ನವರಾತ್ರಿ ಹಬ್ಬಕ್ಕೆ ಸ್ಪೆಷಲ್: ಹಾಲಿನ ಪೇಡ ರೆಸಿಪಿ

By: Divya pandith
Subscribe to Boldsky

ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರು ಇಷ್ಟ ಪಡುವಂತಹ ಸಿಹಿ ತಿಂಡಿ ಎಂದರೆ ದೂಧ್ ಪೇಡಾ/ಹಾಲಿನ ಪೇಡಾ. ಭಾರತೀಯರ ಜನಪ್ರಿಯ ಸಿಹಿ ತಿಂಡಿಯಾದ ಇದನ್ನು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ಭಾರತದ ಮೂಲೆ ಮೂಲೆಯ ಜನರಿಗೂ ಇದರ ಪರಿಚಯವಿದೆ. ಅಲ್ಲದೆ ಇದನ್ನು ಎಲ್ಲಾ ಕಾಲದಲ್ಲೂ ತಯಾರಿಸಬಹುದು.

ದೂಧ್ ಪೇಡಾ ಅಥವಾ ಹಾಲಿನ ಪೇಡಾ ಪಾಕವಿಧಾನವನ್ನು ಹಾಲಿನ ಪುಡಿ, ಘನೀಕೃತ ಹಾಲು, ಸಕ್ಕರೆ, ಏಲಕ್ಕಿ ಮತ್ತು ಜಾಯಿಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದನ್ನು ಬಲು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಹಾಗಾಗಿಯೇ ಉತ್ತರ ಭಾರತದ ಕಡೆ ದೇವರ ನೈವೇದ್ಯಕ್ಕೆ ಕಡ್ಡಾಯವಾಗಿ ಈ ಪೇಡಾವನ್ನು ತಯಾರಿಸುತ್ತಾರೆ. ವಿಶೇಷ ಸಂದರ್ಭದಲ್ಲಿ ಹಾಗೂ ಸಾಮಾನ್ಯ ದಿನಗಳಲ್ಲೂ ತಯಾರಿಸಬಹುದು. ರುಚಿಕರವಾದ ಈ ಪೇಡಾವನ್ನು ನೀವು ತಯಾರಿಸಲು ಬಯಸುತ್ತಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

milk peda recipe
ಹಾಲಿನ ಪೇಡಾ ಪಾಕವಿಧಾನ | ದೂಧ್ ಪೇಡಾ ರೆಸಿಪಿ | ಹಂತ ಹಂತವಾದ ಹಾಲಿನ ಪೇಡಾ ಪಾಕವಿಧಾನ | ಹಾಲಿನ ಪೇಡಾ ವಿಡಿಯೋ ರೆಸಿಪಿ | ಸಾಂಪ್ರದಾಯಿಕ ಸಿಹಿ ತಿಂಡಿಯ ಪಾಕವಿಧಾನ.
ಹಾಲಿನ ಪೇಡಾ ಪಾಕವಿಧಾನ | ದೂಧ್ ಪೇಡಾ ರೆಸಿಪಿ | ಹಂತ ಹಂತವಾದ ಹಾಲಿನ ಪೇಡಾ ಪಾಕವಿಧಾನ | ಹಾಲಿನ ಪೇಡಾ ವಿಡಿಯೋ ರೆಸಿಪಿ | ಸಾಂಪ್ರದಾಯಿಕ ಸಿಹಿ ತಿಂಡಿಯ ಪಾಕವಿಧಾನ.
Prep Time
5 Mins
Cook Time
20M
Total Time
25 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 12 ಪೇಡಾ

Ingredients
 • ಮಂದಗೊಳಿಸಿದ ಹಾಲು - 200 ಗ್ರಾಂ

  ಹಾಲಿನ ಹಿಟ್ಟು/ಪುಡಿ - 3/4 ಕಪ್

  ತುಪ್ಪ - 1/2 ಟೇಬಲ್ ಚಮಚ

  ಏಲಕ್ಕಿ ಪುಡಿ - 1 ಟೀ ಚಮಚ

  ಜಾಯಿಕಾಯಿ ಪುಡಿ - ಒಂದು ಚಿಟಕಿ

  ಕೇಸರಿ ಎಳೆ - 3-4

Red Rice Kanda Poha
How to Prepare
 • 1. ಸ್ವಲ್ಪ ಬಿಸಿ ಮಾಡಿದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ.

  2. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಸೇರಿಸಿ.

  3. ಎಲ್ಲವೂ ಸರಿಯಾಗಿ ಮಿಶ್ರಗೊಳ್ಳುವಂತೆ ಹಾಗೂ ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಿ.

  4. ಏಲಕ್ಕಿ ಪುಡಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ.

  5. ಈ ಮಿಶ್ರಣವು ಚೆನ್ನಾಗಿ ಕುದಿ ಬಂದು, ಸುತ್ತಲ ತಳ ಬಿಡುವವರೆಗೂ ಕೈಯಾಡಿಸುತ್ತಲೇ ಇರಬೇಕು.

