ನವರಾತ್ರಿ ವ್ರತಕ್ಕೆ 10 ನಿಮಿಷದಲ್ಲಿ ಬಾದಾಮಿ ಖೀರ್ ಮಾಡಿ: ರುಚಿಗೆ ನೀವೇ ಬೆರಗಾಗ್ತೀರಾ

Posted By:

ನವರಾತ್ರಿಗೆ 10 ನಿಮಿಷದಲ್ಲಿ ಈ ಖೀರ್ ಮಾಡಿ. ಇದು ದುರ್ಗಾ ದೇವಿಗೆ ಪ್ರಿಯವಾದ ನೈವೇದ್ಯ. ಹೌದು, ನವರಾತ್ರಿ (Navratri) ಕೇವಲ ಪೂಜೆ ಮತ್ತು ಆಚರಣೆಗಳ ಹಬ್ಬವಲ್ಲ. ಬದಲಾಗಿ, ಉಪವಾಸ ಮಾಡುವ ಭಕ್ತರಿಗಾಗಿ ರುಚಿಕರ ಮತ್ತು ವಿಶೇಷ ಖಾದ್ಯಗಳನ್ನು ಸವಿಯುವ ಸಮಯವೂ ಆಗಿದೆ. ನವರಾತ್ರಿ ಉಪವಾಸದ (Navratri Vrat) ಸಮಯದಲ್ಲಿ ಆಹಾರ ಮತ್ತು ಪಾನೀಯಗಳ ಮೆನು ಸೀಮಿತವಾಗಿರುತ್ತದೆ. ಇದರಿಂದ, ಪ್ರತಿಯೊಬ್ಬರೂ ಹೊಸ, ರುಚಿಕರ ಮತ್ತು ಉಪವಾಸ ನಿಯಮಗಳಿಗೆ ಅನುಗುಣವಾಗಿ ಏನನ್ನಾದರೂ ಬಯಸುತ್ತಾರೆ. ಈ ಸಮಯದಲ್ಲಿ ತಿನ್ನಲು ರುಚಿಕರವಾಗಿರುವ ಬಾದಾಮ್ ಖೀರ್ (Badam Kheer) ಒಂದು ಪರಿಪೂರ್ಣ ಆಯ್ಕೆಯಾಗಿದೆ.

ನವರಾತ್ರಿ.. ವರ್ಷದ ಅತ್ಯಂತ ಪವಿತ್ರ ಸಮಯ ಮತ್ತೆ ಬಂದಿದೆ. ಇಡೀ ದೇಶವೇ ಭಕ್ತಿ, ಸಂತೋಷ ಮತ್ತು ಭಕ್ತಿಯಲ್ಲಿ ಮುಳುಗಿರುವ ಸಮಯ ಇದು. ಒಂಬತ್ತು ದಿನಗಳ ಕಾಲ, ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿ ಮನೆಯಲ್ಲಿ ಉಪವಾಸ ವ್ರತ ಆಚರಿಸಲಾಗುತ್ತದೆ. ಜೊತೆಗೆ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಆದರೆ, ನವರಾತ್ರಿ ಕೇವಲ ಪೂಜೆಯ ಹಬ್ಬವಲ್ಲ, ಇದು ವಿಶೇಷ ಉಪವಾಸ ಖಾದ್ಯಗಳ ಹಬ್ಬವೂ ಹೌದು. ಈ ಲೇಖನದಲ್ಲಿ ಉಪವಾಸಕ್ಕೆ ಸೂಕ್ತವಾದ ನವರಾತ್ರಿ ವಿಶೇಷ ಸಿಹಿ ರೆಸಿಪಿ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಇದು ಈ ನವರಾತ್ರಿಯ ಉಪವಾಸವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.

How To Make Badam Kheer

ರುಚಿಯಾದ ಬಾದಾಮಿ ಮಖಾನ ಖೀರ್

ನವರಾತ್ರಿ ಹಬ್ಬದ (Navratri 2025) ಸಮಯದಲ್ಲಿ ಬಾದಾಮಿ ಮತ್ತು ಕಮಲದ (ಮಖಾನ) ಬೀಜಗಳಿಂದ ತಯಾರಿಸಿದ ಈ ಆರೋಗ್ಯಕರ ಮತ್ತು ರುಚಿಕರವಾದ ಖೀರ್ ಕೇವಲ ರುಚಿ ನೀಡುವುದಿಲ್ಲ. ಜೊತೆಗೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು.

