Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್
ಅನ್ನದಿಂದ ತಯಾರಿಸುವ ವಿವಿಧ ಬಾತ್, ಬಿಸಿಬೇಳೆ ಬಾತ್, ಖಿಚಡಿ ಮೊದಲಾದ ಖಾದ್ಯಗಳನ್ನೇ ಸೇವಿಸಿ ನಿಮಗೆ ಬೇಜಾರಾಗಿರಬಹುದು. ಈ ನಿಟ್ಟಿನಲ್ಲಿ ಹೊಸರುಚಿಯಾಗಿ ಪ್ರಸ್ತುತಪಡಿಸಲ್ಪಡುತ್ತಿರುವ ಕೊತ್ತಂಬರಿ ರೈಸ್ ಬಾತ್ ನಿಮ್ಮ ನಾಲಿಗೆಗೆ ವಿಶಿಷ್ಟವಾದ ರುಚಿಯನ್ನು ನೀಡಲಿದೆ. ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಸಿದ್ಧಪಡಿಸಬಹುದು.
ಬೆಳಿಗೆ ಬೇಗನೇ ಉಪಾಹಾರ ಮುಗಿಸಿ ಆಫೀಸ್‌ಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗಂತೂ ಈ ವಿಧಾನ ಅತ್ಯುಪಯುಕ್ತವಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಮತ್ತು ರಾತ್ರಿಯೂಟದಲ್ಲಿಯೂ ಪ್ರಮುಖ ಖಾದ್ಯವನ್ನಾಗಿ ಬಡಿಸಬಹುದು.
ಇದರ ಉತ್ತಮ ಗುಣವೆಂದರೆ ಇದರಲ್ಲಿ ಬಳಸಲಾಗಿರುವ ಕೊತ್ತಂಬರಿ ಸೊಪ್ಪು. ಬೇರೆ
ಖಾದ್ಯದಲ್ಲಿ ಸಿಕ್ಕ ಕೊತ್ತಂಬರಿ ಸೊಪ್ಪನ್ನು ಮಕ್ಕಳು ಕೆಳಗೆಸೆಯುವುದು ಕಂಡುಬಂದರೆ
ಈ ಖಾದ್ಯದಲ್ಲಿ ಮಾತ್ರ ಕೊತ್ತಂಬರಿಯನ್ನು ಹೊಟ್ಟೆಗೆ ಕಳುಹಿಸುವುದನ್ನು
ಗಮನಿಸುತ್ತೀರಿ. ಈ ಖಾದ್ಯವನ್ನು ತಯಾರಿಸಲೇಬೇಕೆಂಬ ಬಯಕೆ ಮೂಡಿತೇ? ಕೆಳಗಿನ
ವಿಧಾನವನ್ನು ಗಮನಿಸಿ: ಹೂಕೋಸು ಮತ್ತು ಹಸಿ ಬಟಾಣಿ
ಬಾತ್
ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಅಕ್ಕಿ: ಅರ್ಧಕೇಜಿ (ಚೆನ್ನಾಗಿ ತೊಳೆದಿರಬೇಕು)
*ಕೊತ್ತಂಬರಿ ಸೊಪ್ಪು: ಒಂದು ದೊಡ್ಡ ಕಟ್ಟು (ಚಿಕ್ಕದಾದರೆ ಎರಡು ಕಟ್ಟು)-ಕೇವಲ
ಎಲೆಗಳನ್ನು ಆರಿಸಿ ದಂಟನ್ನು ನಿವಾರಿಸಿದ್ದು.
*ಈರುಳ್ಳಿ: ಎರಡು (ಮಧ್ಯಮ ಗಾತ್ರ, ನಾಲ್ಕು ತುಂಡು ಮಾಡಿದ್ದು)
*ಬೆಳ್ಳುಳ್ಳಿ: 4 ರಿಂದ 5 ಸಿಪ್ಪೆ ನಿವಾರಿಸಿ ಜಜ್ಜಿದ್ದು
*ಹಸಿಮೆಣಸು: 4 ರಿಂದ 5
*ದಾಲ್ಚಿನ್ನಿ ಎಲೆ: 2
*ಏಲಕ್ಕಿ: 2-3
*ಚೆಕ್ಕ : ಸುಮಾರು ಒಂದಿಂಚಿನ ತುಂಡು
*ಲವಂಗ : 2-3
*ಸಾಸಿವೆ: 1 ದೊಡ್ಡ ಚಮಚ
*ಬೇವಿನ ಎಲೆ : 5 ರಿಂದ 8
*ಕಾಯಿ ತುರಿ: 1 ಚಿಕ್ಕ ಕಪ್ (ಅಥವಾ ಅರ್ಧ ಹೋಳಿನ ತುರಿ)
*ಅಡುಗೆ ಎಣ್ಣೆ: 3 ದೊಡ್ಡ ಚಮಚ
*ಉಪ್ಪು : ರುಚಿಗನುಸಾರ ಕೊತ್ತಂಬರಿ ಪುಡಿಯಲ್ಲಿರುವ
ಪ್ರಯೋಜನಗಳು
ವಿಧಾನ:
*) ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿ ಮತ್ತು ಸಾಕಷ್ಟು ನೀರು ಹಾಕಿ ಮೂರು ಸೀಟಿ
ಬರುವವರೆಗೆ ಕುದಿಸಿ. ಬಳಿಕ ತಕ್ಷಣ ಸೀಟಿಯನ್ನು ಸುರಿಯುವ ತಣ್ಣೀರಿನಡಿ ಇಟ್ಟು
ತಣಿಸಿ ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು ಅಕ್ಕಿಯನ್ನು ಬೇರೆ ಪಾತ್ರೆಗೆ
ವರ್ಗಾಯಿಸಿ. ಇದು ಸುಮಾರು ತೊಂಬತ್ತು ಶೇಖಡಾ ಬೆಂದಿರಬೇಕು.
