Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಅಣಬೆ ಹಾಕಿ ಮಾಡುವ ಮೀನಿನ ಸಾರು ಸೂಪರ್ ಟೇಸ್ಟ್ ಕಣ್ರೀ...
ನೀವು ಮೀನಿನ ಸಾರು ಹಲವು ಬಗೆಯಲ್ಲಿ ಟ್ರೈ ಮಾಡಿರುತ್ತೀರ, ಇನ್ನು ಅಣಬೆ ಕೂಡ ಪನ್ನೀರ್, ಬಟಾಣಿ ಹೀಗೆ ಬೇರೆ-ಬೇರೆ ಕಾಂಬಿನೇಷನ್ ಜೊತೆ ಟ್ರೈ ಮಾಡಿರುತ್ತೀರಿ, ಆದರೆ ಎಂದಾದರೂ ಮೀನು ಮತ್ತು ಅಣಬೆ ಹಾಕಿ ಮೀನಿನ ಸಾರು ಟ್ರೈ ಮಾಡಿದ್ದೀರಾ? ಇಲ್ಲಾ ಅಂದರೆ ಟ್ರೈ ಮಾಡಲು ಖಂಡಿತ ಮಿಸ್ ಮಾಡಬೇಡಿ. ತುಂಬಾ ರುಚಿಯಾಗಿರುತ್ತೆ ಈ ಕಾಂಬಿನೇಷನ್ ಸಾರು.

ನಾವಿಲ್ಲಿ ಮೀನು ಮತ್ತು ಅಣಬೆ ಹಾಕಿ ಮಾಡುವ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Curry
Serves: 4
-
ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
200 ಗ್ರಾಂ ಮಶ್ರೂಮ್ (ಅಣಬೆ)
500ಗ್ರಾಂ ಚರ್ಮ ಸುಲಿದ, ಮುಳ್ಳು ಕಡಿಮೆ ಇರುವ ಮೀನು
ಕರಿಬೇವು
ಈರುಳ್ಳಿ 1-2
ಟೊಮೆಟೊ 2
ಬೆಳ್ಳುಳ್ಳಿ 4-5 ಎಸಳು
ಖಾರದ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಶುಂಠಿ(ಒಂದು ಇಂಚಿನಷ್ಟು ದೊಡ್ಡದು)
ಹುಣಸೆ ಹಣ್ಣು (ದೊಡ್ಡ ನಿಂಬೆ ಹಣ್ಣುನ ಗಾತ್ರದಷ್ಟು)
ಕ್ಯಾಪ್ಸಿಕಂ 1
ತೆಂಗಿನಕಾಯಿ ಹಾಲು 1 ಕಪ್
ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ
* ದಪ್ಪ ತಳವಿರುವ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ ಚಟ್ಪಟ್ ಶಬ್ದ ಬಂದ ಮೇಲೆ ಕರಿಬೇವು , ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಟಿಕಂ ಹಾಕಿ ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಖಾರದ ಪುಡಿ, ಕೊತ್ತಂಬರಿ ಒಉಡಿ, ಅರಿಶಿಣ ಪುಡಿ ಹಾಕಿ ಎಣ್ಣೆ ಮಸಾಲೆಯಿಂದ ಬಿಟ್ಟು ಮೇಲ್ಭಾಗದಲ್ಲಿ ಬರುವಷ್ಟು ಹೊತ್ತು ಫ್ರೈ ಮಾಡಿ.
* ಈಗ ಅಣಬೆ ಹಾಕಿ ಒಮ್ಮೆ ಮಿಶ್ರಣ ಮಾಡಿ 5 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ನಂತರ ತೆಂಗಿನಕಾಯಿ ಹಾಲು ಹಾಕಿ.
* ನಂತರ ಉಪ್ಪು ಸೇರಿಸಿ, ಹುಣಸೆ ಹಣ್ಣಿನ ರಸ ಹಿಂಡಿ ಮಿಶ್ರಣವನ್ನು ಕುದಿಸಿ.
* ಮಿಶ್ರಣ ಕುದಿ ಬಂದ ಮೇಲೆ ಮೀನನ್ನು ಹಾಕಿ 10 ನಿಮಿಷ ಬೇಯಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿದರೆ ಅಣಬೆ-ಮೀನಿನ ಸಾರು ರೆಡಿ.
(ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು)
ಇದನ್ನು ಬಿಸಿ ಬಿಸಿ ಅನ್ನದ ತಿನ್ನಲು ತುಂಬಾ ರುಚಿಯಾಗಿರುತ್ತದೆ.
- ತೆಂಗಿನಕಾಯಿ ಹಾಲು, ಅಣಬೆಯ ರುಚಿ ಜೊತೆ ಮೀನು ಇವು ಮೂರು ಸೇರಿದರೆ ಅದರ ಗ್ರೇವಿಯ ರುಚಿ ಇದೆಯೆಲ್ಲಾ ಸೂಪರ್ ಆಗಿರುತ್ತೆ.
- ಕೊಬ್ಬು - 11ಗ್ರಾಂ
- ಕಾರ್ಬ್ಸ್ - 15ಗ್ರಾಂ
- ನಾರಿನಂಶ - 1ಗ್ರಾಂ



Click it and Unblock the Notifications
