Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ತುಂಬಾ ರುಚಿಯಾಗಿರುತ್ತೆ ಮೆಂತೆ ಮುದ್ದೆ, ಮಧುಮೇಹಿಗಳಿಗಂತೂ ಟೇಸ್ಟಿ ಸೂಪರ್ಫುಡ್
ಮುದ್ದೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅದರಲ್ಲಿಯೂ ಮೆಂತೆ ಮುದ್ದೆ ಮಾಡಿದರೆ ಇನ್ನೂ ರುಚಿ, ಅತ್ಯಂತ ಪೌಷ್ಠಿಕಾಂಶದ ಆಹಾರವಾಗುತ್ತೆ, ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಮೆಂತೆ ಮುದ್ದೆ ಮಾಡಲು ಪುಡಿ ಹೊರಡಗೆ ಸಿಗಲ್ಲ, ರಾಗಿ ಪುಡಿಯಾದರೆ ಹೊರಗಡೆ ಸಿಗುತ್ತೆ, ಇದನ್ನು ನೀವೇ ಮನೆಯಲ್ಲಿಯೇ ರೆಡಿ ಮಾಡಿಡುವುದು ಒಳ್ಳೆಯದು. ನೀವು ಮಿಲ್ಗೆ ಹೋಗಿ ಹೆಚ್ಚು ಪುಡಿ ಮಾಡಿಸಿ ಬಂದು ಸರಿಯಾಗಿ ಸಂಸ್ಕರಿಸಿಟ್ಟರೆ ವರ್ಷದವರೆಗೆ ಇಟ್ಟು ಬಳಸಬಹುದು..
ಈ ಮೆಂತೆ ಮುದ್ದೆ ರಾಗಿ ಮುದ್ದೆಯಷ್ಟೇ ರುಚಿಯಾಗಿರುತ್ತದೆ, ಮೆಂತೆ ಹಾಕಿರುವುದಕ್ಕೆ ಕಹಿ ರುಚಿಯೇನೂ ಇರಲ್ಲ. ಕೆಲವರಿಗೆ ಉದ್ದು ಅಲರ್ಜಿ ಇರುತ್ತದೆ ಅಂಥವರು ಉದ್ದು ಸ್ಕಿಪ್ ಮಾಡಬಹುದು. ಬನ್ನಿ ಈ ಮೆಂತೆ ರಾಗಿಮುದ್ದೆ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಕಪ್ ಅಕ್ಕಿ (ದೋಸೆ ಅಕ್ಕಿ ಅಥವಾ ರೇಷನ್ ಅಕ್ಕಿ)
2 ಕಪ್ ಗೋಧಿ
ಅರ್ಧ ಕಪ್ ಕಪ್ಪು ಉದ್ದು (ಸಿಪ್ಪೆ ಸಹಿತ ಇರುವ ಉದ್ದು)
ಅರ್ಧ ಕಪ್ ಮೆಂತೆ ಬೀಜ
ಸ್ವಲ್ಪ ನಟ್ಸ್ (ಗೋಡಂಬಿ , ಪಿಸ್ತಾ, ಬಾದಾಮಿ)
ಈ ಸಿದ್ಧತೆ ಮಾಡಿಕೊಳ್ಳಿ
- ಅಕ್ಕಿ ಮತ್ತು ಗೋಧಿಯನ್ನು ತೊಳೆದು ಒಣಗಿಸಿ ಇಡಿ.