*) ಮಿಕ್ಸಿಯಲ್ಲಿ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಎಲೆಗಳು, ದಾಲ್ಚಿನ್ನಿ ಎಲೆ,
ಏಲಕ್ಕಿ, ದಾಲ್ಚಿನ್ನಿ, ಕಾಯಿತುರಿ ಹಾಕಿ ಒಣಗಿರುವಂತೆಯೇ ಅರೆಯಿರಿ. ನೀರು
ಸೇರಿಸಬೇಡಿ, ಒಣದಾಗಿಯೇ ಇರಲಿ. (ನೀರು ಸೇರಿಸಿದರೆ ರುಚಿ ಕೆಡುತ್ತದೆ)
*) ಒಂದು ದಪ್ಪತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,
ಬೇವಿನ ಎಲೆ ಹಾಕಿ ತಿರುವಿ.
*) ಎರಡು ನಿಮಿಷದ ಬಳಿಕ ಅರೆದ ಮಸಾಲೆಯನ್ನು ಹಾಕಿ ತಿರುವುದನ್ನು
ಮುಂದುವರೆಸಿ.
*) ಮಸಾಲೆ ಚೆನ್ನಾಗಿ ಬೆಂದ ಬಳಿಕ (ಮಸಾಲೆಯಿಂದ ಎಣ್ಣೆ ಹೊರಹರಿಯಲು ಪ್ರಾರಂಭವಾದ
ಬಳಿಕ) ಬೇಯಿಸಿದ್ದ ಅಕ್ಕಿಯನ್ನು ಹಾಕಿ ತಿರುವಿ. ಉಪ್ಪು ಹಾಕಿ ಕೊಂಚ ಕಾಲ
ತಿರುವುದನ್ನು ಮುಂದುವರೆಸಿ. ಬಳಿಕ ಸ್ಟವ್ ಆರಿಸಿ ಒಂದೆರಡು ನಿಮಿಷ ಮುಚ್ಚಳ
ಮುಚ್ಚಿಡಿ.
*) ಬಿಸಿಬಿಸಿ ಇದ್ದಂತೆಯೇ ಬಡಿಸಿ.
ಸಲಹೆ:
*) ಕೊತ್ತಂಬರಿ ಸೊಪ್ಪನ್ನು ತಿನ್ನದೇ ಕೆಳಗೆ ಎಸೆಯುವವರಿಗೆ ಈ ಖಾದ್ಯ ಹೇಳಿ
ಮಾಡಿಸಿದ ಆಹಾರವಾಗಿದೆ.
*) ಹೆಚ್ಚಿನ ರುಚಿಗೆ, ಕೊಂಚ ದಾಳಿಂಬೆ ಕಾಳುಗಳನ್ನು ಬಡಿಸುವ ಹೊತ್ತಿನಲ್ಲಿ ಮೇಲೆ
ಸಿಂಪಡಿಸಬಹುದು
*) ರಾತ್ರಿಯೂಟಕ್ಕೆ ಮೊಸರಿನೊಂದಿಗೂ ಸೇವಿಸಬಹುದು.
*) ಒಂದು ವೇಳೆ ಹೆಚ್ಚಿನ ಪ್ರಮಾಣ ಉಳಿದರೆ ಸಂಜೆ ಅಥವಾ ಮುಂದಿನ ಹೊತ್ತಿಗೆ
ಸೇವಿಸುವುದಾದರೆ ಕೊಂಚವೇ ಎಣ್ಣೆಯೊಂದಿಗೆ ಬಿಸಿಮಾಡಿ ಸ್ವಲ್ಪ ಖಾರ ಶ್ಯಾವಿಗೆ
(ಅಥವಾ ಖಾರಾ ಸೇವು) ಸೇರಿಸಿ ತಿಂದರೆ ಗರಿಗರಿಯಾದ ರುಚಿ ಸಿಗುತ್ತದೆ.
*) ದೊಡ್ಡಗಾತ್ರದ ಶೇಂಗಾಬೀಜಗಳನ್ನು ಬಳಸುವುದಾದರೆ ಎಣ್ಣೆಯನ್ನು ಬಿಸಿಮಾಡಿ
ಸಾಸಿವೆ ಸಿಡಿಸುವ ಮೊದಲು ಹಾಕಿ ಕೊಂಚ ಕೆಂಪಗಾದ ಬಳಿಕ ಸಾಸಿವೆ ಸಿಡಿಸಿ. ಈ
ವಿಧಾನವನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.



Click it and Unblock the Notifications