲಿ ಹಾಗೇ ಕಳೆಯಂತೆ ಬೆಳೆದಿರುತ್ತದೆ, ನಾವೇನು ಇದನ್ನು ಬೆಳೆಸಲು ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ, ಆದರೆ ಇದರಲ್ಲಿರುವ ಆರೋಗ್ಯಕರ ಗುಣವಿದೆಯೆಲ್ಲಾ ಅದ್ಭುತ...

ಮೊದಲಿಗೆ ಇದರ ರೆಸಿಪಿ ನೋಡೋಣ, ಜೊತೆಗೆ ಪ್ರಯೋಜನಗಳನ್ನೂ ತಿಳಿಯೋಣ:

Nela Basale Curry Recipe, ನೆಲ ಬಸಳೆ ಸಾರಿನ ರೆಸಿಪಿ
Nela Basale Curry Recipe, ನೆಲ ಬಸಳೆ ಸಾರಿನ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Reena TK

Recipe Type: Vegetarian

Serves: 3

Ingredients
    • ಬೇಕಾಗುವ ಸಾಮಗ್ರಿ
    • ನೆಲ ಬಸಳೆ (1 ಕಟ್ಟು)
    • ಬೇಳೆ 1 ಕಪ್
    • ಟೊಮೆಟೊ 2
    • ಈರುಳ್ಳಿ 1
    • ಹಸಿ ಮೆಣಸು 2
    • ಅರ್ಧ ಚಮಚ ಖಾರದ ಪುಡಿ
    • 1/4 ಚಮಚ ಗರಂ ಪುಡಿ
    • ಬೆಳ್ಳುಳ್ಳಿ ಎಸಳು 4-5
    • ಅರಿಶಿಣ ಪುಡಿ 1/4 ಚಮಚ
    • ಕೊತ್ತಂಬರಿ ಪುಡಿ 1 ಚಮಚ
    • ರುಚಿಗೆ ತಕ್ಕ ಉಪ್ಪು
    • ಎರಡೂವರೆ ಕಪ್ ನೀರು
    • ಸ್ವಲ್ಪ ಸಾಂಬಾರ್ ಪುಡಿ (ಬೇಕಿದ್ದರೆ)
    • 1 ಚಮಚ ಎಣ್ಣೆ
Red Rice Kanda Poha
How to Prepare
  • ಮಾಡುವ ವಿಧಾನ:

    * ಬಸಳೆ, ಬೇಳೆ, ಟೊಮೆಟೊ, ಈರುಳ್ಳಿ, ಉಪ್ಪು, ನೀರು ಹಾಕಿ ಬೇಯಿಸಿ.

    * ಬೆಂದ ಮೇಲೆ ಒಗ್ಗರಣೆ ಕೊಟ್ಟು, ನಂತರ ಬೇಯಿಸಿದ ಸೊಪ್ಪು ಹಾಕಿ ನಂತರ ಮಸಾಲೆ ಪದಾರ್ಥ ಸೇರಿಸಿದರೆ ನೆಲ ಬಸಳೆ ಸಾರು ರೆಡಿ.

Instructions
  • ಪ್ರಯೋಜನಗಳು: *ಮಲಬದ್ಧತೆ ನಿವಾರಣೆ ಮಾಡುತ್ತದೆ *ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು * ಕಾಮೋತ್ತೇಜಕ ಗುಣ ಹೊಂದಿದೆ. * ಎಲೆ ಜಗಿದು ಉಗಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುವುದು * ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು.
Nutritional Information
  • People - 3
  • Protein - 3g
  • Fiber - 4g
[ 4 of 5 - 108 Users]
X
Desktop Bottom Promotion