Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಉಳಿದ ರೊಟ್ಟಿಯಲ್ಲಿ ರುಚಿ ರುಚಿಯ ಬರ್ಫಿ ಮಾಡಿ..! ವಿಡಿಯೋ ರೆಸಿಪಿ ವೈರಲ್!
ಭಾರತ ಅಂದ್ರೆ ಅದು ಮಧ್ಯಮ ವರ್ಗದ ಕುಟುಂಬವಿರುವ ದೇಶ ಅಂತಲೇ ಹೇಳಬಹುದು. ಪ್ರತಿಯೊಂದು ಖರ್ಚನ್ನು ಸಹ ನಾವು ಹತ್ತು ಬಾರಿ ಯೋಚಿಸಿ ಮಾಡುತ್ತೇವೆ. ಅದ್ರಲ್ಲೂ ಊಟ, ತಿಂಡಿ ವಿಚಾರವಂತು ಕೇಳೋದೆ ಬೇಡ. ನಾವು ಎಷ್ಟು ಲೆಕ್ಕ ಹಾಕಿ ಅಡುಗೆಗೆ ವಸ್ತುಗಳ ಬಳಸುತ್ತೇವೆ. ಒಂದು ವೇಳೆ ಯಾವುದಾದ್ರು ತಿಂಡಿ, ಊಟ ಉಳಿದರೆ ಖಂಡಿತ ಅದನ್ನು ಹಾಳಾಗದಂತೆ ಎತ್ತಿಡುತ್ತೇವೆ.
ರಾತ್ರಿ ಅನ್ನ ಉಳಿದರೆ ಚಿತ್ರಾನ್ನ ಮಾಡುವಂತೆ ನಾವು ಪ್ರತಿಯೊಂದು ವಸ್ತುವನ್ನು ಸರಿಯಾಗಿ ಬಳಸುತ್ತೇವೆ. ಮಾರನೆ ಅದರಲ್ಲೇ ಯಾವುದಾದರು ತಿಂಡಿ ಮಾಡುತ್ತೇವೆ. ಅದರಲ್ಲೂ ಹಿಂದಿನ ದಿನ ಉಳಿದ ತಿಂಡಿಯನ್ನ ಮಾರನೆ ದಿನ ಹೊಸ ಖಾದ್ಯವಾಗಿ ಮಾಡಿ ಸವಿಯುತ್ತೇವೆ. ಇದು ಭಾರತೀಯರ ಮನೆಯಲ್ಲಿ ಸರ್ವೇ ಸಾಮಾನ್ಯ.

ಹೆಚ್ಚುವರಿಯಾಗಿ ಉಳಿದ ತಿಂಡಿಯಲ್ಲಿ ಮಾರನೇ ದಿನ ಅದನ್ನೇ ಹೊಸ ರೀತಿಯ ತಿಂಡಿ ಮಾಡೋದು ಹೊಸತಲ್ಲ. ಉಳಿದ ಅನ್ನದಿಂದ ವಡೆ ಮಾಡುವುದು, ಸಂಡಿಗೆ ಮಾಡುವುದು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಉಳಿದ ರೊಟ್ಟಿಯಿಂದ ಹೇಗೆ ಬರ್ಫಿ ಮಾಡಬಹುದು ಎಂಬುದನ್ನು ತಿಳಿಸಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
@taste.thee.best ಎಂಬ ಇನ್ಸ್‌ಸ್ಡಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಈಗ ಗೃಹಿಣಿಯರ ಗಮನ ಸೆಳೆದಿದೆ. ಹಾಗಾದ್ರೆ ಹಿಂದಿನ ದಿನ ಉಳಿದ ರೊಟ್ಟಿಯಲ್ಲಿ ಈ ಬರ್ಫಿ ಮಾಡೋದು ಹೇಗೆ ಅನ್ನೋದನ್ನ ನಾವು ಸಹ ನೋಡೋಣ.
