For Quick Alerts
ALLOW NOTIFICATIONS  
For Daily Alerts

ಹೆಸರು ಬೇಳೆ ಹಲ್ವಾ ರೆಸಿಪಿ

Posted By: Divya Pandit
|

ಮೂಂಗ್‍ದಾಲ್/ಹೆಸರು ಬೇಳೆ ಹಲ್ವಾ ಮೂಲತಹ ರಾಜಸ್ಥಾನದ ವಿಶೇಷವಾದ ತಿಂಡಿ. ಉತ್ತರ ಭಾರತದ ಊಟದ ತಟ್ಟೆಯಲ್ಲಿ ಇದೊಂದು ವಿಶೇಷವಾದ ಸಿಹಿ ತಿಂಡಿಯಾಗಿರುವುದನ್ನು ನಾವು ಕಾಣಬಹುದು. ಇಲ್ಲಿಯ ಜನರು ಚಳಿಗಾಲದಲ್ಲಿ ಇದನ್ನು ಸವಿಯಲು ಹೆಚ್ಚು ಇಷ್ಟಪಡುತ್ತಾರೆ. ಇದರಲ್ಲಿ ತುಪ್ಪ, ಸಕ್ಕರೆ, ಒಣ ಹಣ್ಣುಗಳ ಮಿಶ್ರಣ ಇರುವುದರಿಂದ ಇದನ್ನು ಸವಿಯಲು ಖುಷಿ ನೀಡುತ್ತದೆ.

ಇದನ್ನು ಕರ್ನಾಟಕದಲ್ಲಿ ಹಿಸಾರ್ ಬೀಲ್ ಹಲ್ವಾ ಎಂದು ಕರೆಯುತ್ತಾರೆ. ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಇದನ್ನು ತಯಾರಿಸುತ್ತಾರೆ. ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿರುವುದರಿಂದ ಇದೊಂದು ಆರೋಗ್ಯ ಪೂರ್ಣ ತಿಂಡಿ ಎಂದು ಪರಿಗಣಿಸಲಾಗುವುದು. ಇದರ ಪಾಕ ವಿಧಾನದಲ್ಲಿ ಹಾಲನ್ನು ಸೇರಿಸಿ ತಯಾರಿಸಬಹುದು.

ಇಲ್ಲವೇ ಹಾಲನ್ನು ಬಳಸದೆಯೂ ತಯಾರಿಸಬಹುದು. ನಮ್ಮ ಅಗತ್ಯಕ್ಕೆ ತಕ್ಕಂತೆ ತಯಾರಿಸಬಹುದಾದ ಈ ಸಿಹಿ ತಿಂಡಿಯ ಪಾಕವಿಧಾನಕ್ಕೆ ಸ್ವಲ್ಪ ಸಮಯ ತಗಲುವುದು. ಆದರೆ ಸಿಹಿತಿಂಡಿ ತಯಾರಾದ ನಂತರ ಸಮಯ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಹಬ್ಬಗಳ ಸಾಲನ್ನು ಹೊಂದಿರುವ ಈ ಶ್ರಾವಣ ಮಾಸಕ್ಕೆ ಅಥವಾ ವಿಶೇಷವಾದ ಅತಿಥಿಗಳು ಮನೆಗೆ ಬಂದಾಗ ಈ ರೆಸಿಪಿಯನ್ನು ಮಾಡುವ ಹವಣಿಕೆಯಲ್ಲಿದ್ದರೆ ಇಲ್ಲಿದೆ ನೋಡಿ ಹಂತ ಹಂತವಾದ ಪಾಕವಿಧಾನ...

ಹೆಸರು ಬೇಳೆ ಹಲ್ವಾ

ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ ರೆಸಿಪಿ
ಹೆಸರು ಬೇಳೆ ಹಲ್ವಾ ರೆಸಿಪಿ
Prep Time
4 Hoursours
Cook Time
45M
Total Time
4 Hoursours

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 2

Ingredients
  • * ಹಳದಿ ಬಣ್ಣದ ಹೆಸರು ಬೇಳೆ- 1 ಕಪ್

    * ನೀರು-1/2 ಕಪ್

    * ತುಪ್ಪ- 3/4 ಕಪ್

    * ಸಕ್ಕರೆ -1 ಕಪ್

    * ಏಲಕ್ಕಿ ಪುಡಿ- ಒಂದು ಚಿಟಕಿ

    * ಹೆಚ್ಚಿದ ಬಾದಾಮಿ-3-4 (ಅಲಂಕಾರಕ್ಕೆ)

