For Quick Alerts
ALLOW NOTIFICATIONS  
For Daily Alerts

ಮಶ್ರೂಮ್‌-ಕ್ಯಾಪ್ಸಿಕಂ ಹಾಟ್‌ ಅಂಡ್ ಸೋರ್ ಸೂಪ್ ರೆಸಿಪಿ

Posted By: Shreeraksha
|

ಸೂಪ್, ಹೆಸರು ಕೇಳುವಾಗಲೇ ಬಾಯಲ್ಲಿ ನೀರು ಬರುತ್ತದೆ. ಚುಮುಚುಮು ಚಳಿಯಲ್ಲಿ ಸಂಜೆ ವೇಳೆಯಲ್ಲಿ ಬಿಸಿ-ಬಿಸಿ, ಸ್ಪೆಸಿ ಸೂಪ್ ಕುಡೀತಾ ಇದ್ರೆ, ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗುವುದು ಸಹಜ. ಒಂದು ಕಡೆ ಸ್ಲೋ ಮ್ಯೂಸಿಕ್, ಇನ್ನೊಂದು ಕಡೆ ಬಿಸಿ ಸೂಪ್. ಎರಡು ಕಾಂಬಿನೇಷನ್ ಅಂತೂ ತಲೆಲಿರೋ ಎಲ್ಲಾ ಒತ್ತಡವನ್ನ ಒಂದು ಘಳಿಗೆ ದೂರಮಾಡಿ ಮನಸಿಗೂ ನಾಲಗೆಗೂ ಖುಷಿ ನೀಡುತ್ತದೆ.

Mushroom Capsicum hot and sour Soup recipe

ಆದರೆ ಈ ಸೂಪ್ ತಯಾರಿಸೋದು ಬಹಳ ಕಷ್ಠಕರ ಎಂಬುದು ಕೆಲವ ಮನಸ್ಸಲ್ಲಿದೆ. ಹೊರಗಡೆ ಆಹಾರ ಇಷ್ಟಪಡದ ವ್ಯಕ್ತಿಗಳು ಈ ಸೂಪ್ ಸವಿಯನ್ನು ಮಿಸ್ ಮಾಡ್ಕೋತಿದ್ದಾರೆ. ಅಂಥವರು ಬೇಜಾರು ಮಾಡಿಕೊಳ್ಳುವ ಅವಶ್ಯಕೆಯಿಲ್ಲ. ಮುಂದೆ ನೀಡಿರುವ ಮಾಹಿತಿ ನೋಡಿ, ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಹಾಟ್ ಆಂಡ್ ಸೂರ್ ಸೂಪ್ ತಯಾರಿಸಿ, ಆನಂದಿಸಿ.

Mushroom Capsicum hot ಮಶ್ರೂಮ್‌-ಕ್ಯಾಪ್ಸಿಕಂ ಹಾಟ್‌ ಅಂಡ್ ಸೋರ್ ಸೂಪ್ ರೆಸಿಪಿand sour Soup recipe,
Mushroom Capsicum hot ಮಶ್ರೂಮ್‌-ಕ್ಯಾಪ್ಸಿಕಂ ಹಾಟ್‌ ಅಂಡ್ ಸೋರ್ ಸೂಪ್ ರೆಸಿಪಿand sour Soup recipe,
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Soup

Serves: 4

Ingredients
  • ಬೇಕಾಗುವ ಸಾಮಾಗ್ರಿಗಳು:

    2 ಟೇಬಲ್ ಸ್ಪೂನ್ ಎಣ್ಣೆ

    2 ಎಸಳು ಬೆಳ್ಳುಳ್ಳಿ, ನುಣ್ಣಗೆ ಕತ್ತರಿಸಿ

    1 ಸಣ್ಣ ಶುಂಠಿ, ನುಣ್ಣಗೆ ಕತ್ತರಿಸಿ

    1 ಮೆಣಸಿನಕಾಯಿ, ನುಣ್ಣಗೆ ಕತ್ತರಿಸಿ

    2 ಟೇಬಲ್ ಸ್ಪೂನ್ ಎಳಸು ಈರುಳ್ಳಿ, ಕತ್ತರಿಸಿದ

    1 ಕ್ಯಾರೆಟ್, ನುಣ್ಣಗೆ ಕತ್ತರಿಸಿ

    3 ಟೇಬಲ್ಸ್ಪೂನ್ ಎಲೆಕೋಸು, ನುಣ್ಣಗೆ ಕತ್ತರಿಸಿ

    1 ಕ್ಯಾಪ್ಸಿಕಂ, ನುಣ್ಣಗೆ ಕತ್ತರಿಸಿ

    5 ಬೀನ್ಸ್, ನುಣ್ಣಗೆ ಕತ್ತರಿಸಿ

    4 ಕಪ್ ನೀರು

    2 ಟೇಬಲ್ ಸ್ಪೂನ್ ಸೋಯಾ ಸಾಸ್

    2 ಟೇಬಲ್ ಸ್ಪೂನ್ ವಿನೆಗರ್

    1 ಟೀ ಸ್ಪೂನ್ ಮೆಣಸಿನಕಾಯಿ ಸಾಸ್

    ಟೀಸ್ಪೂನ್ ಮೆಣಸು ಪುಡಿ

    ಟೀಸ್ಪೂನ್ ಸಕ್ಕರೆ

    ಟೀಸ್ಪೂನ್ ಉಪ್ಪು

    ಕಾರ್ನ್ ಹಿಟ್ಟು ತಿಳಿನೀರಿಗಾಗಿ:

