Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಐಸ್ಕ್ರೀಮ್ ಮಿಲ್ಕ್ಶೇಕ್ ಪರ್ಫೆಕ್ಟ್ ರುಚಿಯಲ್ಲಿ ಸವಿಯಲು ಹೀಗೆ ಮಾಡಬೇಕು ನೋಡಿ
ಬಿಸಿಲಿನ ಧಗೆಯಲ್ಲಿ ತಣ್ಣನೆಯ ಜ್ಯೂಸ್ ಅಥವಾ ಐಸ್ಕ್ರೀಮ್ ಇವುಗಳನ್ನು ಸೇವಿಸಲು ತುಂಬಾನೇ ಇಷ್ಟವಾಗುವುದು, ಅದರಲ್ಲೂ ಮಿಲ್ಕ್ಶೇಕ್ ಅಂತೂ ಹೊಟ್ಟೆಯನ್ನೂ ತುಂಬಿಸುತ್ತದೆ, ನಾವಿಲ್ಲಿ ಮಿಲ್ಕ್ಶೇಕ್ಗೆ ಐಸ್ಕ್ರೀಮ್ ಹಾಕಿ ಮಾಡುವ ರೆಸಿಪಿ ನೀಡಿದ್ದೇವೆ.
ಈ ಮಿಲ್ಕ್ಶೇಕ್ ಇದೆಯೆಲ್ಲಾ ಅದನ್ನು ಸರಿಯಾದ ರೀತಿಯಲ್ಲಿ ಮಾಡದೆ ಹೋದರೆ ರುಚಿ ಚೆನ್ನಾಗಿರಲ್ಲ, ಕೆಲವೊಂದು ಹೋಟೆಲ್ಗಳಲ್ಲೂ ಆ ತಪ್ಪು ಮಾಡ್ತಾರೆ, ಆದರೆ ನಾವಿಲ್ಲಿ ಪರ್ಫೆಕ್ಟ್ ಐಸ್ಕ್ರೀಮ್ ಮಿಲ್ಕ್ಶೇಕ್ ಮಾಡುವುದು ಹೇಗೆ ಎಂದು ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
4-5 ಸಪೋಟಾ
1 ಗ್ಲಾಸ್ ಹಾಲು
2 ಚಮಚ ಕಂಡೆನ್ಸ್ಡ್ ಹಾಲು
2 ಸ್ಕೂಪ್ ಐಸ್ಕ್ರೀಮ್
ಮಾಡುವ ವಿಧಾನ
ಮೊದಲು ಸಪೋಟಾದ ಸಿಪ್ಪೆ ತೆಗೆಯಿರಿ
ನಂತರ ಸಪೋಟಾ, ಕಂಡೆನ್ಸ್ಡ್ ಮಿಲ್ಕ್ , ಸಕ್ಕರೆ ಹಾಕಿ 1-2 ನಿಮಿಷ ಮಿಕ್ಸಿಯಲ್ಲಿ
ತಿರುಗಿಸಿ.
ನಂತರ ನಂತರ ಐಸ್ಕ್ರೀಮ್ ಸ್ಕೂಪ್, ಹಾಲು ಹಾಕಿ ಮಿಕ್ಸಿಯನ್ನು ಎರಡು ರೌಂಡ್
ತಿರುಗಿಸಿ.
ನಂತರ ಡೆಕೋರೇಟ್ ಮಾಡಿ ಸರ್ವ್ ಮಾಡಿ.
ರೆಸಿಪಿ 2
ಸಪೋಟಾ ಅನ್ನು ಮಿಕ್ಸಿ ಜಾರ್ನಲ್ಲಿ ಹಾಕಿ, ಸಕ್ಕರೆ ಹಾಕಿ, ಸ್ವಲ್ಪ ಹಾಲು ಹಾಕಿ ಸಪೋಟಾ ನುಣ್ಣನೆ ಆಗುವಂತೆ ರುಬ್ಬಿ, ನಂತರ ಹಾಲು ಹಾಕಿ ಎರಡು ರೌಂಡ್ ತಿರುಗಿಸಿ, ನಂತರ ಐಸ್ ಕ್ರೀಮ್ ಸ್ಕೂಪ್ ಅನ್ನು ಹಾಗೆ ಹಾಕಿ ಸರ್ವ್ ಮಾಡಬಹುದು.
ಮಿ ಲ್ಕ್ ಶೇಕ್
ಸಪೋಟಾಗೆ ಹಾಲು ಹಾಕಿ ಸಕ್ಕರೆ ಹಾಕಿ ಮಿಲ್ಕ್ ಶೇಕ್ ಮಾಡಿ ಸವಿಯಬಹುದು.
