For Quick Alerts
ALLOW NOTIFICATIONS  
For Daily Alerts

ಆಹಾ! ಎಷ್ಟೊಂದು ರುಚಿ ಈ ಹೆಸರುಬೇಳೆ ಪಕೋಡ

Posted By:
|

ಹೆಸರು ಬೇಳೆಯಿಂದ ಏನೇ ಮಾಡಲಿ ಅದು ರುಚಿಕರವಾಗಿರುತ್ತದೆ, ಹೆಸರು ಬೇಳೆಯ ಸ್ಪೆಷಾಲಿಟಿಯೇ ಹಾಗೇ. ಇದರಿಂದ ಮಾಡುವ ಪಾಯಸ, ಸ್ನ್ಯಾಕ್ಸ್ ಎಲ್ಲವೂ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇಲ್ಲಿ ನಾವು ಹೆಸರು ಬೇಳೆ ಬಳಸಿ ಮಾಡುವ ಪಕೋಡ ರೆಸಿಪಿ ನೀಡಿದ್ದೇವೆ. ಮನೆಯಲ್ಲಿ ಚಿಕ್ಕವರು ಇರಲಿ, ದೊಡ್ಡವರು ಇರಲಿ ಎಲ್ಲರಿಗೂ ಈ ಪಕೋಡ ತುಂಬಾ ಇಷ್ಟವಾಗುವುದು.

Moong Dal Pakoda recipe

ಇಲ್ಲಿ ಪಕೋಡ ಮಾಡುವ ಸರಳ ವಿಧಾನ ಹೇಳಿದ್ದೇವೆ. ಈ ಪಕೋಡ ರುಚಿ ಖಂಡಿತ ನಿಮಗೆ ಇಷ್ಟವಾಗುವುದು, ಇನ್ನೇಕೆ ತಡ ಟ್ರೈ ಮಾಡಿ.

Moong Dal Pakoda Recipe, ಆಹಾ! ಎಷ್ಟೊಂದು ರುಚಿ ಈ ಹೆಸರು ಬೇಳೆ ಪಕೋಡ
Moong Dal Pakoda Recipe, ಆಹಾ! ಎಷ್ಟೊಂದು ರುಚಿ ಈ ಹೆಸರು ಬೇಳೆ ಪಕೋಡ
Prep Time
15 Mins
Cook Time
15M
Total Time
30 Mins

Recipe By: Reena TK

Recipe Type: Veg Snacks

Serves: 3

Ingredients
  • ಬೇಕಾಗುವ ಸಾಮಗ್ರಿ

    ಹೆಸರು ಬೇಳೆ 1 ಕಪ್

    ಈರುಳ್ಳಿ 1 ಕಪ್ ಕತ್ತರಿಸಿದ್ದು

    ಶುಂಠಿ-ಬೆಳ್ಳುಳ್ಳಿ 1/4 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)

    ಕೊತ್ತಂಬರಿ ಸೊಪ್ಪು 1 ಕಪ್

    ಪುದೀನಾ ಎಲೆ 1/4 ಕಪ್

    ಹಸಿ ಮೆಣಸಿನಕಾಯಿ 3-4

    ಖಾರದ ಪುಡಿ1 ಚಮಚ

    ರುಚಿಗೆ ತಕ್ಕ ಉಪ್ಪು

    ಎಣ್ಣೆ (ಡೀಪ್‌ ಫ್ರೈ ಮಾಡಲು)

    ಜೀರಿಗೆ 1 ಚಮಚ

    ನೀರು 1/2 ಕಪ್

Red Rice Kanda Poha
How to Prepare
  • ತಯಾರಿಸುವುದು ಹೇಗೆ?

    1. ಹೆಸರು ಬೇಳೆಯನ್ನು 3-4 ಗಂಟೆ ನೀರಿನಲ್ಲಿ ನೆನೆಹಾಕಿ.

    2. ನಂತರ ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಕೊತ್ತಂಬರಿ ಬೀಜ ಸೇರಿಸಿ ತರಿತರಿಯಾಗಿ ರುಬ್ಬಿ. ( ರುಬ್ಬುವಾಗ ನೀರು ಹಾಕಬೇಡಿ).