    * ಕೇಸರಿ ಎಳೆ- 3-4 (ಅಲಂಕಾರಕ್ಕೆ)

Red Rice Kanda Poha
How to Prepare
  • 1. ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಾಕಿ 3-4 ಗಂಟೆಗಳಕಾಲ ನೀರಿನಲ್ಲಿ ನೆನೆಯಲು ಬಿಡಿ.

    2. ನೆನೆದ ಬೇಳೆಯನ್ನು ನೀರಿನಿಂದ ಬೇರ್ಪಡಿಸಿ ಮಿಕ್ಸರ್‍ನಲ್ಲಿ ಹಾಕಿ. ಜೊತೆಗೆ ಒಂದು ಚಮಚ ನೀರನ್ನು ಬೆರೆಸಿ

    3. ನುಣುಪಾಗಿ ರುಬ್ಬಿಕೊಳ್ಳಬೇಕು.

    4. ನಂತರ ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ಪೇಸ್ಟ್ ಮತ್ತು 1/2 ಕಪ್ ತುಪ್ಪವನ್ನು ಹಾಕಿ.

    5. ಎರಡನ್ನು ಚೆನ್ನಾಗಿ ಮಿಶ್ರಗೊಳಿಸಿ.

    6. ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ.

    7. ಸಾಧಾರಣ ಉರಿಯಲ್ಲಿ ಇದನ್ನು ಬೇಯಿಸಬೇಕು. ಮಿಶ್ರಣ ಗಂಟು-ಗಂಟಾಗದಂತೆ ನಿರಂತರವಾಗಿ ಕೈ ಆಡಿಸುತ್ತಲೇ ಇರಬೇಕು.

    8. ಇದು ಹೊಂಬಣ್ಣಕ್ಕೆ/ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತದೆ. ಈ ಮಿಶ್ರಣದ ವಿನ್ಯಾಸ ಮತ್ತು ಬಣ್ಣ ಎರಡು ಬದಲಾವಣೆ ಹೊಂದುತ್ತವೆ.

    9. ನಂತರ 1/4 ಕಪ್‍ನಷ್ಟು ತುಪ್ಪವನ್ನು ಹಾಕಿ, ಚೆನ್ನಾಗಿ ಮಿಶ್ರಗೊಳಿಸಿ.

    10. ಹೀಗೆ ಕೈ ಆಡಿಸುತ್ತ ಇರುವಾಗ ತುಪ್ಪವು ಮಿಶ್ರಣದಿಂದ ಹೊರಬರಲು ಪ್ರಾರಂಭಿಸುತ್ತದೆ. ಆಗ ಉರಿಯನ್ನು ಕಡಿಮೆಮಾಡಿ ಬೇಯಿಸುವುದನ್ನು ಮುಂದುವರಿಸಬೇಕು.

    11. ಈ ಸಮಯದಲ್ಲೇ ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ, ಅದು ಮುಳುಗುವಷ್ಟು ನೀರನ್ನು ಮಾತ್ರ ಹಾಕಿ.

    12. ಈ ಸಕ್ಕರೆಯ ಪಾಕ ಮಧ್ಯಮ ದಪ್ಪವನ್ನು ಹೊಂದಿರಬೇಕು.

    13. ಇದನ್ನು ದಾಲ್ ಮಿಶ್ರಣಕ್ಕೆ ಸೇರಿಸಿ.

    14. ನಂತರ ಎಲ್ಲವೂ ಚೆನ್ನಾಗಿ ಬೆರೆತು ಕೊಳ್ಳುವಂತೆ ಕೈ ಆಡಿಸಿ. ಸ್ವಲ್ಪ ಸಮಯದಲ್ಲೇ ಹಲ್ವಾ ಪಾತ್ರೆಯ ಬದಿಯಲ್ಲಿ ಬಿಟ್ಟುಕೊಳ್ಳಲು ಪ್ರಾರಂಭವಾಗುತ್ತದೆ.

