Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಸರು ಬೇಳೆ ಕಿಚಡಿ ರೆಸಿಪಿ
ಹೆಸರು ಬೇಳೆ ಕಿಚಡಿಯನ್ನು ಸಾಮಾನ್ಯವಾಗಿ ದಾಲ್ ಕಿಚಡಿ ಎಂದು ಸಹ ಕರೆಯುತ್ತಾರೆ. ಇದನ್ನು ಮಹಾರಾಷ್ಟ್ರದಲ್ಲಿ ಉಪಹಾರವಾಗಿ ಸ್ವೀಕರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಇದನ್ನು ದೇವರ ನೈವೇದ್ಯವಾಗಿಯೂ ತಯಾರಿಸಿ, ನಂತರ ಜನರು ಸವಿಯುತ್ತಾರೆ.
ಮೂಂಗ್ ದಾಲ್/ಹೆಸರು ಬೇಳೆ ಕಿಚಡಿ ಹೆಸರೇ ಹೇಳುವಂತೆ, ಕೆಲವು ಮಸಾಲೆ ಹಾಗೂ ಬೇಳೆ ಅಕ್ಕಿಗಳ ಮಿಶ್ರಣದಲ್ಲಿ ತಯಾರಿಸಲಾಗುವುದು. ಈರುಳ್ಳಿ, ಬೆಳ್ಳುಳ್ಳಿ ಇಷ್ಟ ಪಡುವವರು ಇದಕ್ಕೆ ಸೇರಿಸಿಕೊಳ್ಳಬಹುದು. ಈರುಳ್ಳಿ ಬೆಳ್ಳುಳ್ಳಿ ಇಲ್ಲದೆಯೇ ತಯಾರಿಸಬಹುದಾದ ಈ ಖಾದ್ಯವನ್ನು ದುರ್ಗ ಪೂಜೆ, ಗಣೇಶನ ಪೂಜೆ ಸೇರಿದಂತೆ ಅನೇಕ ಹಬ್ಬ ಹಾಗೂ ಉತ್ಸವಗಳಲ್ಲಿ ತಯಾರಿಸುತ್ತಾರೆ.
ಅತ್ಯಂತ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ದಾಲ್ ಕಿಚಡಿಯನ್ನು ಉಪಹಾರ ಹಾಗೂ ಊಟದ ರೂಪದಲ್ಲಿ ಸೇವಿಸಬಹುದು. ಕಿಚಡಿಯ ಮೇಲೆ ಹೊರ ಹೊಮ್ಮುವ ತುಪ್ಪಗಳು ಹಾಗೂ ಮಸಾಲೆಯ ಪರಿಮಳ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಬಾಯಲ್ಲಿ ನೀರೂರಿಸುವ ಈ ಪಾಕ ವಿಧಾನವನ್ನು ನೀವು ಮಾಡಬೇಕೆಂದಿದ್ದರೆ ನಾವಿಲ್ಲಿ ತೋರಿಸುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಗಮನಿಸಬಹುದು.
ಹೆಸರು ಬೇಳೆ ಕಿಚಡಿ ವಿಡಿಯೋ ರೆಸಿಪಿ

