Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಗುಜರಾತಿ ಶೈಲಿಯ ಖಾಂಡ್ವಿ ರೆಸಿಪಿ
ಖಾಂಡ್ವಿ ಗುಜರಾತಿ ಫೇಮಸ್ ಸ್ನ್ಯಾಕ್ಸ್ ಆಗಿದೆ. ಇದನ್ನು ಕಡಲೆ ಹಿಟ್ಟು ಹಾಕಿ ತಯಾರಿಸಬಹುದು, ಇಲ್ಲಾ ಹೆಸರು ಬೇಳೆ ಬಳಸಿ ತಯಾರಿಸಬಹುದು. ಇಲ್ಲಿ ನಾವು ಹೆಸರು ಬೇಳೆ ಬಳಸಿ ಮಾಡುವ ಖಾಂಡ್ವಿ ರೆಸಿಪಿ ನೀಡಿದ್ದೇವೆ.

ಇದು ತುಂಬಾ ರುಚಿಕರವಾದ ಸ್ನ್ಯಾಕ್ಸ್ ಆಗಿದ್ದು, ಸಂಜೆಗೆ ಸವಿಯಲು ಆರೋಗ್ಯಕರವಾದ ಸ್ನ್ಯಾಕ್ಸ್ ಆಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಹೆಸರು ಬೇಳೆ 1 ಕಪ್
ಮೊಸರು ಅರ್ಧ ಲೀ.
ನೀರು 1 ಕಪ್
ರುಚಿಗೆ ತಕ್ಕ ಉಪ್ಪು
ಅರ್ಧ ಚಮಚ ಅರಿಶಿಣ ಪುಡಿ
1/4 ಚಮಚ ಇಂಗು
ಎಣ್ಣೆ 3 ಚಮಚ
ಸಾಸಿವೆ 1 ಚಮಚ
ಕರಿಬೇವು 5-6
ಕೊತ್ತಂಬರಿ ಸೊಪ್ಪು 4 ಚಮಚ
ತೆಂಗಿನಕಾಯಿ ತುರಿ 4 ಚಮಚ
-
ಮಾಡುವುದು ಹೇಗೆ?
* ಮೊಸರನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ ಚೆನ್ನಾಗಿ ಕದಡಿ.
* ಹೆಸರುಬೇಳೆ ನೀರಿನಲ್ಲಿ ಒಮದು ತಾಸು ನೆನೆ ಹಾಕಿ.
* ಈಗ ಅರಿಶಿಣ ಪುಡಿ, ಇಂಗು, ರುಚಿಗೆ ತಕ್ಕ ಉಪ್ಪು ಹಾಕಿ.
*ಈಗ ಕಡಲೆಹಿಟ್ಟು, ನೀರು ಹಾಕಿ ಗಂಟು ಕಟ್ಟದಂತೆ ಚೆನ್ನಾಗಿ ಕಲೆಸಿ
* ಈಗ ಕಡಾಯಿ ಬಿಸಿ ಮಾಡಿ ಸ್ಟೌವ್ ಅನ್ನು ಸಾಧಾರಣ ಉರಿಯಲ್ಲಿ ಇಟ್ಟು ಅದಕ್ಕೆ ಹಿಟ್ಟನ್ನು ಸುರಿಯಿರಿ.
* ಹಿಟ್ಟು ಗಂಟು ಕಟ್ಟದಂತೆ ಕಲೆಸುತ್ತಾ ಇರಿ. ಮಿಶ್ರಣ ಮಂದವಾದ ಮೇಲೆ ಉರಿಯಿಂದ ಇಳಿಸಿ.
* ಇದೇ ಸಮಯಕ್ಕೆ ಪ್ಲೇಟ್ ಮಗುಚಿ ಹಾಕಿ ಅದರಲ್ಲಿ ಎಣ್ಣೆ ಸವರಿ ಅದರ ಮೇಲೆ ಹಿಟ್ಟು ಅಗಲ ಬಾಯಿಯ ಸೌಟ್ (ದೋಸೆ ಮಗುಚಿ ಹಾಕಲು ಬಳಸುವ ಸೌಟ್)ನಿಂದ ಹಿಟ್ಟು ತೆಗೆದು ಸವರಿ 5 ನಿಮಿಷ ತಣ್ಣಗಾಗಲು ಬಿಡಿ.
* ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನಕಾಯಿ ತುರಿ ಉದುರಿಸಿ.
* ಕಟ್ ಮಾಡಿ ರೋಲ್ ಮಾಡಿ ಪ್ಲೇಟ್‌ನಲ್ಲಿ ಇಡಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಸಾಸಿವೆ ಹಾಕಿ ಅದು ಚಟ್‌ಪಟ್ ಶಬ್ದ ಬರುವಾಗ ಕರಿಬೇವು ಹಾಕಿ ಈ ಮಿಶ್ರಣಕ್ಕೆ ರೋಲ್ ಮಾಡಿಟ್ಟ ಖಾಂಡ್ವಿ ಹಾಕಿ ಮಿಕ್ಸ್ ಮಾಡಿದರೆ ಗುಜರಾತಿಯ ಪ್ರಸಿದ್ಧ ಖಾಂಡ್ವಿ ಸ್ನ್ಯಾಕ್ಸ್ ರೆಡಿ.
- ನೀವು ಬೇಕಾದರೆ ಹೆಸರು ಬೇಳೆ ಬದಲಿಗೆ ಕಡಲೆ ಹಿಟ್ಟು ಬಳಸಿಯೂ ಮಾಡಬಹುದು
- ಸರ್ವ್ -
- ಕ್ಯಾಲೋರಿ - 283 ಕ್ಯಾ
- ಕೊಬ್ಬು - 13 ಗ್ರಾಂ
- ಪ್ರೊಟೀನ್ - 10 ಗ್ರಾಂ
- ಕಾರ್ಬ್ಸ್ - 27 ಗ್ರಾಂ
ಮಾಡುವುದು ಹೇಗೆ?
* ಮೊಸರನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ ಚೆನ್ನಾಗಿ ಕದಡಿ.

