Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Monsoon Recipe: ಮಳೆಗಾಲದಲ್ಲಿ ಹಬ್ಬದೂಟ-ಈ ಎರಡು ರೆಸಿಪಿ ಮಳೆಗಾಲದ ಸವಿ ಹೆಚ್ಚಿಸುತ್ತೆ..!
Monsoon Recipe: ಮಳೆಗಾಲದಲ್ಲಿ ಅದ್ಭುತ ರುಚಿಯ ಟೇಸ್ಟಿ ಟೇಸ್ಟಿ ಖಾದ್ಯಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಕೆಲವೊಂದು ಖಾದ್ಯಗಳನ್ನು ಮಳೆಗಾಲದಲ್ಲಿ ಮಾತ್ರವೇ ಮಾಡಿ ಸವಿಯುವುದು ನೋಡಬಹುದು. ಹಾಗೆ ಮಳೆಗಾಲದ 3ರಿಂದ 4 ತಿಂಗಳ ನಡುವೆ ಮಾತ್ರವೇ ನೋಡಲು ಸಿಗುವಂತಹ ಖಾದ್ಯಗಳು ಸಹ ನಮ್ಮ ನಡುವೆ ಇದೆ.
ಅದ್ರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಮಾತ್ರವೇ ಮಾಡುವಂತಹ ಖಾದ್ಯಗಳಲ್ಲಿ ಪತ್ರೊಡೆ ಕೂಡ ಒಂದು. ಮರಗೆಸು ಎಲೆಗಳ ಬಳಸಿಕೊಂಡು ಈ ಪತ್ರೊಡೆಯನ್ನು ಮಾಡಲಾಗುತ್ತದೆ. ಇದು ಮಳೆಗಾಲದಲ್ಲಿ ಮಾತ್ರವೇ ಮಾಡುವಂತಹ ವಿಶಿಷ್ಟ ಖಾದ್ಯ ಎನ್ನಬಹುದು. ಇದನ್ನು ಮಳೆಗಾಲದ ಸಮಯದಲ್ಲಿ ಸವಿಯಲು ಬಹಳ ರುಚಿ ನೀಡಲಿದೆ.

ಹಾಗಾದ್ರೆ ಈ ಮರಗೆಸ ಬಳಸಿ ಪತ್ರೊಡೆ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮರಗೆಸ ಬಳಸಿ ಪತ್ರೊಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮರಗೆಸ ಎಲೆಗಳು
- ತೊಗರಿ ಬೇಳೆ
- ಕಡಲೆಬೇಳೆ
- ಮೆಂತ್ಯ
- ಅಕ್ಕಿ
- ದನಿಯಾ ಕಾಳು
- ಜೀರಿಗೆ
- ತೆಂಗಿನಕಾಯಿ
- ಒಣ ಮೆಣಸು
- ಇಂಗು
- ಬೆಲ್ಲ
- ಹುಣಸೆ ಹಣ್ಣು
- ಅರಶಿಣ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಉಪ್ಪು
ಮರಗೆಸ ಬಳಸಿ ಪತ್ರೊಡೆ ಮಾಡುವ ವಿಧಾನವೇನು?
ಮೊದಲಿಗೆ ಒಂದು ಅಳತೆ ಕಪ್ನಲ್ಲಿ 2 ಕಪ್ ಅಕ್ಕಿಯನ್ನು ಪಾತ್ರೆಗೆ ಹಾಕಿಕೊಂಡು ತೊಳೆದು ಇಟ್ಟುಕೊಳ್ಳಿ. ಈ ಅಕ್ಕಿಗೆ 4 ಸ್ಪೂನ್ ತೊಗರಿ ಬೇಳೆ, 4 ಸ್ಪೂನ್ ಕಡಲೆಬೇಳೆ ಹಾಗೆ 1 ಸ್ಪೂನ್ ಮೆಂತ್ಯ ಹಾಕಿಕೊಂಡು ನೀರು ಹಾಕಿ ನೆನೆಸಿ ಇಡಬೇಕು. ಕನಿಷ್ಠ 5 ಗಂಟೆ ನೆನೆಸಿಡಬೇಕು. ಹಾಗೆ ಬಳಿಕ ನೀರಿನಿಂದ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ.
