ಹೆಸರು ಬೇಳೆ ಕೋಸಂಬರಿ ರೆಸಿಪಿ

By: Dhivya
Subscribe to Boldsky

ಹೆಸರು ಬೇಳೆ ಕೋಸಂಬರಿ ಕರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನದಲ್ಲಿ ಒಂದು. ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಕರ್ನಾಟಕದ ತಟ್ಟೆ ಊಟದ ಪದ್ಧತಿಯಲ್ಲಿ ಇದೊಂದು ಬಗೆಯ ಅಡುಗೆಯನ್ನಾಗಿ ನೀಡುತ್ತಾರೆ. ಇದು ನೆನೆಸಿದ ಹೆಸರು ಬೇಳೆ, ಸೌತೆಕಾಯಿ ಮತ್ತು ಕಚ್ಚಾ ಮಾವಿನಂತಹ ತರಕಾರಿಗಳ ಸಮ್ಮಿಶ್ರಣವನ್ನು ಹೊಂದಿರುತ್ತದೆ. ಹೆಸರು ಬೇಳೆ ಕೋಸಂಬರಿಯು ಮಹಾರಾಷ್ಟ್ರದ ವಿಶೇಷ ಸಲಾಡ್ ಎನಿಸಿಕೊಂಡ "ಮೂಂಗ್ ದಾಲ್ ಕೋಶಿಂಬಿರ್'ಅನ್ನು ಹೋಲುತ್ತದೆ.

ಸಸ್ಯಹಾರಿಗಳ ಪ್ರಮುಖ ಅಡುಗೆ ವಿಧಾನದಲ್ಲಿ ಇದು ಒಂದು. ಇದರಲ್ಲಿ ಪ್ರೋಟೀನ್‍ಗಳು ಸಮೃದ್ಧವಾಗಿರುತ್ತವೆ. ಮನೆಯಲ್ಲಿ ಬಹಳ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಬೇಕೆಂದುಕೊಂಡಿದ್ದರೆ, ನಾವಿಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ಬರಹದ ವಿವರಣೆಯನ್ನು ಅನುಸರಿಸಬಹುದು...

ಹೆಸರು ಬೇಳೆ ಕೋಸಂಬರಿ ವೀಡಿಯೋ ಪಾಕವಿಧಾನ

kosambari recipe
ಕೋಸಂಬರಿ ಪಾಕವಿಧಾನ | ಹೆಸರು ಬೇಳೆ ಕೋಸಂಬರಿ ಪಾಕವಿಧಾನ | ಹೆಸರು ಬೇಳೆ ಸಲಾಡ್ ರೆಸಿಪಿ
Prep Time
1 Hours
Cook Time
5 ನಿಮಿಷ
Total Time
1 Hoursours5 Minsins

Recipe By: ಅರ್ಚನಾ ವಿ.

Recipe Type: ಕೋಸಂಬರಿ/ಸಲಾಡ್

Serves: 2 ಮಂದಿಗೆ

Ingredients
 • ನೆನೆಸಿಕೊಂಡ ಹೆಸರು ಬೇಳೆ- 200 ಗ್ರಾಂ.

  ಸಿಪ್ಪೆ ತೆಗೆದು ಹೆಚ್ಚಿಕೊಂಡ ಸೌತೆಕಾಯಿ -1 ಮಧ್ಯಮ ಗಾತ್ರದ್ದು

  ಸಿಪ್ಪೆ ತೆಗೆದು ತುರಿದುಕೊಂಡ ಗಜರಿ/ಕ್ಯಾರೆಟ್ - 1 ಮಧ್ಯಮ ಗಾತ್ರದ್ದು

  ಹೆಚ್ಚಿಕೊಂಡ ತೋತಾಪುರಿ ಮಾವಿನಕಾಯಿ - 1/4 ಕಪ್

  ತೆಂಗಿನ ತುರಿ -2 ಚಮಚ

  ತುರಿದುಕೊಂಡ ಶುಂಠಿ- 1/4 ಇಂಚು

  ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ- 1 ಚಮಚ

  ಎಣ್ಣೆ -1 ಚಮಚ

  ಸಾಸಿವೆ -1 ಚಮಚ

  ಇಂಗು - 1/4 ಚಮಚ

  ಕರಿಬೇವಿನ ಎಲೆ -5-6

  ನಿಂಬೆ ರಸ - 1/2 ನಿಂಬೆ ಹಣ್ಣಿನ ರಸ

  ರುಚಿಗೆ ತಕ್ಕಷ್ಟು ಉಪ್ಪು

  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು-1 ಚಮಚ

Red Rice Kanda Poha
How to Prepare
 • 1. ಒಂದು ಬೌಲ್‍ನಲ್ಲಿ ನೆನೆಸಿಕೊಂಡ ಹೆಸರುಬೇಳೆಯನ್ನು ಹಾಕಿರಿ.

  2. ಹೆಚ್ಚಿಕೊಂಡ ಸೌತೆಕಾಯಿ, ಕ್ಯಾರೆಟ್/ಗಜರಿ ಮತ್ತು ತೋತಾಪುರಿ ಮಾವಿನಕಾಯಿಯನ್ನು ಸೇರಿಸಿ.

  3. ನಂತರ ತೆಂಗಿನ ತುರಿ, ಶುಂಠಿ ಮತ್ತು ಹಸಿಮೆಣಸನ್ನು ಸೇರಿಸಿ.