ಐಸ್ಕ್ರೀಮ್ ಮಿಲ್ಕ್ಶೇಕ್ ಮಾಡುವಾಗ ಈ ವಿಷಯ
ಗಮನಹರಿಸಬೇಕು
ಸರಿಯಾದ ಪ್ರಮಾಣದ ಹಾಲು ಬಳಸಬೇಕು
ಮನೆಯಲ್ಲಿ ಮಿಲ್ಕ್ಶೇಕ್ ಮಾಡುವಾಗ ಅದಕ್ಕೆ ಸರಿಯಾದ ಪ್ರಮಾಣದ ಹಾಲು ಬಳಸಬೇಕು,
ಆದರೆ ಕೆಲವರು ತುಂಬಾನೇ ಅಧಿಕ ಹಾಲು ಬಳಸುತ್ತಾರೆ, ಹೀಗೆ ಮಾಡಿದರೆ ನೀವು ಬಯಸಿದಂತ
ಮಿಲ್ಕ್ ಶೇಕ್ ರೆಡಿಯಾಗುವುದಿಲ್ಲ. ಇನ್ನು ತುಂಬಾ ಕಡಿಮೆ ಹಾಲು ಕೂಡ
ಬಳಸಬಾರದು.
ಐಸ್ ಅನ್ನು ಮಿಲ್ಕ್ಶೇಕ್ಗೆ ಹಾಕಲೇಬಾರದು
ಕೆಲವೊಂದು ಹೋಟೆಲ್ಗಳಲ್ಲೂ ಈ ತಪ್ಪು ಮಾಡುತ್ತಾರೆ, ನೀವು ಮಿಲ್ಕ್ಶೇಕ್
ಕೇಳಿದರೆ ಅವರು ಅದಕ್ಕೆ ಸ್ವಲ್ಪ ಐಸ್ಕ್ಯೂಬ್ ಕೂಡ ಹಾಕಿ ಕೊಡುತ್ತಾರೆ, ಹೀಗೆ
ಮಾಡಿದರೆ ಮಿಲ್ಕ್ಸೇಕ್ ಟೇಸ್ಟ್ ಚೆನ್ನಾಗಿರಲ್ಲ, ಐಸ್ ಬಳಸಬೇಡಿ, ಬದಲಿಗೆ
ತಣ್ಣನೆಯ ಹಾಲನ್ನು ಬಳಸಿ.
ಬೆಸ್ಟ್ ಐಸ್ಕ್ರೀಮ್ ಬಳಸಿ
ತುಂಬಾ ಸಿಹಿ ಇರುವ ಮಿಲ್ಕ್ ಶೇಕ್ ಬಳಸಿ. ಅದರಲ್ಲೂ ವೆನಿಲ್ಲಾ ಐಸ್ಕ್ರೀಮ್
ಹಾಕುವುದು ಒಳ್ಳೆಯದು, ಅಲ್ಲದೆ ನೀವು ಬೇಕಾದರೆ ಇದಕ್ಕೆ ಚಾಕೋಲೆಟ್ ಸಿರಪ್,
ಹಣ್ಣುಗಳನ್ನು ಬಳಸಬಹುದು.
ಐಸ್ಗಡ್ಡೆಯಂತೆ ಇರುವ ಐಸ್ಕ್ರೀಮ್ ಹಾಕಬಾರದು
ಐಸ್ಕ್ರೀಮ್ ಅನ್ನು ನೀವು ಫ್ರಿಡ್ಜ್ನಿಂದ ತೆಗೆದು ಹಾಕಬಾರದು, ಅದು ಸ್ವಲ್ಪ
ಕರಗುವ ರೀತಿಯಲ್ಲಿ ಇರಬೇಕು. ಐಸ್ಕ್ರೀಮ್ ಅನ್ನು ಸ್ವಲ್ಪ ಹೊತ್ತು ರೂಂನ
ಉಷ್ಣತೆಗೆ ಇಟ್ಟು ನಂತರ ಬಳಸುವುದು ಒಳ್ಳೆಯದು.
ರಮ್ ಕೂಡ ಹಾಕಬಹುದು
ದೊಡ್ಡವರಿಗೆ ಮಿಲ್ಕ್ಶೇಕ್ ಮಾಡುವಾಗ ನೀವು ಸ್ವಲ್ಪ ರಮ್ ಕೂಡ ಸೇರಿಸಿ
ಮಾಡಬಹುದು ಗೊತ್ತಾ?



Click it and Unblock the Notifications