Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೆಸಿಪಿ: ಮೆಂತೆ ಸೊಪ್ಪಿನ ಚಪಾತಿ, ಟೊಮೆಟೊ ಚಟ್ನಿ ಸೂಪರ್ ಕಾಂಬಿನೇಷನ್
ನೀವು ಚಪಾತಿಯನ್ನು ಒಂದೇ ರುಚಿಯಲ್ಲಿ ಮಾಡುವ ಬದಲಿಗೆ ಅನೇಕ ರುಚಿಯಲ್ಲಿ ಮಾಡಬಹುದು, ನಾವಿಲ್ಲಿ ಮಂತೆ ಸೊಪ್ಪಿನ ಚಪಾತಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ.
ಮೆಂತೆ ಸೊಪ್ಪು ಸೇವನೆ ತುಂಬಾನೇ ಪ್ರಯೋಜನಕಾರಿ, ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ, ಅಲ್ಲದೆ ತುಂಬಾನೇ ರುಚಿಯಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ, ಜೊತೆಗೆ ಟೊಮೆಟೊ ಚಟ್ನಿ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ಗೋಧಿ ಹಿಟ್ಟು
1 ಕಪ್ ಮೆಂತೆ ಸೊಪ್ಪು
ಸ್ವಲ್ಪ ಮೊಸರು (1/4 ಕಪ್)
1/2 ಚಮಚ ಅರಿಶಿಣ ಪುಡಿ
1 ಚಮಚ ಶುಂಠಿ ಪೇಸ್ಟ್
1/2 ಚಮಚ ಕಾಶ್ಮೀರಿ ಖಾರದ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಅಜ್ವೈನ್
2 ಚಮಚ ಎಣ್ಣೆ
ನೀರು (ಬಿಸಿ ನೀರು ಹಾಕಿ ಕಲೆಸಿ ಚಪಾತಿ ಮೃದುವಾಗುವುದು)
ಮಾಡುವ ವಿಧಾನ
- ಒಂದು ದೊಡ್ಡ ಬೌಲ್ಗೆ ಗೋಧಿಹಿಟ್ಟು, ಚಿಕ್ಕದಾಗಿ ಕತ್ತರಿಸಿದ ಎಲೆ ಹಾಕಿ
- ಮೊಸರು ಸೇರಿಸಿ, ಮೊಸರು ಸೇರಿಸುವುದರಿಂದ ಮೆಂತೆಯ ಕಹಿ ಸ್ವಲ್ಪ ಕಡಿಮೆಯಾಗುವುದು.
- ನಂತರ ಉಪ್ಪು, ಎಣ್ಣೆ, ಖಾರದ ಪುಡಿ ಹಾಕಿ, ಕಲೆಸಲು ಅಗ್ಯತವಿರುವಷ್ಟು ನೀರು ಹಾಕಿ ಮಿಕ್ಸ್ ಮಾಡಿ
- ಹಿಟ್ಟನ್ನು ಚೆನ್ನಾಗಿ ಕಲೆಸಿ ನಂತರ ಒಂದು ಬಟ್ಟೆಯಿಂದ ಮುಚ್ಚಿ ಅರ್ಧ ಗಂಡೆ ಇಡಿ
- ಬಳಿಕ ಅದರಿಂದ ಉಂಡೆ ಕಟ್ಟಿ ಚಪಾತಿಗೆ ಲಟ್ಟಿಸಿ ಚಪಾತಿ ತವಾದಲ್ಲಿ ಹಾಕಿ ಎರಡೂ ಬದಿಗೆ ಎಣ್ಣೆ ಅಥವಾ ತಪ್ಪ ಸವರಿ ಬೇಯಿಸಿ.
ನಂತರ ಇದನ್ನು ನಿಮಗಿಷ್ಟವಾದ ಚಟ್ನಿ ಅಥವಾ ಕುರ್ಮಾ ಜೊತೆ ಇನ್ನೂ ಸೂಪರ್ ಆಗಿರುತ್ತದೆ . ಇದಕ್ಕೆ ಟೊಮೆಟೊ ಚಟ್ನಿ ಸೂಪರ್ ಆಗಿರುತ್ತದೆ.
ಟೊಮೆಟೊ ಚಟ್ನಿ ಹೀಗೆ ಮಾಡಿ ಸೂಪರ್ ಆಗಿರುತ್ತದೆ
3-4 ಹಣ್ಣಾದ ಸಾಧಾರಣ ಗಾತ್ರದ ಟೊಮೆಟೊ
2-3 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ
3-4 ಒಣ ಮೆಣಸು
ಸ್ವಲ್ಪ ಅರಿಶಿಣ
1/2 ಚಮಚ ಜೀರಿಗೆ
1 ಚಮಚ ಎಣ್ಣೆ
ಒಗ್ಗರಣೆಗೆ
ಕರಿಬೇವು
ಸಾಸಿವೆ
1 ಒಣ ಮೆಣಸು
1-2 ಬೆಳ್ಳುಳ್ಳಿ
ಚಿಟಿಕೆಯಷ್ಟು ಇಂಗು
ಮಾಡುವ ವಿಧಾನ:
- ಟೊಮೆಟೊವನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ
- ನಂತರ ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಒಣ ಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿ ತೆಗೆದು ಇಡಿ
- ಶುಂಠಿ ಮತ್ತು ಬೆಳ್ಳುಳ್ಳಿ ಕೂಡ ಪ್ರೈ ಮಾಡಿ
- ನಂತರ ಟೊಮೆಟೊ, ಅರಿಶಿಣ ಹಾಕಿ ಫ್ರೈ ಮಾಡಿ
- ನಂತರ ಎಲ್ಲವನ್ನು ತಟ್ಟೆಗೆ ಹಾಕಿ ಅದರ ಬಿಸಿ ಆರಲು ಬಿಡಿ.
- ನಂತರ ಗ್ರೈಂಡ್ ಮಾಡಿ
- ಬಳಿಕ ಒಗ್ಗರಣೆ ಹಾಕಿದರೆ ರುಚಿ ರಚಿಯಾದ ಟೊಮೆಟೊ ಚಟ್ನಿ ರೆಡಿ.



Click it and Unblock the Notifications
