Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಿ ಚಪ್ಪರಿಸಿ ಸವಿಯುವ ಅನಾನಸ್ ಕೇಸರಿ ಬಾತ್ ಇಲ್ಲಿದೆ..! ಮಾಡೋದು ಹೇಗೆ ಗೊತ್ತಾ?
ಅನಾನಸ್ ಹಣ್ಣಿನಲ್ಲಿ ಅದೆಷ್ಟು ಆರೋಗ್ಯಕರ ಅಂಶಗಳಿವೆ ಎಂದರೆ ನೀವು ಊಹಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ವಿಟಮಿನ್ಗಳ ರಾಶಿಯೇ ಅನಾನಸ್ ಹಣ್ಣಿನಲ್ಲಿ ಅಡಗಿದೆ. ಅನಾನಸ್ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅನಾನಸ್ನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇನ್ನು ನೀವೇನಾದರು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಅನಾನಸ್
ಇದ್ದರೆ ಬಹಳಷ್ಟು ಪ್ರಯೋಜನವಿದೆ.
ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವ ಅನಾನಸ್ನಿಂದ ರುಚಿಕರವಾದ
ಕೇಸರಿ ಬಾತ್ ಅನ್ನ ಮನೆಯಲ್ಲೇ ಮಾಡಬಹುದು.
ಹೌದು ಒಂದು ಅನಾನಸ್ ಹಣ್ಣು ಇದ್ದರೆ ಅದರಿಂದ ಬಾತ್ ಮಾಡಬಹುದು. ಅದನ್ನು ಅನಾನಸ್ ಕೇಸರಿ ಬಾತ್ ಅಂತಲೂ ಕರೆಯುತ್ತಾರೆ. ಬಹಳ ಸುಲಭವಾಗಿ ಈ ಖಾದ್ಯ ಮಾಡಬಹುದಾಗಿದ್ದು, ನೈಸರ್ಗಿಕವಾಗಿ ರುಚಿ ಇರುವ ಕಾಣರದಿಂದ ಬಾಯಿ ಚಪ್ಪರಿಸಿ ಇದನ್ನು ಸೇವಿಸಬಹುದು.

ಹಾಗಾದರೆ ಅನಾನಸ್ ಹಣ್ಣಿನ ಕೇಸರಿ ಬಾತ್ ಮಾಡುವುದು ಹೇಗೆ?, ಈ ರೆಸಿಪಿ ಮಾಡಲು ಬೇಕಾಗುವ ವಸ್ತುಗಳೇನು? ಯಾವೆಲ್ಲಾ ವಿಧಾನ ಪಾಲಿಸಬೇಕು ಎಂಬ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಅಗತ್ಯವಿರುವ ವಸ್ತುಗಳು:
- ಅನಾನಸ್ ಹಣ್ಣು-1
- ರವೆ - 1 ಕಪ್
- ಸಕ್ಕರೆ - ಅಗತ್ಯವಿರುವಂತೆ
- ತುಪ್ಪ - 1/2 ಕಪ್
- ಗೋಡಂಬಿ - 10-15
- ಒಣದ್ರಾಕ್ಷಿ - 10 - 15
- ಏಲಕ್ಕಿ - 1/2 ಸಮಚ
- ಅಳತೆ ಮಾಡಿಟ್ಟುಕೊಳ್ಳಬೇಕಾದ ನೀರು
ಪಾಕವಿಧಾನ:
ಮೊದಲಿಗೆ, ಅನಾನಸ್ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಬಳಿಕ ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಆದರೆ ಈ ರೀತಿ ರುಬ್ಬಿಕೊಳ್ಳುವ ವೇಳೆ ನೀರು ಹಾಕಬಾರದು, ಅನಾನಸ್ ನೀರು ಬಿಟ್ಟುಕೊಳ್ಳುವುದರಿಂದ ಹಾಗೆಯೆ ಮಿಕ್ಸ್ ಮಾಡಿಕೊಳ್ಳಿ.
ಮುಂದೆ ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಡಂಬಿ ಮತ್ತು
ಒಣದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ಪಕ್ಕಕ್ಕೆ ಇಡಿ. ನಂತರ ಅದೇ ತುಪ್ಪಕ್ಕೆ
ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಚೆನ್ನಾಗಿ ಹುರಿದ ನಂತರ ಅದಕ್ಕೆ ರುಬ್ಬಿದ
ಪೈನಾಪಲ್ ಹಾಕಿ ಚೆನ್ನಾಗಿ ಕಲಸಿ.
ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಕಿ ಸಿಹಿಗೆ ತಕ್ಕಂತೆ ಸಕ್ಕರೆ
ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ರವೆಯೊಂದಿಗೆ ಸಕ್ಕರೆ ಚೆನ್ನಾಗಿ ಮಿಶ್ರಣವಾದ ನಂತರ, ಪುಡಿಮಾಡಿದ ಏಲಕ್ಕಿ ಸೇರಿಸಿ ಮತ್ತು ಬೆರೆಸಿ.ನಂತರ ಹುರಿದ ಗೋಡಂಬಿ, ಒಣ ದ್ರಾಕ್ಷಿ ಮತ್ತು ಉಳಿದ ಸಣ್ಣಗೆ ಹೆಚ್ಚಿದ ಅನಾನಸ್ ಹಾಕಿ ಚೆನ್ನಾಗಿ ಕಲಸಿ ಕೊನೆಗೆ ಸ್ವಲ್ಪ ತುಪ್ಪ ಹಾಕಿ ಕಲಕಿದರೆ ರುಚಿಕರವಾದ 'ಅನಾನಸ್ ಕೇಸರಿ ಬಾತ್ ರೆಡಿ...



Click it and Unblock the Notifications