* ಹೆಸರುಬೇಳೆ ನೀರಿನಲ್ಲಿ ಒಮದು ತಾಸು ನೆನೆ ಹಾಕಿ.

* ಈಗ ಅರಿಶಿಣ ಪುಡಿ, ಇಂಗು, ರುಚಿಗೆ ತಕ್ಕ ಉಪ್ಪು
ಹಾಕಿ.

*ಈಗ ಕಡಲೆಹಿಟ್ಟು, ನೀರು ಹಾಕಿ ಗಂಟು ಕಟ್ಟದಂತೆ ಚೆನ್ನಾಗಿ
ಕಲೆಸಿ

* ಈಗ ಕಡಾಯಿ ಬಿಸಿ ಮಾಡಿ ಸ್ಟೌವ್ ಅನ್ನು ಸಾಧಾರಣ ಉರಿಯಲ್ಲಿ ಇಟ್ಟು
ಅದಕ್ಕೆ ಹಿಟ್ಟನ್ನು ಸುರಿಯಿರಿ.

* ಹಿಟ್ಟು ಗಂಟು ಕಟ್ಟದಂತೆ ಕಲೆಸುತ್ತಾ ಇರಿ. ಮಿಶ್ರಣ ಮಂದವಾದ ಮೇಲೆ
ಉರಿಯಿಂದ ಇಳಿಸಿ.

* ಇದೇ ಸಮಯಕ್ಕೆ ಪ್ಲೇಟ್ ಮಗುಚಿ ಹಾಕಿ ಅದರಲ್ಲಿ ಎಣ್ಣೆ ಸವರಿ ಅದರ
ಮೇಲೆ ಹಿಟ್ಟು ಅಗಲ ಬಾಯಿಯ ಸೌಟ್ (ದೋಸೆ ಮಗುಚಿ ಹಾಕಲು ಬಳಸುವ ಸೌಟ್)ನಿಂದ ಹಿಟ್ಟು
ತೆಗೆದು ಸವರಿ 5 ನಿಮಿಷ ತಣ್ಣಗಾಗಲು ಬಿಡಿ.

* ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನಕಾಯಿ ತುರಿ
ಉದುರಿಸಿ.

* ಕಟ್ ಮಾಡಿ ರೋಲ್ ಮಾಡಿ ಪ್ಲೇಟ್‌ನಲ್ಲಿ ಇಡಿ.

* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಸಾಸಿವೆ ಹಾಕಿ ಅದು ಚಟ್‌ಪಟ್ ಶಬ್ದ ಬರುವಾಗ ಕರಿಬೇವು ಹಾಕಿ .

ಈ ಮಿಶ್ರಣಕ್ಕೆ ರೋಲ್ ಮಾಡಿಟ್ಟ ಖಾಂಡ್ವಿ ಹಾಕಿ ಮಿಕ್ಸ್ ಮಾಡಿದರೆ
ಗುಜರಾತಿಯ ಪ್ರಸಿದ್ಧ ಖಾಂಡ್ವಿ ಸ್ನ್ಯಾಕ್ಸ್ ರೆಡಿ.




Click it and Unblock the Notifications