Recipe By: ಮೀನಾ ಭಂಡಾರಿ
Recipe Type: ಮುಖ್ಯ ಖಾದ್ಯ
Serves: 2 ಮಂದಿಗೆ
-
ಬಾಸುಮತಿ ಅಕ್ಕಿ - 1/2 ಕಪ್
ಒಡೆದ ಹಸಿರು ಹೆಸರುಕಾಳು - 1/2 ಕಪ್
ಇಂಗು - 1/4 ಟೀಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ ಪುಡಿ - 1 ಟೀಚಮಚ
ತುಪ್ಪ - 1 ಟೀಚಮಚ
ಜೀರಿಗೆ - 1 ಟೀಚಮಚ
ಜೀರಿಗೆ ಪುಡಿ - 1 ಟೀಚಮಚ
ನೀರು - 5 ಕಪ್ + ತೊಳೆಯಲು
-
1. ಒಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಹಾಕಿ.
2. ನಂತರ ಒಡೆದ ಹೆಸರುಕಾಳನ್ನು ಸೇರಿಸಿ.
3. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ.
4. ಬಿಸಿಯಾದ ಕುಕ್ಕರ್ಗೆ ತುಪ್ಪವನ್ನು ಹಾಕಿರಿ.
5. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ಜೀರಿಗೆ ಹುರಿದು ಹೊಂಬಣ್ಣಕ್ಕೆ ಬರುವವರೆಗೆ ಕೈಯಾಡಿಸಿ.
6. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ.
7. ಚೆನ್ನಾಗಿ ಕಲುಕಿ.
8. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ.
9. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
10. ಉಪ್ಪನ್ನು ಸೇರಿಸಿ, ಬೇಯಲು ಎರಡು ನಿಮಿಷ ಬಿಡಿ.
11. ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಸುಮಾರು 4-5 ಸೀಟಿ ಕೂಗಬೇಕು.
12. ಇದು ತಣಿದ ಮೇಲೆ, ಕೆಳಗಿಳಿಸಿ ಚೆನ್ನಾಗಿ ಮಿಶ್ರಗೊಳಿಸಿ.
13. ನಂತರ ತಟ್ಟೆಯಲ್ಲಿ ಹಾಕಿ ಸವಿಯಲು ನೀಡಿ.
- 1. ಕಿಚಡಿ ತುಂಬಾ ತೆಳು ಹಾಗೂ ಇನ್ನಷ್ಟು ಮುದ್ದೆ ಮುದ್ದೆಯಂತಾಗಿರಬೇಕೆಂದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು.
- 2. ಸವಿಯಲು ನೀಡುವಾಗ, ಕಿಚಡಿಯ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ನೀಡಿ. ರುಚಿ ಹಾಗೂ ಪರಿಮಳ ಎರಡು ಹೆಚ್ಚುವುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರಿ - 180 ಕ್ಯಾಲ್
- ಫ್ಯಾಟ್ - 5 ಗ್ರಾಂ
- ಪ್ರೋಟೀನ್ - 6 ಗ್ರಾಂ
- ಕಾರ್ಬೋಹೈಡ್ರೇಟ್ - 36 ಗ್ರಾಂ.
- ಸಕ್ಕರೆ - 2 ಗ್ರಾಂ
ಸ್ಟೆಪ್ ಬೈ ಸ್ಟೆಪ್ ಹೆಸರು ಬೇಳೆ ಕಿಚಡಿ
1. ಒಂದು ಪಾತ್ರೆಯಲ್ಲಿ ಬಾಸುಮತಿ ಅಕ್ಕಿಯನ್ನು ಹಾಕಿ.

2. ನಂತರ ಒಡೆದ ಹೆಸರುಕಾಳನ್ನು ಸೇರಿಸಿ.

3. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ.

4. ಬಿಸಿಯಾದ ಕುಕ್ಕರ್ಗೆ ತುಪ್ಪವನ್ನು ಹಾಕಿರಿ.

5. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ಜೀರಿಗೆ ಹುರಿದು ಹೊಂಬಣ್ಣಕ್ಕೆ ಬರುವವರೆಗೆ ಕೈಯಾಡಿಸಿ.



6. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ.

7. ಚೆನ್ನಾಗಿ ಕಲುಕಿ.

8. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ.


9. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.


10. ಉಪ್ಪನ್ನು ಸೇರಿಸಿ, ಬೇಯಲು ಎರಡು ನಿಮಿಷ ಬಿಡಿ.


11. ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಸುಮಾರು 4-5 ಸೀಟಿ ಕೂಗಬೇಕು.


12. ಇದು ತಣಿದ ಮೇಲೆ, ಕೆಳಗಿಳಿಸಿ ಚೆನ್ನಾಗಿ ಮಿಶ್ರಗೊಳಿಸಿ.


13. ನಂತರ ತಟ್ಟೆಯಲ್ಲಿ ಹಾಕಿ ಸವಿಯಲು ನೀಡಿ.





Click it and Unblock the Notifications
