Just In
Don't Miss
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
- Sports
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಸಿಪಿ: ಹೆಸರುಬೇಳೆಯ ಪಕೋಡ ಟ್ರೈ ಮಾಡಿದ್ದೀರಾ?
ಪಕೋಡ ಹಲವಾರು ಬಗೆಯಲ್ಲಿ ತಯಾರಿಸಬಹುದು, ನಾವಿಲ್ಲಿ ಹೆಸರು ಬೇಳೆ ಹಾಕಿ ಮಾಡುವ ರೆಸಿಪಿ ನೀಡಿದ್ದೇವೆ. ಸಾಮಾನ್ಯವಾಗಿ ಮಸಾಲೆ ವಡೆ ಮಾಡುವಾಗ ಕಡಲೆ ಬೇಳೆ ಹಾಕುತ್ತೇವೆ, ಆದರೆ ಇಲ್ಲಿ ಹೆಸರು ಬೇಳೆ ಬಳಸಲಾಗಿದೆ.
ಈ ಸ್ನ್ಯಾಕ್ಸ್ ರುಚಿ ಮಸಾಲೆವಡೆಗಿಂತ ಸ್ವಲ್ಪ ಭಿನ್ನ ಎನಿಸುವುದು. ಇದರಲ್ಲಿ ಕೊತ್ತಂಬರಿ ಬೀಜ ಹಾಗೂ ಪುದೀನಾ ಇತರ ಮಸಾಲೆಯ ಫ್ಲೇವರ್ ಸೇರಿಕೊಂಡು ತುಂಬಾ ರುಚಿಯಾಗಿರುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಹೆಸರುಬೇಳೆ 1 ಕಪ್
ಈರುಳ್ಳಿ 1 ಕಪ್ ಕತ್ತರಿಸಿದ್ದು
ಶುಂಠಿ-ಬೆಳ್ಳುಳ್ಳಿ 1/4 ಕಪ್
ಕೊತ್ತಂಬರಿ ಸೊಪ್ಪು ಅರ್ಧ ಕಪ್
ಪುದೀನಾ ಎಲೆ ಸ್ವಲ್ಪ
ಹಸಿ ಮೆಣಸಿನಕಾಯಿ 3-4
ಖಾರದ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಬೀಜ 1/4 ಕಪ್
ಜೀರಿಗೆ 1 ಚಮಚ
ನೀರು 1/2 ಕಪ್
-
ಮಾಡುವುದು ಹೇಗೆ?
* ಹೆಸರುಬೇಳೆಯನ್ನು 3-4 ಗಂಟೆ ನೆನೆ ಹಾಕಿ.
* ಈಗ ಹೆಸರುಬೇಳೆ ಅದನ್ನು ಮಿಕ್ಸಿಗೆ ಹಾಕಿ ತರಿ ತರಿ ರುಬ್ಬಿ, ಕೊತ್ತಂಬರಿ ಬೀಜ ಕೂಡ ತರಿತರಿಯಾಗಿ ರುಬ್ಬಿ (ಎರಡೂ ಒಟ್ಟಿಗೆ ಹಾಕಿಯೂ ರುಬ್ಬಬಹುದು).
* ಈಗ ರಬ್ಬಿದ ಪೇಸ್ಟ್ ಅನ್ನು ಬೌಲ್ಗೆ ಹಾಕಿ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ, ಪುದೀನಾ ಎಲೆ, ಖಾರದ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
*ಈಗ ಪ್ಯಾನ್ಗೆ ಎಣ್ಣೆ ಹಾಕಿ ಕುದಿಸಿ.
* ಈಗ ಸ್ವಲ್ಪ ಮಿಶ್ರಣ ತೆಗೆದು ಉಂಡೆಕಟ್ಟಿ ಸ್ವಲ್ಪ ತಟ್ಟಿ ಕುದಿಯುತ್ತಿರುವ ಎಣ್ಣೆಗೆ ಹಾಕಿ.
* ಎರಡೂ ಬದಿ ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಿರಿ.
* ಈಗ ಇದನ್ನು ಬಿಸಿ ಬಿಸಿ ಟೀ ಜೊತೆ ಸರ್ವ್ ಮಾಡಿ.
- * ಮಿಶ್ರಣ ನುಣ್ಣಗೆ ಆಗಬಾರದು, ತರಿತರಿ ಇರಬೇಕು. *ಶುಂಠಿ, ಬೆಳ್ಳುಳ್ಳಿ, ಪುದೀನಾ ಇವುಗಳನ್ನು ಜಜ್ಜಿ ಕೂಡ ಹಾಕಿ ಮಿಕ್ಸ್ ಮಾಡಬಹುದು.
- ಕ್ಯಾಲೋರಿ - 646ಕ್ಯಾ
- ಪ್ರೊಟೀನ್ - 26ಗ್ರಾಂ
- ಕಾರ್ಬ್ಸ್ - 31ಗ್ರಾಂ
- ನಾರಿನಂಶ - 6ಗ್ರಾಂ