    2 ಟೇಬಲ್ ಸ್ಪೂನ್ ಕಾರ್ನ್ ಹಿಟ್ಟು

    ¼ ಕಪ್ ನೀರು

Red Rice Kanda Poha
How to Prepare
  • ಮಾಡುವ ವಿಧಾನ:

    * ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 2 ಲವಂಗ, ಬೆಳ್ಳುಳ್ಳಿ, ಶುಂಠಿ ಮತ್ತು 1 ಮೆಣಸಿನಕಾಯಿಂ, 2 ಟೀಸ್ಪೂನ್ ಸ್ಪ್ರಿಂಗ್ ಆನಿಯನ್ ಸೇರಿಸಿ ಮತ್ತು ಮೃದುವಾಗುವವರೆಗೆ ಫ್ರೈ ಮಾಡಿ.

    * ಮುಂದೆ, 1 ಕ್ಯಾರೆಟ್, 3 ಟೀಸ್ಪೂನ್ ಎಲೆಕೋಸು, ಕ್ಯಾಪ್ಸಿಕಂ ಮತ್ತು 5 ಬೀನ್ಸ್ ಸೇರಿಸಿ ಮತ್ತೆ 2 ನಿಮಿಷಗಳ ಕಾಲ ಅಥವಾ ತರಕಾರಿಗಳು ಅರ್ಧ ಬೇಯಿಯುವರೆಗೆ ಫ್ರೈ ಮಾಡಿ. ಬಳಿಕ ಆ ಮಿಶ್ರಣಕ್ಕೆ 4 ಕಪ್ ನೀರು ಸೇರಿಸಿ 3 ನಿಮಿಷ ಕುದಿಸಿ.

    * ಕುದಿಬಂದ ಬಳಿಕ 2 ಟೀಸ್ಪೂನ್ ಸೋಯಾ ಸಾಸ್, 2 ಟೀಸ್ಪೂನ್ ವಿನೆಗರ್ ಮತ್ತು 1 ಟೀಸ್ಪೂನ್ ಮೆಣಸಿನಕಾಯಿ ಸಾಸ್ ಸೇರಿಸಿ.

    * ಅರ್ಧ ಟೀಸ್ಪೂನ್ ಮೆಣಸು ಪುಡಿ, ಅರ್ಧ ಟೀಸ್ಪೂನ್ ಸಕ್ಕರೆ ಮತ್ತು ಅರ್ಧ ಟೀಸ್ಪೂನ್ ಉಪ್ಪು ಸೇರಿಸಿ ಸ್ವಲ್ಪ ಕುದಿಯಲು ಬಿಡಿ.

    * ಈಗ ಕಾಲು ಕಪ್ ನೀರಿಗೆ 2 ಟೀಸ್ಪೂನ್ ಕಾರ್ನ್‌ಫ್ಲೋರ್‌ (ಜೋಳದ ಹಿಟ್ಟು) ಬೆರೆಸಿ ಕಾರ್ನ್‌ಫ್ಲೋರ್‌ ತಿಳಿ ನೀರನ್ನು ತಯಾರಿಸಿ. ಆ ತಿಳಿ ನೀರನ್ನು ಸೂಪ್ಗೆ ಸುರಿಯಿರಿ.

    * ಚೆನ್ನಾಗಿ ಮಿಶ್ರಣ ಮಾಡಿ. 2 ನಿಮಿಷ ಕುದಿಸಿ. ಅದನ್ನು ಸೂಪ್ ಸ್ವಲ್ಪ ಗಟ್ಟಿಯಾಗುವವರೆಗೆ ಮುಂದುವರಿಸಿ.

    * ಕೊನೆಯದಾಗಿ 2 ಟೀಸ್ಪೂನ್ ಸ್ಪ್ರಿಂಗ್ ಸೇರಿಸಿದರೆ ಹಾಟ್ ಎಂಡ್ ಸೋರ್ ಸೂಪ್ ಸವಿಯಲು ಸಿದ್ಧ.

Instructions
  • ನಿಮಗ ಇಷ್ಟವಾದ ತರಕಾರಿ ಸೇರಿಸಬಹುದು.
Nutritional Information
[ 4.5 of 5 - 56 Users]
X
Desktop Bottom Promotion