Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಹೆಲ್ತಿ ಸ್ನ್ಯಾಕ್ಸ್ ರೆಸಿಪಿ: ಮಿಕ್ಸ್ ವೆಜ್ ಕಟ್ಲೇಟ್
ಮಕ್ಕಳಿಗೆ ಹೊರಗಿನಿಂದ ಸ್ನ್ಯಾಕ್ಸ್ ತಂದು ನೀಡುವುದಕ್ಕಿಂತ ಆದಷ್ಟು ಮನೆಯಲ್ಲಿಯೇ ಮಾಡಿ ಕೊಡುವುದು ಒಳ್ಳೆಯದು. ನಮ್ಮ ಮಕ್ಕಳು ತರಕಾರಿ ತಿನ್ನಲ್ಲ, ಸಾರಿಗೆ ಹಾಕಿ ಕೊಟ್ಟರೆ ಬದಿಗಿಡುತ್ತಾರೆ ಎಂದು ಬಹುತೇಕ ಪೋಷಕರು ಹೇಳುತ್ತಾರೆ.

ಮಕ್ಕಳ ಬೆಳವಣಿಗೆಗೆ ತರಕಾರಿ ಅವಶ್ಯಕ. ಇಲ್ಲಿ ನಾವು ಸಂಜೆ ಸ್ನ್ಯಾಕ್ಸ್‌ಗೆ ನೀಡಬಹುದಾದ ಕಟ್ಲೇಟ್ ರೆಸಿಪಿ ನೀಡಿದ್ದೇವೆ. ಇದರಲ್ಲಿ ಸಿಹಿಗೆಣಸು, ಬೀಟ್‌ರೂಟ್, ಬೀನ್ಸ್ ಬಳಸಿದ್ದೇವೆ.
ಇದರ ಜೊತೆಗೆ ಕ್ಯಾರೆಟ್, ಬೀನ್ಸ್ ಈ ರೀತಿಯ ತರಕಾರಿ ಕೂಡ ಸೇರಿಸಬಹುದು. ಇದು ರುಚಿಯ ಜೊತೆಗೆ ಕಲರ್‌ಫುಲ್ ಆಗಿರುವುದರಿಂದ ಮಕ್ಕಳಿಗೆ ತುಂಬಾ ಇಷ್ಟವಾಗುವುದು. ಬನ್ನಿ ಈ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
1 ಸಿಹಿಗೆಣಸು
1/4 ಭಾಗ ಬೀಟ್‌ರೂಟ್
1 ಕ್ಯಾರೆಟ್
4 ಬೀನ್ಸ್
1/2 ಹಸಿ ಮೆಣಸಿನಕಾಯಿ
ರುಚಿಗೆ ತಕ್ಕ ಉಪ್ಪು
2 ಚಮಚ ತುಪ್ಪ
-
ಮಾಡುವ ವಿಧಾನ
* ಎಲ್ಲಾ ತರಕಾರಿಯನ್ನು ಬೇಯಿಸಿಕೊಳ್ಳಬೇಕು.
* ನಂತರ ಅದನ್ನು ಮ್ಯಾಶ್ ಮಾಡಿ, ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ಮಿಶ್ರಣದಿಂದ ಚಿಕ್ಕ ಆಲೂಗಡ್ಡೆ ಗಾತ್ರದ ಉಂಡೆ ಕಟ್ಟಿ ಅದನ್ನು ಕಟ್ಲೇಟ್ ರೀತಿಯಲ್ಲಿ ತಟ್ಟಿ.
*ಈಗ ತವಾ ಬಿಸಿ ಮಾಡಿ ತುಪ್ಪ ಹಾಕಿ ತಟ್ಟಿದ ಕಟ್ಲೇಟ್ ಹಾಕಿ ಎರಡೂ ಬದಿ 5 ನಿಮಿಷ ಬೇಯಿಸಿ, ನಂತರ ಸವಿಯಲು ನೀಡಿ.
- ಸ್ವಲ್ಪ ದೊಡ್ಡ ಮಕ್ಕಳಾದರೆ ವಡಾಪಾವ್ ರೀತಿ ಸವಿಯಲು ನೀಡಬಹುದು. ಅವರಿಗೆ ತುಂಬಾನೇ ಇಷ್ಟವಾಗುವುದು.
- ಕ್ಯಾಲೋರಿ: - 44ಕ್ಯಾ
- ಪ್ರೊಟೀನ್: - 1.3 ಗ್ರಾಂ
- ಕಾರ್ಬ್ಸ್: - 8 ಗ್ರಾಂ
- ನಾರಿನಂಶ: - 1.7ಗ್ರಾಂ



Click it and Unblock the Notifications