  6. ಪಾತ್ರೆಯ ಸುತ್ತಲಿನ ತಳ ಬಿಟ್ಟ ನಂತರ 5-10 ನಿಮಿಷ ಆರಲು ಬಿಡಿ.

  7. ಕೇಸರಿ ಎಳೆಯನ್ನು ಸೇರಿಸಿ.

  8. ಸ್ವಲ್ಪ ಸ್ವಲ್ಪ ಮಿಶ್ರಣದ ಮುದ್ದೆಯನ್ನು ತೆಗೆದುಕೊಂಡು ಅಂಗೈಯಲ್ಲಿ ಚಿಕ್ಕ ಉಂಡೆಯನ್ನಾಗಿ ತಿರುಗಿಸಿ.

  9. ನಂತರ ಅಂಗೈಯಲ್ಲಿಯೇ ಅದನ್ನು ಚಪ್ಪಟೆಯಾಕಾರಕ್ಕೆ ಒತ್ತಿ.

  10. ಪೇಡದ ಮೇಲೆ ಹೆಬ್ಬೆರಳಿನಿಂದ ಒತ್ತಿ.

Instructions
 • 1. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಬಳಸುವ ಬದಲು ಸಾಮಾನ್ಯ ಹಾಲು ಮತ್ತು ಸಕ್ಕರೆಯನ್ನು ಬಳಸಬಹುದು.
 • 2. ಹಾಲಿನ ಪೇಡವನ್ನು ಖೋಯಾ ಬಳಸಿಕೊಂಡು ತಯಾರಿಸಬಹುದು.
 • 3. ಮಿಶ್ರಣವನ್ನು ಹೆಚ್ಚು ಬೇಯಿಸಿದರೆ ಬಹಳ ಗಟ್ಟಿಯಾಗಿಬಿಡುವುದು.
Nutritional Information
 • ಸರ್ವಿಂಗ್ ಸೈಜ್ - 1 ಪೇಡಾ
 • ಕ್ಯಾಲೋರಿ - 203 ಕ್ಯಾಲ್
 • ಫ್ಯಾಟ್ - 5 ಗ್ರಾಂ.
 • ಪ್ರೋಟೀನ್ - 4 ಗ್ರಾಂ.
 • ಕಾರ್ಬೋಹೈಡ್ರೇಟ್ - 12 ಗ್ರಾಂ.
 • ಸಕ್ಕರೆ - 8 ಗ್ರಾಂ.

ಹಂತ ಹಂತವಾದ ಪಾಕವಿಧಾನ

1. ಸ್ವಲ್ಪ ಬಿಸಿ ಮಾಡಿದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ.

milk peda recipe

2. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಸೇರಿಸಿ.

milk peda recipe
milk peda recipe

3. ಎಲ್ಲವೂ ಸರಿಯಾಗಿ ಮಿಶ್ರಗೊಳ್ಳುವಂತೆ ಹಾಗೂ ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಿ.

milk peda recipe

4. ಏಲಕ್ಕಿ ಪುಡಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ.

milk peda recipe
milk peda recipe

5. ಈ ಮಿಶ್ರಣವು ಚೆನ್ನಾಗಿ ಕುದಿ ಬಂದು, ಸುತ್ತಲ ತಳ ಬಿಡುವವರೆಗೂ ಕೈಯಾಡಿಸುತ್ತಲೇ ಇರಬೇಕು.

milk peda recipe
milk peda recipe

6. ಪಾತ್ರೆಯ ಸುತ್ತಲಿನ ತಳ ಬಿಟ್ಟ ನಂತರ 5-10 ನಿಮಿಷ ಆರಲು ಬಿಡಿ.

milk peda recipe

7. ಕೇಸರಿ ಎಳೆಯನ್ನು ಸೇರಿಸಿ.

milk peda recipe

8. ಸ್ವಲ್ಪ ಸ್ವಲ್ಪ ಮಿಶ್ರಣದ ಮುದ್ದೆಯನ್ನು ತೆಗೆದುಕೊಂಡು ಅಂಗೈಯಲ್ಲಿ ಚಿಕ್ಕ ಉಂಡೆಯನ್ನಾಗಿ ತಿರುಗಿಸಿ.

milk peda recipe
milk peda recipe

9. ನಂತರ ಅಂಗೈಯಲ್ಲಿಯೇ ಅದನ್ನು ಚಪ್ಪಟೆಯಾಕಾರಕ್ಕೆ ಒತ್ತಿ.

milk peda recipe

10. ಪೇಡದ ಮೇಲೆ ಹೆಬ್ಬೆರಳಿನಿಂದ ಒತ್ತಿ.

milk peda recipe
milk peda recipe
[ 4 of 5 - 76 Users]
Story first published: Saturday, September 9, 2017, 13:13 [IST]
Subscribe Newsletter