ಆತ ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿದ್ದಾನೆ. ಈ ಎಣ್ಣೆ ಕಾದ ಬಳಿಕ ಹಿಂದಿನ ದಿನ ಉಳಿದಿದ್ದ ರೊಟ್ಟಿಯನ್ನು ಅದರ ಒಳಗೆ ಹಾಕಿ ಚೆನ್ನಾಗಿ ಕರಿದಿದ್ದಾನೆ. ಎರಡು ರೊಟ್ಟಿಗಳನ್ನು ಆತ ಇದೇ ರೀತಿ ಕರಿದು ಪಕ್ಕಕ್ಕೆ ಇಟ್ಟಿಕೊಳ್ಳುತ್ತಾನೆ. ರೊಟ್ಟಿಗಳು ಪೂರಿಯಂತೆ ಬ್ರೌನ್ ಬಣ್ಣಕ್ಕೆ ತಿರುಗುತ್ತದೆ. ಆಗ ಎಣ್ಣೆಯಿಂದ ತೆಗೆದು ಬದಿಗಿಡುತ್ತಾನೆ. ನಂತರ ಈ ಎರಡು ರೊಟ್ಟಿಯನ್ನು ಕೈಯಿಂದ ಪುಡಿ ಪುಡಿ ಮಾಡಿಕೊಳ್ಳುತ್ತಾನೆ.
ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಹಾಕಿ ಚೆನ್ನಾಗಿ ನುಣ್ಣಗೆ ಆಗುವಂತೆ ರುಬ್ಬಿಕೊಳ್ಳುತ್ತಾನೆ. ಬಳಿಕ ಒಂದು ಪಾನ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಪಾಕ ಮಾಡಿಕೊಳ್ಳುತ್ತಾನೆ. ಸಕ್ಕರೆ ಪಾಕ ಗೋಲ್ಡನ್ ಬ್ರೌನ್ ಆಗುವವರೆಗೂ ಚೆನ್ನಾಗಿ ಫ್ರೈ ಮಾಡಿದ್ದಾನೆ. ನಂತರ ಅದಕ್ಕೆ ಒಂದು ಗ್ಲಾಸ್ ಹಾಲು ಹಾಕಿ ಚೆನ್ನಾಗಿ ಕುದಿಸುತ್ತಾನೆ. ಹಾಲು ಕುದಿಯಲು ಆರಂಭಿಸಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ರೊಟ್ಟಿಯ ಪುಡಿಯನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡುತ್ತಾನೆ.
ಈ ಪಾಕ ಗಟ್ಟಿಯಾದ ಬಳಿಕ ಒಲೆ ಆಫ್ ಮಾಡಿ ಒಲೆಯಿಂದ ತಿಂಡಿಯನ್ನು ಇಳಿಸಿ ಒಂದು ಪಾತ್ರೆ ಅಚ್ಚಿಗೆ ಸುರಿಯುತ್ತಾನೆ. ಅದನ್ನು ಚೌಕವಾಗಿ ಮಾಡಿಕೊಂಡು ಅದನ್ನು ಯಾವ ಗಾತ್ರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳುತ್ತಾನೆ. ಈಗ ಆತನ ಮುಂದೆ ಬರ್ಫಿ ರೆಡಿಯಾಗಿರುತ್ತದೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಹೊಸ ರೀತಿಯ ರೆಸಿಪಿ ನೋಡಿದ ಮಂದಿ ಉಳಿದ ರೊಟ್ಟಿಯಲ್ಲಿ ರುಚಿಕರ ಬರ್ಫಿ ಮಾಡಿದ್ದನ್ನ ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ಇಷ್ಟೊಂದು ಸುಲಭವಾಗಿ ಬರ್ಫಿ ಮಾಡಬಹುದು ಎಂದು ತಿಳಿದು ಜನ ಶಾಕ್‌ಗೆ ಒಳಗಾಗಿದ್ದಾರೆ. ಉಳಿದ ರೊಟ್ಟಿಯನ್ನು ಜನ ನಾಯಿಗೆ ಅಥವಾ ಬೀದಿ ದನಗಳಿಗೆ ನೀಡುತ್ತಾರೆ. ಆದ್ರೆ ಈತ ಈ ರೊಟ್ಟಿಯಲ್ಲಿ ಬರ್ಫಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.



Click it and Unblock the Notifications