ಈಗ ಈ ಅಕ್ಕಿ ಬೇಳೆಗೆ 3 ಸ್ಪೂನ್ ದನಿಯಾ ಕಾಳು, ಜೀರಿಗೆ, ಸಣ್ಣದಾಗಿ ಕತ್ತರಿಸಿದ ತೆಂಗಿನಕಾಯಿ, ಒಣ ಮೆಣಸು, ಇಂಗು, ಬೆಲ್ಲ, ಹುಣಸೆ ಹಣ್ಣು, ಅರಶಿಣ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಾಕಿಕೊಂಡು ಇದನ್ನು ಮಿಕ್ಸಿ ಜಾರ್ಗೆ ಸ್ವಲ್ಪ ಸ್ವಲ್ಪ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಚಟ್ನಿಯಂತೆ ಈ ಹಿಟ್ಟು ಬರಬೇಕು.
ಈ ಹಿಟ್ಟಿಗೆ ಈಗ ಸ್ವಲ್ಪ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮರಗೆಸ ತೆಗೆದುಕೊಂಡು ಆ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಇದು ತರಕಾರಿ ಅಂಗಡಿಗಳಲ್ಲೂ ಮಳೆಗಾಲದಲ್ಲಿ ಸಿಗುತ್ತದೆ. ಈ ಎಲೆಯಲ್ಲಿರುವ ದಂಟನ್ನು ತೆಗೆಯಬೇಕು. ಮಧ್ಯದಲ್ಲಿರುವ ದಂಟನ್ನು ಕತ್ತರಿಸಿಕೊಳ್ಳಬೇಕು. ಇಲ್ಲದಿದ್ದರೆ ಮಡಚಿಕೊಳ್ಳಲು ಹಾಗೆ ಅದನ್ನು ಸವಿಯಲು ಗಟ್ಟಿಯಾಗುತ್ತದೆ.
ಈಗ ಎಲೆಗಳ ಮೇಲೆ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಸವರಿಕೊಳ್ಳಬೇಕು. ಎಲೆಯ ತುಂಬೆಲ್ಲಾ ನೀಟಾಗಿ ಸವರಿಕೊಳ್ಳಬೇಕು. ನಂತರ ಅದರ ಮೇಲೆ ಮತ್ತೊಂದು ಎಲೆ ಇಟ್ಟು ಅದಕ್ಕೂ ಹಿಟ್ಟು ಹಾಕಿ ಸವರಿಕೊಳ್ಳಬೇಕು. ಬಹಳ ದಪ್ಪವಾಗಿ ಸವರಬೇಡಿ, ಹಾಗೆ ತೆಳುವಾಗಿಯೂ ಸವರಬೇಡಿ. ಒಟ್ಟು ಮೂರು ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಹಿಟ್ಟು ಹಾಕಿ ಸವರಿಕೊಳ್ಳಿ. ಒಂದು ಬಾರಿ 4ರಿಂದ 5 ಎಲೆಗಳನ್ನು ಕೂಡ ಒಂದರ ಮೇಲೆ ಒಂದನ್ನು ಇಡಬಹುದು.

ಈಗ ಎಲೆಗಳನ್ನು ಎಲ್ಲಾ ಕಡೆಗಳಿಂದಲೂ ಮಡಚಬೇಕು. ಹಾಗೆ ಮಡಚಿದಾಗ ಹಿಟ್ಟು ಹಿಡಿಯದ ಜಾಗಕ್ಕೆ ಮತ್ತೆ ಹಿಟ್ಟು ಸವರಿಕೊಳ್ಳಬೇಕು. ಹೀಗೆ ಎಲ್ಲಾ ಎಲೆಗಳಿಗೂ ಹಿಟ್ಟನು ಸವರಿ ಇಟ್ಟುಕೊಳ್ಳಿ. ಈಗ ಇಡ್ಲಿ ಬೇಯಿಸುವ ಕುಕ್ಕರ್ ಅಥವಾ ಸ್ಟೀಮರ್, ಕಡಬು ಮಾಡುವ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಬೇಕು. ಸುಮಾರು 25ರಿಂದ 30 ನಿಮಿಷಗಳ ಕಾಲ ಬೇಯಿಸಿಕೊಂಡರೆ ಸಾಕಾಗುತ್ತದೆ. ನಂತರ ಇದನ್ನು ಕತ್ತರಿಸಿಕೊಂಡು ತುಪ್ಪ, ಚಟ್ನಿಯೊಂದಿಗೆ ಸವಿಯಲು ಇದು ಬಹಳ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಮಾಡಿ.
