Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನವರಾತ್ರಿ ಹಬ್ಬಕ್ಕೆ ಸ್ಪೆಷಲ್: ಹಾಲಿನ ಪೇಡ ರೆಸಿಪಿ
ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರು ಇಷ್ಟ ಪಡುವಂತಹ ಸಿಹಿ ತಿಂಡಿ ಎಂದರೆ ದೂಧ್ ಪೇಡಾ/ಹಾಲಿನ ಪೇಡಾ. ಭಾರತೀಯರ ಜನಪ್ರಿಯ ಸಿಹಿ ತಿಂಡಿಯಾದ ಇದನ್ನು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ಭಾರತದ ಮೂಲೆ ಮೂಲೆಯ ಜನರಿಗೂ ಇದರ ಪರಿಚಯವಿದೆ. ಅಲ್ಲದೆ ಇದನ್ನು ಎಲ್ಲಾ ಕಾಲದಲ್ಲೂ ತಯಾರಿಸಬಹುದು.
ದೂಧ್ ಪೇಡಾ ಅಥವಾ ಹಾಲಿನ ಪೇಡಾ ಪಾಕವಿಧಾನವನ್ನು ಹಾಲಿನ ಪುಡಿ, ಘನೀಕೃತ ಹಾಲು, ಸಕ್ಕರೆ, ಏಲಕ್ಕಿ ಮತ್ತು ಜಾಯಿಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದನ್ನು ಬಲು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಹಾಗಾಗಿಯೇ ಉತ್ತರ ಭಾರತದ ಕಡೆ ದೇವರ ನೈವೇದ್ಯಕ್ಕೆ ಕಡ್ಡಾಯವಾಗಿ ಈ ಪೇಡಾವನ್ನು ತಯಾರಿಸುತ್ತಾರೆ. ವಿಶೇಷ ಸಂದರ್ಭದಲ್ಲಿ ಹಾಗೂ ಸಾಮಾನ್ಯ ದಿನಗಳಲ್ಲೂ ತಯಾರಿಸಬಹುದು. ರುಚಿಕರವಾದ ಈ ಪೇಡಾವನ್ನು ನೀವು ತಯಾರಿಸಲು ಬಯಸುತ್ತಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 12 ಪೇಡಾ
-
ಮಂದಗೊಳಿಸಿದ ಹಾಲು - 200 ಗ್ರಾಂ
ಹಾಲಿನ ಹಿಟ್ಟು/ಪುಡಿ - 3/4 ಕಪ್
ತುಪ್ಪ - 1/2 ಟೇಬಲ್ ಚಮಚ
ಏಲಕ್ಕಿ ಪುಡಿ - 1 ಟೀ ಚಮಚ
ಜಾಯಿಕಾಯಿ ಪುಡಿ - ಒಂದು ಚಿಟಕಿ
ಕೇಸರಿ ಎಳೆ - 3-4
-
1. ಸ್ವಲ್ಪ ಬಿಸಿ ಮಾಡಿದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ.
2. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಸೇರಿಸಿ.
3. ಎಲ್ಲವೂ ಸರಿಯಾಗಿ ಮಿಶ್ರಗೊಳ್ಳುವಂತೆ ಹಾಗೂ ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಿ.
4. ಏಲಕ್ಕಿ ಪುಡಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ.
5. ಈ ಮಿಶ್ರಣವು ಚೆನ್ನಾಗಿ ಕುದಿ ಬಂದು, ಸುತ್ತಲ ತಳ ಬಿಡುವವರೆಗೂ ಕೈಯಾಡಿಸುತ್ತಲೇ ಇರಬೇಕು.
6. ಪಾತ್ರೆಯ ಸುತ್ತಲಿನ ತಳ ಬಿಟ್ಟ ನಂತರ 5-10 ನಿಮಿಷ ಆರಲು ಬಿಡಿ.
7. ಕೇಸರಿ ಎಳೆಯನ್ನು ಸೇರಿಸಿ.
8. ಸ್ವಲ್ಪ ಸ್ವಲ್ಪ ಮಿಶ್ರಣದ ಮುದ್ದೆಯನ್ನು ತೆಗೆದುಕೊಂಡು ಅಂಗೈಯಲ್ಲಿ ಚಿಕ್ಕ ಉಂಡೆಯನ್ನಾಗಿ ತಿರುಗಿಸಿ.
9. ನಂತರ ಅಂಗೈಯಲ್ಲಿಯೇ ಅದನ್ನು ಚಪ್ಪಟೆಯಾಕಾರಕ್ಕೆ ಒತ್ತಿ.
10. ಪೇಡದ ಮೇಲೆ ಹೆಬ್ಬೆರಳಿನಿಂದ ಒತ್ತಿ.
- 1. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಬಳಸುವ ಬದಲು ಸಾಮಾನ್ಯ ಹಾಲು ಮತ್ತು ಸಕ್ಕರೆಯನ್ನು ಬಳಸಬಹುದು.
- 2. ಹಾಲಿನ ಪೇಡವನ್ನು ಖೋಯಾ ಬಳಸಿಕೊಂಡು ತಯಾರಿಸಬಹುದು.
- 3. ಮಿಶ್ರಣವನ್ನು ಹೆಚ್ಚು ಬೇಯಿಸಿದರೆ ಬಹಳ ಗಟ್ಟಿಯಾಗಿಬಿಡುವುದು.
- ಸರ್ವಿಂಗ್ ಸೈಜ್ - 1 ಪೇಡಾ
- ಕ್ಯಾಲೋರಿ - 203 ಕ್ಯಾಲ್
- ಫ್ಯಾಟ್ - 5 ಗ್ರಾಂ.
- ಪ್ರೋಟೀನ್ - 4 ಗ್ರಾಂ.
- ಕಾರ್ಬೋಹೈಡ್ರೇಟ್ - 12 ಗ್ರಾಂ.
- ಸಕ್ಕರೆ - 8 ಗ್ರಾಂ.
ಹಂತ ಹಂತವಾದ ಪಾಕವಿಧಾನ
1. ಸ್ವಲ್ಪ ಬಿಸಿ ಮಾಡಿದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ.

