Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ರೆಸಿಪಿ: ಮೆಂತೆಯಿಂದ ಗರಿಗರಿಯಾದ ದೋಸೆ, ಮಲ್ಲಿಗೆಯಂತೆ ಮೃದುವಾದ ಇಡ್ಲಿ ಮಾಡುವುದು ಹೇಗೆ?
ನೀವು ಉದ್ದು ಹಾಕದೆ ಮೆಂತೆ ಹಾಕಿ ಮಾಡಬಹುದು ರುಚಿಯಾದ ದೋಸೆ ಹಾಗೂ ಇಡ್ಲಿ. ಅದರಲ್ಲೂ ದೋಸೆ ತುಪ್ಪ ಹಾಕಿ ಮಾಡಿದರೆ ಘಮ ಘಮ ದೋಸೆ ಮಸಾಲೆ ದೋಸೆಯಷ್ಟು ರುಚಿಯಾಗಿರುತ್ತದೆ, ಇದರಿಂದ ಮಾಡುವ ಇಡ್ಲಿಯೂ ತುಂಬಾನೇ ಸೂಪರ್. ಬನ್ನಿ ಮೆಂತೆ ದೋಸೆ ಹಾಗೂ ಇಡ್ಲಿಯ ರೆಸಿಪಿ ನೋಡೋಣ:

ಸೂಚನೆ:
ದೋಸೆಗೆ ನುಣ್ಣನೆ ರುಬ್ಬಿ, ಇಡ್ಲಿ ತರಿತರಿ ರುಬ್ಬಿ
ಇಡ್ಲಿಗೆ ಗಟ್ಟಿಯಾಗಿ ರುಬ್ಬಿ, ದೋಸೆ ಇಡ್ಲಿ ಹಿಟ್ಟಿಗಿಂತ ಸ್ವಲ್ಪ
ತೆಳ್ಳಗುರಬೇಕು
ದೋಸೆಗೆ ಹಿಟ್ಟು ರುಬ್ಬುವಾಗ ಅವಲಕ್ಕಿ ಹಾಕಿದರೂ ಆಗುತ್ತೆ, ಇಲ್ಲದಿದ್ದರೂ ಒಲೆ,
ಆದರೆ ಇಡ್ಲಿಗೆ ರುಬ್ಬುವಾಗ ಮಾತ್ರ ಸ್ವಲ್ಪ ಅವಲಕ್ಕಿ ಹಾಕಬೇಕು, ಆಗ ಮಾತ್ರ ಇಡ್ಲಿ
ಮೃದುವಾಗುವುದು.
ಬೇಕಾಗುವ ಸಾಮಗ್ರಿ
2 ಕಪ್ ಇಡ್ಲಿ ಅಕ್ಕಿ
3 ಚಮಚ ಮೆಂತೆ
ನೀರು
ರುಚಿಗೆ ತಕ್ಕ ಉಪ್ಪು ( 1/ 2 ಚಮಚ ಸೇರಿಸಿ)
ಮಾಡುವ ವಿಧಾನ
ಅಕ್ಕಿ ಮತ್ತು ಮೆಂತೆಯನ್ನು ಪ್ರತ್ಯೇಕವಾಗಿ ನೆನೆ ಹಾಕಿ. 8 ಗಂಟೆ ನೆನೆ ಹಾಕಿ,
ಕಡಿಮೆಯೆಂದರೂ 5-6 ಗಂಟೆ ನೆನೆ ಹಾಕಿರಬೇಕು.
ನೀರನ್ನು ಸೋಸಿ, ಬ್ಲೆಂಡರ್‌ನಲ್ಲಿಅಕ್ಕಿ ಮತ್ತು ಮೆಂತೆ ಜೊತೆಗೆ ಹಾಕಿ ನುಣ್ಣನೆ
ರುಬ್ಬಿಕೊಳ್ಳಿ, ನಂತರ 8 ಗಂಟೆ ಹುದುಗು ಬರಿಸಲು ಇಡಿ
ಬೆಳಗ್ಗೆ ಹಿಟ್ಟು ಕಲೆಸಿ, ಅದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿದರೆ ದೋಸೆ
ಹಿಟ್ಟು ರೆಡಿ.