ಮಳೆಗಾಲಕ್ಕೆ ಬೆಸ್ಟ್ ಈ ಹುರುಳಿ ಕಟ್ಟಿನ ಸಾರು
ಇನ್ನು ಮಳೆಗಾಲದ ಸಮಯದಲ್ಲಿ ಮಲೆನಾಡು ಭಾಗದಲ್ಲಿ ಹುರುಳಿಕಟ್ಟಿನ ಸಾರು ಬಹಳ ಫೇಮಸ್. ದನ ಕರುಗಳಿಗೆ ಹುರುಳಿ ಬೇಯಿಸಲು ಖರೀದಿಸುವ ಹುರುಳಿಯಿಂದಲೇ ಅದ್ಭುತ ಸಾರು ಮಾಡಬಹುದು. ಅದ್ರಲ್ಲೂ ಮಳೆಗಾಲದಲ್ಲಿ ಮಾಡುವ ಈ ರುಚಿ ರುಚಿಯ ಸಾರು ಊಟದ ರುಚಿ ಹೆಚ್ಚಿಸಲಿದೆ. ಇದು ಕೂಡ ಮಳೆಗಾಲದ ಸಮಯದಲ್ಲಿ ಮಾತ್ರವೇ ಹೆಚ್ಚಾಗಿ ಮಾಡುತ್ತಾರೆ.
ಹುರುಳಿ ಕಟ್ಟಿನ ಈ ಸಾರಿಗೆ ಒಂದು ಒಗ್ಗರಣೆ ಹಾಕಿದರೆ ಊಟದ ಜೊತೆಗೆ ಸವಿಯಲು ರುಚಿ ದುಪ್ಪಟ್ಟಾಗುತ್ತೆ. ಹಾಗಾದ್ರೆ ಈ ಹುರುಳಿ ಸಾರು ಮಾಡುವುದು ಹೇಗೆ? ಈ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುರುಳಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹುರುಳಿ
- ಹಸಿ ಮೆಣಸು
- ಈರುಳ್ಳಿ
- ಹುಣಸೆ ಹುಳಿ
- ಉಪ್ಪು
- ಬೆಳ್ಳುಳ್ಳಿ
- ಕರಿಬೇವು
ಹುರುಳಿ ಸಾರು ಮಾಡುವುದು ಹೇಗೆ?
ಮೊದಲು ಹುರುಳಿ ಕಾಳನ್ನು ನೆನೆಸಿಟ್ಟುಕೊಳ್ಳಿ. ಈಗ ತೊಳೆದ ಹೆಸರು ಕಾಳನ್ನು ಕುಕ್ಕರ್ಗೆ ಹಾಕಿ ಅದು ಮುಚ್ಚುವಷ್ಟು ನೀರು ಹಾಕಿ 10 ಸೀಟಿ ಹೊಡೆಸಿಕೊಳ್ಳಬೇಕು. ಬಳಿಕ ಕುಕ್ಕರ್ ತಣ್ಣಗಾಗಲು ಬಿಟ್ಟು ನಂತರ ಅದರಲ್ಲಿನ ಕಾಳುಗಳನ್ನು ಬೇರ್ಪಡಿಸಿ ಕೇವಲ ನೀರನ್ನು ಮಾತ್ರ ತೆಗೆದುಕೊಳ್ಳಿ.
ಈ ನೀರನ್ನು ಈಗ ಒಂದು ಬಾಣಲೆಗೆ ಹಾಕಿಕೊಂಡು ಒಲೆ ಮೇಲೆ ಇಡಿ. ಈಗ ಒಂದು ಮುಷ್ಟಿಯಷ್ಟು ಕುಕ್ಕರ್ನಲ್ಲಿ ಬೇಯಿಸಿದ್ದ ಕಾಳನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಅದನ್ನು ಕೂಡ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಸಾರು ದಪ್ಪವಾಗಿ ಬರಲಿದೆ.
ಈಗ ಕುದಿಬರಲು ಆರಂಭವಾದಾಗ ಇದಕ್ಕೆ ಉಪ್ಪು, ಹಸಿ ಮೆಣಸು, ಈರುಳ್ಳಿ, ಹುಣಸೆ ಹುಳಿ ನೀರು ಹಾಕಿ ಚೆನ್ನಾಗಿ ಕುದಿಬರಲು ಬಿಡಿ. ಈಗ ಇದಕ್ಕೆ ಒಗ್ಗರಣೆ ಹಾಕಿಕೊಳ್ಳಬೇಕು. ಗ್ಯಾಸ್ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸಾಸಿವೆ, ಒಣ ಮೆಣಸು, ಬೆಳ್ಳುಳ್ಳಿ, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಸಾರಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹುರುಳಿ ಕಟ್ಟಿನ ಸಾರು ರೆಡಿಯಾಗುತ್ತದೆ. ಇದು ಸಹ ಮಳೆಗಾಲದಲ್ಲಿ ಮಾಡುವಂತಹ ವಿಶೇಷ ಖಾದ್ಯವಾಗಿದೆ.



Click it and Unblock the Notifications