2. ಹಾಲಿನ ಪುಡಿ ಮತ್ತು ಮಂದಗೊಳಿಸಿದ ಹಾಲನ್ನು ಸೇರಿಸಿ.


3. ಎಲ್ಲವೂ ಸರಿಯಾಗಿ ಮಿಶ್ರಗೊಳ್ಳುವಂತೆ ಹಾಗೂ ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಿ.

4. ಏಲಕ್ಕಿ ಪುಡಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ.


5. ಈ ಮಿಶ್ರಣವು ಚೆನ್ನಾಗಿ ಕುದಿ ಬಂದು, ಸುತ್ತಲ ತಳ ಬಿಡುವವರೆಗೂ ಕೈಯಾಡಿಸುತ್ತಲೇ ಇರಬೇಕು.


6. ಪಾತ್ರೆಯ ಸುತ್ತಲಿನ ತಳ ಬಿಟ್ಟ ನಂತರ 5-10 ನಿಮಿಷ ಆರಲು ಬಿಡಿ.

7. ಕೇಸರಿ ಎಳೆಯನ್ನು ಸೇರಿಸಿ.

8. ಸ್ವಲ್ಪ ಸ್ವಲ್ಪ ಮಿಶ್ರಣದ ಮುದ್ದೆಯನ್ನು ತೆಗೆದುಕೊಂಡು ಅಂಗೈಯಲ್ಲಿ ಚಿಕ್ಕ ಉಂಡೆಯನ್ನಾಗಿ ತಿರುಗಿಸಿ.


9. ನಂತರ ಅಂಗೈಯಲ್ಲಿಯೇ ಅದನ್ನು ಚಪ್ಪಟೆಯಾಕಾರಕ್ಕೆ ಒತ್ತಿ.

10. ಪೇಡದ ಮೇಲೆ ಹೆಬ್ಬೆರಳಿನಿಂದ ಒತ್ತಿ.





Click it and Unblock the Notifications