  4. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆಯನ್ನು ಹಾಕಿ.

  5. ಸಾಸಿವೆ ಹುರಿದು ಸಿಡಿಯಲಾರಂಭಿಸಿದ ತಕ್ಷಣ ಕರಿಬೇವಿನ ಎಲೆ ಮತ್ತು ಇಂಗ್‍ಅನ್ನು ಸೇರಿಸಿ ಒಗ್ಗರಣೆ ತಯಾರಿಸಿಕೊಳ್ಳಿ.

  6. ಹೆಸರು ಬೇಳೆ ಮಿಶ್ರಣಕ್ಕೆ ಬಿಸಿಯಾದ ಒಗ್ಗರಣೆಯನ್ನು ಹಾಕಿರಿ.

  7. ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.

  8. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಮಿಶ್ರಗೊಳ್ಳುವಂತೆ ಕಲುಕಿ.

  9. ಇದರ ಮೇಲೆ ಕೊತ್ತಂಬರಿಯನ್ನು ಬೀರಿ, ಪುನಃ ಚೆನ್ನಾಗಿ ಮಿಶ್ರಮಾಡಿ.

Instructions
 • 1.ಹೆಸರು ಬೇಳೆಯನ್ನು ನೆನೆಯಿಡುವ ಮುನ್ನ ಚೆನ್ನಾಗಿ ತೊಳೆದು ಬಸಿದುಕೊಳ್ಳಬೇಕು.
 • 2. ಹೆಸರು ಬೇಳೆಯನ್ನು ಒಂದು ತಾಸು ನೆನೆಯಿಟ್ಟು, ನಂತರ ಉಳಿದ ನೀರನ್ನು ಬಸಿದುಕೊಳ್ಳಬೇಕು.
 • 3. ಪಾಕವಿಧಾನದ ಕೊನೆಯಲ್ಲಿ ಉಪ್ಪನ್ನು ಸೇರಿಸಿ. ಇಲ್ಲವಾದರೆ ಮಿಶ್ರಣವು ನೀರುಬಿಟ್ಟಿಕೊಳ್ಳುತ್ತದೆ.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರೀಸ್ - 87 ಕ್ಯಾಲ್
 • ಫ್ಯಾಟ್ - 4 ಗ್ರಾಂ.
 • ಪ್ರೋಟೀನ್ - 4 ಗ್ರಾಂ.
 • ಕಾರ್ಬೋಹೈಡ್ರೇಟ್ - 9 ಗ್ರಾಂ
 • ಸಕ್ಕರೆ - 6 ಗ್ರಾಂ.
 • ಫೈಬರ್ - 3 ಗ್ರಾಂ.
 • ಐರನ್ - ಶೇ.6
 • ವಿಟಮಿನ್ ಸಿ - ಶೇ.29.

ಹೆಸರುಬೇಳೆ ಪಾಕವಿಧಾನದ ಹಂತ ಹಂತವಾದ ಚಿತ್ರ ಬರಹ

1. ಒಂದು ಬೌಲ್‍ನಲ್ಲಿ ನೆನೆಸಿಕೊಂಡ ಹೆಸರುಬೇಳೆಯನ್ನು ಹಾಕಿರಿ.

kosambari recipe

2. ಹೆಚ್ಚಿಕೊಂಡ ಸೌತೆಕಾಯಿ, ಕ್ಯಾರೆಟ್/ಗಜರಿ ಮತ್ತು ತೋತಾಪುರಿ ಮಾವಿನಕಾಯಿಯನ್ನು ಸೇರಿಸಿ.

kosambari recipe
kosambari recipe
kosambari recipe

3. ನಂತರ ತೆಂಗಿನ ತುರಿ, ಶುಂಠಿ ಮತ್ತು ಹಸಿಮೆಣಸನ್ನು ಸೇರಿಸಿ.

kosambari recipe
kosambari recipe
kosambari recipe

4. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆಯನ್ನು ಹಾಕಿ.

kosambari recipe
kosambari recipe

5. ಸಾಸಿವೆ ಹುರಿದು ಸಿಡಿಯಲಾರಂಭಿಸಿದ ತಕ್ಷಣ ಕರಿಬೇವಿನ ಎಲೆ ಮತ್ತು ಇಂಗ್‍ಅನ್ನು ಸೇರಿಸಿ ಒಗ್ಗರಣೆ ತಯಾರಿಸಿಕೊಳ್ಳಿ.

kosambari recipe
kosambari recipe
kosambari recipe

6. ಹೆಸರು ಬೇಳೆ ಮಿಶ್ರಣಕ್ಕೆ ಬಿಸಿಯಾದ ಒಗ್ಗರಣೆಯನ್ನು ಹಾಕಿರಿ.

kosambari recipe

7. ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.

kosambari recipe
kosambari recipe

8. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಮಿಶ್ರಗೊಳ್ಳುವಂತೆ ಕಲುಕಿ.

kosambari recipe

9. ಇದರ ಮೇಲೆ ಕೊತ್ತಂಬರಿಯನ್ನು ಬೀರಿ, ಪುನಃ ಚೆನ್ನಾಗಿ ಮಿಶ್ರಮಾಡಿ.

kosambari recipe
kosambari recipe
kosambari recipe
[ 5 of 5 - 51 Users]
Please Wait while comments are loading...
Subscribe Newsletter