ಬಾದಾಮ್ ಖೀರ್ ಮಾಡಲು ಬೇಕಾಗುವ ಪದಾರ್ಥಗಳು

• ಹಾಲು (ಪೂರ್ಣ ಕೆನೆ ಹಾಲು)
• ಮಖಾನ
• ಬಾದಾಮಿ
• ತುಪ್ಪ
• ರುಚಿಗೆ ತಕ್ಕಷ್ಟು ಸಕ್ಕರೆ
• ಕೇಸರಿ
• ಏಲಕ್ಕಿ ಪುಡಿ

Badam Kheer Recipe

ಬಾದಾಮ್ ಖೀರ್ ತಯಾರಿಸುವ ವಿಧಾನ

ಮೊದಲು, ಒಂದು ದಪ್ಪ ತಳದ ಬಾಣಲೆ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಈಗ ಮಖಾನಾ ಮತ್ತು ಬಾದಾಮಿಯನ್ನು ಹಾಕಿ. ಈಗ ಕಡಿಮೆ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ನಂತರ, ಕೆಳಗೆ ಇಳಿಸಿ, ಪಕ್ಕಕ್ಕೆ ಇಡಿ. ಇದಾದ ಮೇಲೆ, ಒಂದು ಅಡುಗೆ ಪಾತ್ರೆಗೆ ಹಾಲು ಮತ್ತು ಕೇಸರಿಯನ್ನು ಹಾಕಿ ಬಿಸಿ ಮಾಡಿ. ಹಾಲು ಕುದಿಯಲು ಪ್ರಾರಂಭಿಸಿದ ಬಳಿಕ, ಉರಿಯನ್ನು ಕಡಿಮೆ ಮಾಡಿ. ಹಾಲು ತಳ ಹಿಡಿಯದಂತೆ ಆಗಾಗ ಸೌಟಿನಿಂದ ಕಲಕಿ.

ಈಗ ಹಾಲಿಗೆ ಸಕ್ಕರೆ ಹಾಕಿ ಕರಗಲು ಬಿಡಿ. ಬಳಿಕ ಹುರಿದ ಮಖಾನಾ ಮತ್ತು ಬಾದಾಮಿ ಚೂರುಗಳನ್ನು ಹಾಕಿ. ಇದಾದ ಮೇಲೆ ಮಖಾನಾ ಮೃದುವಾಗುವವರೆಗೆ ಮತ್ತು ಹಾಲು ಸ್ವಲ್ಪ ದಪ್ಪವಾಗುವವರೆಗೆ ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ, ಏಲಕ್ಕಿ ಪುಡಿ ಸೇರಿಸಿ ಒಮ್ಮೆ ಕಲಕಿ, ಒಲೆ ಆಫ್ ಮಾಡಿ. ಇಷ್ಟು ಮಾಡಿದರೆ ಸಾಕು, ಬಿಸಿ ಬಿಸಿ ಬಾದಾಮಿ ಖೀರ್ ಸಿದ್ಧವಾಗುತ್ತದೆ. ಇದನ್ನು ಹುರಿದ ಮಖಾನಾಗಳು ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಬಹುದು. ಈ ಖೀರ್ ಅನ್ನು ಬಿಸಿ ಇರುವಾಗ ಅಥವಾ ತಣ್ಣಗಾದ ಮೇಲೆ ಸವಿಯಬಹುದು.

ಈ ಖೀರ್ ಸೇನೆಯ ಲಾಭಗಳು

ಮಖಾನ: ದೀರ್ಘಕಾಲ ಶಕ್ತಿ ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಾದಾಮಿ: ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಹೃದಯ ಆರೋಗ್ಯಕ್ಕೆ ಉತ್ತಮ.
ಹಾಲು: ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ.
ಕೇಸರಿ ಮತ್ತು ಏಲಕ್ಕಿ: ದೇಹವನ್ನು ಶಾಂತಗೊಳಿಸುತ್ತದೆ.

[ of 5 - Users]
Story first published: Friday, September 19, 2025, 9:36 [IST]
X
Desktop Bottom Promotion