- ನಂತರ ಅಕ್ಕಿಯನ್ನು ಹುರಿದು ಒಂದು ಪಾತ್ರೆಗೆ ಹಾಕಿ
- ಗೋಧಿಯನ್ನು ಕೂಡ ಹುರಿದು ಪಾತ್ರೆಗೆ ಹಾಕಿ
- ಉದ್ದಿನಬೇಳೆ ಹುರಿಯಿರಿ
- ಮೆಂತೆ ಹುರಿಯಿರಿ
- ಸ್ವಲ್ಪ ನಟ್ಸ್ ಕೂಡ ಹುರಿಯಿರಿ ಎಲ್ಲಾವನ್ನು ಒಂದು ಪಾತ್ರೆಗೆ ಹಾಕಿಡಿ
ತಣ್ಣಗಾದ ಮೇಲೆ ಮಿಕ್ಸಿ ಜಾರ್ಗೆ ಅದರ ಅಳತೆಗೆ ತಕ್ಕಷ್ಟು ಹಾಕಿ ಪುಡಿ ಮಾಡಿಡಿ. ನಂತರ ನಿಮಗೆ ಬೇಕಾದಷ್ಟು ಪುಡಿಯಿಂದ ಮೆಂತೆ ಮುದ್ದೆ ಮಾಡಿ.
ಮೆಂತೆ ಮುದ್ದೆ ಮಾಡುವ ವಿಧಾನ
ನೀವು ಎಷ್ಟು ಪುಡಿ ಬಳಸುತ್ತೀರೋ ಅದರ ಒಂದು ಒಪಟ್ಟು ಹೆಚ್ಚು ಈರು ಬಳಸಬೇಕು.
2 ಕಪ್ ನೀರು ಪಾತ್ರೆಗೆ ಹಾಕಿ ಕಾಯಿಸಿ, ಅದಕ್ಕೆ, ಸ್ವಲ್ಪ ಉಪ್ಪು, ಒಂದು ಚಮಚ
ತುಪ್ಪ ಹಾಕಿ, ನೀರು ಕುದಿ ಬರುವಾಗ 1ಕಪ್ ಹಿಟ್ಟು ಹಾಕಿ, ಗಂಟು ಆಗದಂತೆ ಕಲೆಸಿ.
ನಂತರ ಮಿಶ್ರಣದಿಂದ ಮುದ್ದೆ ಕಟ್ಟಿ, ಇಷ್ಟು ಮಾಡಿದರೆ ಮೆಂತೆ ಮುದ್ದೆ ರೆಡಿ.
ಮುದ್ದೆ ಗಂಟು-ಗಂಟಾಗದಿರಲು ಟಿಪ್ಸ್
ಕುದಿಯುತ್ತಿರುವ ಸ್ವಲ್ಪ ನೀರನ್ನು ಒಂದು ಬೌಲ್ನಲ್ಲಿ ತೆಗೆದು ಅದಕ್ಕೆ
ಸ್ವಲ್ಪ ಪುಡಿ ಹಾಕಿ ಕಲೆಸಿ ನೀರಿಗೆ ಸೇರಿಸಿ ಮಿಕ್ಸ್ ಮಾಡಬೇಕು, ನಂತರ ಹಿಟ್ಟು
ಹಾಕಬೇಕು, ನಂತರ ಮುದ್ದೆಕಟ್ಟಬೇಕು.
ಮುದ್ದೆ ಮಾಡಲು ಅಷ್ಟಾಗಿ ಬಾರದಿದ್ದರೆ ಟಿಪ್ಸ್
ಎರಡು ತಟ್ಟೆ ತೆಗೆದುಕೊಳ್ಳಿ, ಒಂದು ತಟ್ಟೆಗೆ ತುಪ್ಪ ಸವಿ ಅದಕ್ಕೆ ಎಷ್ಡು ದಪ್ಪ
ಉಂಡೆ ಬೇಕೋ ಅಷ್ಟು ಬೇಯಿಸಿದ ಹಿಟ್ಟು ಹಾಕಿ ಕೈಗೂ ಸ್ವಲ್ಪ ತುಪ್ಪ ಸವರಿ ಉಂಡೆ
ಕಟ್ಟಿ ಮತ್ತೊಂದು ಪಾತ್ರೆಯಲ್ಲಿ ಇಡಿ. ಒಂದೆರಡು ಜನಕ್ಕೆ ಮುದ್ದೆ ಮಾಡಲು ಈ ವಿಧಾನ
ತುಂಬಾ ಸುಲಭ.



Click it and Unblock the Notifications