    15. ಆಗ ಏಲಕ್ಕಿ ಪುಡಿಯನ್ನು ಹಾಕಿ, ಚೆನ್ನಾಗಿ ಕಲುಕಿ.

    16. ನಂತರ ಹೆಚ್ಚಿಕೊಂಡ ಬಾದಾಮಿ ಚೂರು ಹಾಗೂ ಕೇಸರಿ ಎಳೆಯಿಂದ ಅಲಂಕಾರಗೊಳಿಸಿ, ಸವಿಯಲು ನೀಡಿ.

Instructions
  • 1.ಹೆಸರು ಬೇಳೆಯನ್ನು ನೆನೆಸುವ ಮುನ್ನ ಚೆನ್ನಾಗಿ ತೊಳೆದುಕೊಳ್ಳಬೇಕು.
  • 2. ತುಪ್ಪವನ್ನು ಹೆಸರು ಬೇಳೆಗೆ ಸೇರಿಸಬಹುದು. ಇಲ್ಲವೇ ಒಂದು ಬಿಸಿಯಾದ' ಪಾತ್ರೆಯಲ್ಲಿ ಹಾಕಿಕೊಳ್ಳಬಹುದು. ಆದರೆ ಅದು ಕೈ ಸುಡುವ ಸಾಧ್ಯತೆ ಇರುತ್ತದೆ.
  • 3. ನೀವು ಈ ಪಾಕ ವಿಧಾನಕ್ಕೆ ಖೋಯಾ ಅಥವಾ ಹಾಲು ಎರಡರಲ್ಲಿ ಒಂದನ್ನು ಬಳಸಬಹುದು.
  • 4. ಸಕ್ಕರೆ ಪಾಕವು ಸ್ಥಿರತೆಗೆ ಸ್ವಲ್ಪ ತೆಳ್ಳಗಿರಬೇಕು.
Nutritional Information
  • ಸರ್ವಿಂಗ್ ಸೈಜ್ - 1ಬೌಲ್
  • ಕ್ಯಾಲೋರಿಸ್ - 320 ಕ್ಯಾಲ್
  • ಫ್ಯಾಟ್ - 14 ಗ್ರಾಂ
  • ಪ್ರೋಟೀನ್ - 7 ಗ್ರಾಂ
  • ಸಕ್ಕರೆ - 25 ಗ್ರಾಂ
  • ಫೈಬರ್ - 4 ಗ್ರಾಂ

ಹಂತ ಹಂತವಾದ ಪಾಕವಿಧಾನದ ಮಾಹಿತಿ

1. ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಾಕಿ 3-4 ಗಂಟೆಗಳಕಾಲ ನೀರಿನಲ್ಲಿ ನೆನೆಯಿಟ್ಟುಕೊಂಡು. ಉಳಿದ ನೀರನ್ನು ಬೇರ್ಪಡಿಸಿಕೊಳ್ಳಬೇಕು. ಹಳದಿ ಬಣ್ಣದ ಹೆಸರು ಬೇಳೆ-1 ಕಪ್, ನೆನೆಸಿಕೊಂಡ ಬೇಳೆ (3-4 ಗಂಟೆ ನೆನೆಸಿಕೊಂಡು , ಹೆಚ್ಚಿರುವ ನೀರನ್ನು ಬೇರ್ಪಡಿಸಿದ ನಂತರದ ಹೆಸರು ಬೇಳೆ)

ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ

2. ಮಿಕ್ಸಿಯಲ್ಲಿ ಹಾಕಿರಿ

ಹೆಸರು ಬೇಳೆ ಹಲ್ವಾ

ಒಂದು ಚಮಚ ನೀರನ್ನು ಬೆರೆಸಿ

ಹೆಸರು ಬೇಳೆ ಹಲ್ವಾ

3. ರುಬ್ಬಿಕೊಳ್ಳಿ (ಒಂದು ನುಣುಪಾದ ಪೇಸ್ಟ್‍ನಂತೆ ಇರಬೇಕು)

ಹೆಸರು ಬೇಳೆ ಹಲ್ವಾ
4. ಒಂದು ಬೌಲ್/ಪಾತ್ರೆಯಲ್ಲಿ ಸುರಿಯಿರಿ
ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ

1/2 ಕಪ್ ತುಪ್ಪವನ್ನು ಬೆರೆಸಿ
5. ಚೆನ್ನಾಗಿ ಮಿಶ್ರಗೊಳಿಸಿ.