    3. ಈಗ ರುಬ್ಬಿದ ಪೇಸ್ಟ್ ಅನ್ನು ಸ್ವಲ್ಪ ದೊಡ್ಡ ಬೌಲ್‌ಗೆ ಹಾಕಿ ಅದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.

    4. ಈಗ ದಪ್ಪ ತಳವಿರುವ ಬಾಣಲಿ ತೆಗೆದು ಅದನ್ನು ಉರಿ ಮೇಲಿಟ್ಟು, ನಂತರ ಎಣ್ಣೆ ಹಾಕಿ ಕಾಯಿಸಿ.

    5. ಎಣ್ಣೆ ಕಾಯುವ ಹೊತ್ತಿನಲ್ಲಿ ಬೌಲ್‌ನಲ್ಲಿರುವ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಎಣ್ಣೆ ಕಾದಾಗ ಕೈಯಿಂದ ತಟ್ಟಿ ಎಣ್ಣೆಯಲ್ಲಿ ಬಿಡಿ.

    6. ಹೆಸರು ಬೇಳೆ ಪಕೋಡ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.

    7. ಬಿಸಿ-ಬಿಸಿಯಾದ ಪಕೋಡವನ್ನು ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.

Instructions
  • ಸೂಚನೆ:* ಹೆಸರು ಬೇಳೆ ಪಕೋಡ ಮಾಡುವಾಗ ಹೆಸರುಬೇಳೆಯನ್ನು ತುಂಬಾ ತರಿತರಿಯಾಗಿ ರುಬ್ಬಿ, ನುಣ್ಣನೆ ಮಾಡಿದರೆ ಪಕೋಡ ಮಾಡಲು ಆಗುವುದಿಲ್ಲ. * ರುಬ್ಬುವಾಗ ಅಗ್ಯತ ಬಿದ್ದರೆ ಸ್ವಲ್ಪ ನೀರು ಹಾಕಿ ರುಬ್ಬಿ.
Nutritional Information
  • ಸರ್ವ್ - 3
  • ಕ್ಯಾಲೋರಿ - 646
  • ಕೊಬ್ಬು - 31.1

ತಯಾರಿಸುವುದು ಹೇಗೆ?

1. ಹೆಸರು ಬೇಳೆಯನ್ನು 3-4 ಗಂಟೆ ನೀರಿನಲ್ಲಿ ನೆನೆಹಾಕಿ.

Moong Dal Pakoda

2. ನಂತರ ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಕೊತ್ತಂಬರಿ ಬೀಜ ಸೇರಿಸಿ ತರಿತರಿಯಾಗಿ ರುಬ್ಬಿ. ( ರುಬ್ಬುವಾಗ ನೀರು ಹಾಕಬೇಡಿ)

Moong Dal Pakoda

3. ಈಗ ರುಬ್ಬಿದ ಪೇಸ್ಟ್ ಅನ್ನು ಸ್ವಲ್ಪ ದೊಡ್ಡ ಬೌಲ್‌ಗೆ ಹಾಕಿ ಅದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.

Moong Dal Pakoda
Moong Dal Pakoda

4. ಈಗ ದಪ್ಪ ತಳವಿರುವ ಬಾಣಲಿ ತೆಗೆದು ಅದನ್ನು ಉರಿ ಮೇಲಿಟ್ಟು, ನಂತರ ಎಣ್ಣೆ ಹಾಕಿ ಕಾಯಿಸಿ.

Moong Dal Pakoda

5. ಎಣ್ಣೆ ಕಾಯುವ ಹೊತ್ತಿನಲ್ಲಿ ಬೌಲ್‌ನಲ್ಲಿರುವ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಎಣ್ಣೆ ಕಾದಾಗ ಕೈಯಿಂದ ತಟ್ಟಿ ಎಣ್ಣೆಯಲ್ಲಿ ಬಿಡಿ.

Moong Dal Pakoda
Moong Dal Pakoda

6. ಹೆಸರು ಬೇಳೆ ಪಕೋಡ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.

Moong Dal Pakoda

7. ಬಿಸಿ-ಬಿಸಿಯಾದ ಪಕೋಡವನ್ನು ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.

Moong Dal Pakoda
[ 4.5 of 5 - 111 Users]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X