Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಹಾ! ಎಷ್ಟೊಂದು ರುಚಿ ಈ ಹೆಸರುಬೇಳೆ ಪಕೋಡ
ಹೆಸರು ಬೇಳೆಯಿಂದ ಏನೇ ಮಾಡಲಿ ಅದು ರುಚಿಕರವಾಗಿರುತ್ತದೆ, ಹೆಸರು ಬೇಳೆಯ ಸ್ಪೆಷಾಲಿಟಿಯೇ ಹಾಗೇ. ಇದರಿಂದ ಮಾಡುವ ಪಾಯಸ, ಸ್ನ್ಯಾಕ್ಸ್ ಎಲ್ಲವೂ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇಲ್ಲಿ ನಾವು ಹೆಸರು ಬೇಳೆ ಬಳಸಿ ಮಾಡುವ ಪಕೋಡ ರೆಸಿಪಿ ನೀಡಿದ್ದೇವೆ. ಮನೆಯಲ್ಲಿ ಚಿಕ್ಕವರು ಇರಲಿ, ದೊಡ್ಡವರು ಇರಲಿ ಎಲ್ಲರಿಗೂ ಈ ಪಕೋಡ ತುಂಬಾ ಇಷ್ಟವಾಗುವುದು.

ಇಲ್ಲಿ ಪಕೋಡ ಮಾಡುವ ಸರಳ ವಿಧಾನ ಹೇಳಿದ್ದೇವೆ. ಈ ಪಕೋಡ ರುಚಿ ಖಂಡಿತ ನಿಮಗೆ ಇಷ್ಟವಾಗುವುದು, ಇನ್ನೇಕೆ ತಡ ಟ್ರೈ ಮಾಡಿ.
Recipe By: Reena TK
Recipe Type: Veg Snacks
Serves: 3
-
ಬೇಕಾಗುವ ಸಾಮಗ್ರಿ
ಹೆಸರು ಬೇಳೆ 1 ಕಪ್
ಈರುಳ್ಳಿ 1 ಕಪ್ ಕತ್ತರಿಸಿದ್ದು
ಶುಂಠಿ-ಬೆಳ್ಳುಳ್ಳಿ 1/4 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು 1 ಕಪ್
ಪುದೀನಾ ಎಲೆ 1/4 ಕಪ್
ಹಸಿ ಮೆಣಸಿನಕಾಯಿ 3-4
ಖಾರದ ಪುಡಿ1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ (ಡೀಪ್ ಫ್ರೈ ಮಾಡಲು)
ಜೀರಿಗೆ 1 ಚಮಚ
ನೀರು 1/2 ಕಪ್
-
ತಯಾರಿಸುವುದು ಹೇಗೆ?
1. ಹೆಸರು ಬೇಳೆಯನ್ನು 3-4 ಗಂಟೆ ನೀರಿನಲ್ಲಿ ನೆನೆಹಾಕಿ.
2. ನಂತರ ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಕೊತ್ತಂಬರಿ ಬೀಜ ಸೇರಿಸಿ ತರಿತರಿಯಾಗಿ ರುಬ್ಬಿ. ( ರುಬ್ಬುವಾಗ ನೀರು ಹಾಕಬೇಡಿ).
3. ಈಗ ರುಬ್ಬಿದ ಪೇಸ್ಟ್ ಅನ್ನು ಸ್ವಲ್ಪ ದೊಡ್ಡ ಬೌಲ್‌ಗೆ ಹಾಕಿ ಅದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
4. ಈಗ ದಪ್ಪ ತಳವಿರುವ ಬಾಣಲಿ ತೆಗೆದು ಅದನ್ನು ಉರಿ ಮೇಲಿಟ್ಟು, ನಂತರ ಎಣ್ಣೆ ಹಾಕಿ ಕಾಯಿಸಿ.
5. ಎಣ್ಣೆ ಕಾಯುವ ಹೊತ್ತಿನಲ್ಲಿ ಬೌಲ್‌ನಲ್ಲಿರುವ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಎಣ್ಣೆ ಕಾದಾಗ ಕೈಯಿಂದ ತಟ್ಟಿ ಎಣ್ಣೆಯಲ್ಲಿ ಬಿಡಿ.
6. ಹೆಸರು ಬೇಳೆ ಪಕೋಡ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.
7. ಬಿಸಿ-ಬಿಸಿಯಾದ ಪಕೋಡವನ್ನು ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.
- ಸೂಚನೆ:* ಹೆಸರು ಬೇಳೆ ಪಕೋಡ ಮಾಡುವಾಗ ಹೆಸರುಬೇಳೆಯನ್ನು ತುಂಬಾ ತರಿತರಿಯಾಗಿ ರುಬ್ಬಿ, ನುಣ್ಣನೆ ಮಾಡಿದರೆ ಪಕೋಡ ಮಾಡಲು ಆಗುವುದಿಲ್ಲ. * ರುಬ್ಬುವಾಗ ಅಗ್ಯತ ಬಿದ್ದರೆ ಸ್ವಲ್ಪ ನೀರು ಹಾಕಿ ರುಬ್ಬಿ.
- ಸರ್ವ್ - 3
- ಕ್ಯಾಲೋರಿ - 646
- ಕೊಬ್ಬು - 31.1
ತಯಾರಿಸುವುದು ಹೇಗೆ?
1. ಹೆಸರು ಬೇಳೆಯನ್ನು 3-4
ಗಂಟೆ ನೀರಿನಲ್ಲಿ ನೆನೆಹಾಕಿ.

3. ಈಗ ರುಬ್ಬಿದ ಪೇಸ್ಟ್ ಅನ್ನು ಸ್ವಲ್ಪ ದೊಡ್ಡ ಬೌಲ್‌ಗೆ ಹಾಕಿ ಅದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.

4. ಈಗ ದಪ್ಪ ತಳವಿರುವ ಬಾಣಲಿ ತೆಗೆದು ಅದನ್ನು ಉರಿ ಮೇಲಿಟ್ಟು, ನಂತರ ಎಣ್ಣೆ ಹಾಕಿ ಕಾಯಿಸಿ.

5. ಎಣ್ಣೆ ಕಾಯುವ ಹೊತ್ತಿನಲ್ಲಿ ಬೌಲ್‌ನಲ್ಲಿರುವ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಎಣ್ಣೆ ಕಾದಾಗ ಕೈಯಿಂದ ತಟ್ಟಿ ಎಣ್ಣೆಯಲ್ಲಿ ಬಿಡಿ.

6. ಹೆಸರು ಬೇಳೆ ಪಕೋಡ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.

7. ಬಿಸಿ-ಬಿಸಿಯಾದ ಪಕೋಡವನ್ನು ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.

Click it and Unblock the Notifications