ಹೆಸರು ಬೇಳೆ ಹಲ್ವಾ

6. ಬಿಸಿ ಮಾಡುವ ಪಾತ್ರೆಯಲ್ಲಿ ಮಿಶ್ರಣವನ್ನು ಸುರಿಯಿರಿ/ಹಾಕಿರಿ

ಹೆಸರು ಬೇಳೆ ಹಲ್ವಾ

7. ನಿರಂತರವಾಗಿ ಕೈ ಆಡಿಸುತ್ತಿರಿ. ಗಂಟಾಗದಂತೆ ನೋಡಿಕೊಳ್ಳಬೇಕು. (ಸಾಮಾನ್ಯ/ಮಧ್ಯಮ ಉರಿಯಲ್ಲಿ ಬೇಯಿಸಿ)

ಹೆಸರು ಬೇಳೆ ಹಲ್ವಾ

8. ಮಿಶ್ರಣ ಹೊಂಬಣ್ಣ/ಗೋಲ್ಡನ್ ಬ್ರೌನ್‍ಗೆ ತಿರುಗುವುದು. (ಮಿಶ್ರಣ ಮತ್ತು ಬಣ್ಣ ಎರಡು ಬದಲಾವಣೆ ಹೊಂದುವುದು)

ಹೆಸರು ಬೇಳೆ ಹಲ್ವಾ

9. 1/4 ಕಪ್ ತುಪ್ಪವನ್ನು ಸುರಿಯಿರಿ.

ಹೆಸರು ಬೇಳೆ ಹಲ್ವಾ

10. ಸಣ್ಣ ಉರಿಯಲ್ಲಿ ಮಿಶ್ರಣವನ್ನು ನಿರಂತರವಾಗಿ ಕೈ ಆಡಿಸುತ್ತಿರಿ.

ಹೆಸರು ಬೇಳೆ ಹಲ್ವಾ

11. ಈ ಸಂದರ್ಭದಲ್ಲಿ, ಇನ್ನೊಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ ಹಾಕಿ.

ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ

ತಕ್ಷಣವೇ ಸಕ್ಕರೆ ಮುಳುಗುವಷ್ಟು ನೀರನ್ನು ಬೆರೆಸಿ ಪಾಕ ತಯಾರಿಸಲು ಇಡಿ
12. ಸಕ್ಕರೆಯು ಹದವಾದ ದಪ್ಪದ ಪಾಕ ಬರುವವರೆಗೆ ಕಾಯಿಸಿ.

ಹೆಸರು ಬೇಳೆ ಹಲ್ವಾ

13. ಪಾಕ ಬಂದಮೇಲೆ ಮಿಶ್ರಣಕ್ಕೆ ಪಾಕವನ್ನು ಸುರಿಯಿರಿ.

ಹೆಸರು ಬೇಳೆ ಹಲ್ವಾ

14. ಸ್ವಲ್ಪ ಸಮಯ ಚನ್ನಾಗಿ ಕೈಯಾಡಿಸಿ. (ಮಿಶ್ರಣವು ಗಟ್ಟಿಯಾಗಿ ಪಾತ್ರೆಯ ಸುತ್ತಲಿನ ತಳ ಬಿಡುವವರೆಗೆ)

ಹೆಸರು ಬೇಳೆ ಹಲ್ವಾ

15. ಚಿಟಕಿ ಏಲಕ್ಕಿ ಪುಡಿಯನ್ನು ಬೆರೆಸಿ.

ಹೆಸರು ಬೇಳೆ ಹಲ್ವಾ

16. ಚೆನ್ನಾಗಿ ಮಿಶ್ರಗೊಳಿಸಿ.

ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ

17. ನಂತರ ಬಡಿಸುವ ಪಾತ್ರೆಗೆ ಸಿಹಿಯನ್ನು ಹಾಕಿ.

ಹೆಸರು ಬೇಳೆ ಹಲ್ವಾ

18. ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕರಿಸಿ.

19. ಕೇಸರಿ ಎಳೆಯನ್ನು ಸಿಹಿಯ ಮೇಲೆ ಅಲಂಕರಿಸಿ.

[ 3.5 of 5 - 36 Users]
X
Desktop Bottom Promotion