ಪಾಕ ವಿಧಾನ
ಅಂಚು ಕಾವಲಿ ಬಿಸಿ ಮಾಡಿ ತುಪ್ಪ ಸವರಿ ದೋಸೆ ಹಿಟ್ಟು ಹಾಕಿ ಸೌಂಡ್‌ನಿಂದ ರೌಂಡ್
ಮಾಡಿ, ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ, ಗರಿಗರಿಯಾದ ದೋಸೆ ರೆಡಿ. ಇದನ್ನು ನೀವು
ಮಸಾಲೆ ದೋಸೆಗೆ ರೆಡಿ ಮಾಡಿದಂತೆ ಆಲೂ ಬಾಜಿ, ಚಟ್ನಿ ಸವಿಯಬಹುದು ಅಥವಾ ಬರೀ ಚಟ್ನಿ
ಜೊತೆಯೂ ಸವಿಯಬಹುದು.
ಮೆಂತೆ ಇಡ್ಲಿ ಮಾಡುವುದು ಹೇಗೆ?
ಮೆಂತೆ ಇಡ್ಲಿ ಕೂಡ ಮಾಡಬಹುದು, ಇನ್ನೊಂದು 2 ಚಮಚ ಮೆಂತೆ ಹೆಚ್ಚು ಅಕ್ಕಿ,
ನಂತರ ಅಕ್ಕಿ ಮತ್ತು ಮೆಂತೆ ರುಬ್ಬುವಾಗ ಸ್ವಲ್ಪ ಅವಲಕ್ಕಿ ಅಥವಾ ಪುರಿ ಸೇರಿಸಿ
ರುಬ್ಬಿ, ಹಿಟ್ಟು ದೋಸೆಗೆ ರುಬ್ಬಿದಷ್ಟುನುಣ್ಣನೆ ಬೇಡ.
ನಂತರ ಹುದುಗು ಬರಿಸಲು ಇಡಿ
ಬೆಳಗ್ಗೆ ಉಪ್ಪು ಹಾಕಿ ಕಲೆಸಿ, ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಇಡ್ಲಿ ಹಾಕಿ.
ಇದನ್ನು ಸಾಂಬಾರ್, ಗ್ರೇವಿ, ಚಟ್ನಿ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಮೆಂತೆ ದೋಸೆ ತಿನ್ನುವುದರಿಂದ ಪ್ರಯೋಜನಗಳು
- ಈ ದೋಸೆ ಬೇಸಿಗೆಗೆ ತುಂಬಾ ಒಳ್ಳೆಯದು, ಮೆಂತೆ ದೋಸೆ ತಿನ್ನುವುದರಿಂದ ರುಚಿಯ ಜೊತೆಗೆ ದೇಹಕ್ಕೆ ತಂಪು
- ಉದ್ದು ದೋಸೆ ತಿಂದಾಗ ಆಗಾಗ ಬಾಯಾರಿಕೆ ಆಗುತ್ತದೆ, ಆದರೆ ಮೆಂತೆ ದೋಸೆ ತಿಂದಾಗ ಬಾಯಾರಿಕೆಯಾಗುವುದಿಲ್ಲ
- ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ, ಇದರಿಂದಾಗಿ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಈ ದೋಸೆ ತುಂಬಾನೇ ಒಳ್ಳೆಯದು.
- ಬೇಸಿಗೆಯಲ್ಲಿ ಮೈ ಉಷ್ಣಾಂಶ ಕಾಪಾಡುತ್ತದೆ, ಇದೀಗ ಹೀಟ್ ವೇವ್ ಸಮಯ, ಮೆಂತೆ ಮೈ ಉಷ್ಣಾಂಶ ಕಡಿಮೆ ಮಾಡಲು ಸಹಕಾರಿ.
- ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ, ಆದ್ದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
- ಪಿತ್ತವನ್ನು ನಿಯಂತ್ರಣದಲ್ಲಿಡುತ್ತದೆ, ಬೇಸಿಗೆಯಲ್ಲಿ ಈ ಪಿತ್ತ ಸಮಸ್ಯೆ ಅಧಿಕ, ಈ ದೋಸೆ ಪಿತ್ತ, ಕಫ ಈ ಬಗೆಯ ಸಮಸ್ಯೆ ನಿಯಂತ್ರಣದಲ್ಲಿಡುತ್ತದೆ.
- ಮೆಂತೆಯನ್ನು ನೆನೆ ಹಾಕಿ ಹಾಗೆಯೇ ಸೇವಿಸಬಹುದು ಅಥವಾ ನೆನೆಹಾಕಿ ಸೇವಿಸಬಹುದು, ಮೆಂತೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಸಾಯಿಸಬಹುದು.
ಮೆಂತೆ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮಧ್ಯವಯಸ್ಸು ದಾಟುತ್ತಿದ್ದಂತೆ ಪ್ರತಿದಿನ ಸ್ವಲ್ಪ ಮೆಂತೆ ರಾತ್ರಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ



Click it and Unblock the Notifications