ಶ್ಯಾವಿಗೆ ಪಾಯಸ ರೆಸಿಪಿ

By: Divya pandith
Subscribe to Boldsky

ಶ್ಯಾವಿಗೆ ಪಾಯಸ ಎನ್ನುವುದು ಸಾಂಪ್ರದಾಯಿಕ ಸಿಹಿ ತಿಂಡಿ. ಬಹುತೇಕ ಸಂದರ್ಭಗಳಲ್ಲಿ ದೇಶದೆಲ್ಲೆಡೆಯೂ ಶ್ಯಾವಿಗೆ ಪಾಯಸವನ್ನು ಮಾಡುತ್ತಾರೆ. ಭಾರತದಲ್ಲಿ ಅನೇಕ ಹಬ್ಬಗಳಲ್ಲಿ ವೆರ್ಮಿಕೆಲ್ಲಿ ಖೀರ್ ಅಥವಾ ಸ್ವೀಟ್ ಸೆವಿಯನ್(ಶ್ಯಾವಿಗೆ ಪಾಯಸ) ಮಾಡುವ ಮೂಲಕ ಆನಂದಿಸುತ್ತಾರೆ. ಇದನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಹಾಗೂ ಉಪವಾಸ, ವ್ರತ ಆಚರಣೆಯ ಸಂದರ್ಭದಲ್ಲೂ ಸ್ವೀಕರಿಸುತ್ತಾರೆ.

ಸಕ್ಕರೆ, ಹಾಲಿನ ಮಿಶ್ರಣದಲ್ಲಿ ಅರಳುವ ಶ್ಯಾವಿಗೆ ಪಾಯಸ ಸಿಹಿತಿಂಡಿಯ ವರ್ಗಕ್ಕೆ ಸೇರುತ್ತದೆ. ರುಚಿಯನ್ನು ದ್ವಿಗುಣ ಗೊಳಿಸುವ ಉದ್ದೇಶದಿಂದ ನಾವಿಲ್ಲಿ ಖೋಯಾವನ್ನು ಸಹ ಸೇರಿಸಿದ್ದೇವೆ. ಆಗಾಗ ನಾಲಿಗೆ ಚಪ್ಪರಿಸಲು, ಸಿಹಿ ತಿಂಡಿಯ ಬಯಕೆಯಾದಾಗ ಹಾಗೂ ಇನ್ನಿತರ ಸನ್ನಿವೇಶಗಳಲ್ಲಿ ಬಹು ಬೇಗ ತಯಾರಿಸಬಹುದಾದ ಸರಳ ಪಾಕವಿಧಾನ ಇದು.

ಶ್ಯಾವಿಗೆ ಪಾಯಸ ಒಂದೊಂದು ಪ್ರದೇಶದಲ್ಲೂ ವಿಭಿನ್ನ ರೀತಿಯಲ್ಲಿ ತಯಾರಿಸುತ್ತಾರೆ. ರುಚಿಯಲ್ಲೂ ಸ್ವಲ್ಪ ವ್ಯತ್ಯಾಸ ಇರುವುದನ್ನು ನಾವು ಕಾಣಬಹುದು. ಈ ಒಂದು ಸುಲಭ ಸಿಹಿ ಪಾಕವಿಧಾನವನ್ನು ನೀವು ಮಾಡಲು ಬಯಸುವುದರಾದರೆ ಇಲ್ಲಿರುವ ಚಿತ್ರ ವಿವರಣೆ ಹಾಗೂ ವೀಡಿಯೋಅನ್ನು ನೋಡಿ ತಿಳಿದುಕೊಳ್ಳಬಹುದು.

ಶ್ಯಾವಿಗೆ ಪಾಯಸ ಪಾಕವಿಧಾನದ ವೀಡಿಯೋ

ಮೇಥಿ ಸೇವೈ ಪಾಕವಿಧಾನ
, ಸಿಹಿಯಾದ ಶ್ಯಾವಿಗೆ ಪಾಯಸ ತಯಾರಿಸುವ ಹಂತಗಳು | ಶ್ಯಾವಿಗೆ ಪಾಯಸ ಪಾಕವಿಧಾನದ ವೀಡಿಯೋ
Prep Time
5 Mins
Cook Time
15M
Total Time
20 Mins

Recipe By: ಮೀನಾ ಭಂಡಾರಿ

Recipe Type: ಸಹಿ ತಿಂಡಿ

Serves: 2 ಮಂದಿಗೆ

Ingredients
 • ತುಪ್ಪ-1 ಚಮಚ

  ಶ್ಯಾವಿಗೆ - 1 ಕಪ್

  ಹಾಲು -750 ಮಿ.ಲೀ.

  ಖೋಯಾ -2 ಚಮಚ

  ಸಕ್ಕರೆ - 5 ಚಮಚ

  ಒಣದ್ರಾಕ್ಷಿ -5-6

  ಗೋಡಂಬಿ 4-5 (ಅಲಂಕಾರಕ್ಕೆ)

  ಹೆಚ್ಚಿದ ಬಾದಾಮಿ - 4-5 (ಅಲಂಕಾರಕ್ಕೆ)

  ಹೆಚ್ಚಿದ ಪಿಸ್ತಾ-3-4 (ಅಲಂಕಾರಕ್ಕೆ)

Red Rice Kanda Poha
How to Prepare
 • 1.ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆಯನ್ನು ಸೇರಿಸಿ ಹುರಿಯಿರಿ.

  2. ಶ್ಯಾವಿಗೆ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

  3. ಇದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  4. ನಂತರ 4-5 ನಿಮಿಷಗಳ ಕಾಲ ಕುದಿಯಲು ಬಿಡಿ.

  5. ಖೋಯಾವನ್ನು ಬೆರೆಸಿ 2 ನಿಮಿಷಗಳ ಕಾಲ ಚೆನ್ನಾಗಿ ಕಲುಕಿ.

  6. ನಂತರ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗು ತನಕ ಕೈಯಾಡಿಸುತ್ತಲೇ ಇರಿ.

  7. ಒಣ ದ್ರಾಕ್ಷಿಯನ್ನು ಸೇರಿಸಿ ಕಲುಕುತ್ತಿರಿ.

  8. ನಂತರ ಬಡಿಸುವ ಬಟ್ಟಲಿಗೆ ಹಾಕಿ

  9. ಗೋಡಂಬಿ, ಹೆಚ್ಚಿದ ಬಾದಾಮಿ ಮತ್ತು ಪಿಸ್ತಗಳಿಂದ ಅಲಂಕರಿಸಿ.

Instructions
 • 1.ಸಕ್ಕರೆ ಹಾಕಿ ಕುದಿಸುವ ಮೊದಲು ಹಾಲಿನಲ್ಲಿ ಶ್ಯಾವಿಗೆ ಬೆಂದಿದೆಯೇ ಎನ್ನುವುದನ್ನು ಗಮನಿಸಬೇಕು. ಸಕ್ಕರೆ ಸೇರಿಸಿದ ಮೇಲೆ ಮತ್ತೆ ಶ್ಯಾವಿಗೆ ಮೃದುವಾಗಿ ಬೇಯುವುದಿಲ್ಲ.
 • 2. ಬಡಿಸುವ ಬಟ್ಟಲಿಗೆ ಹಾಕುವ ಮುನ್ನ ಬೆಂದಿದೆಯೇ ಎನ್ನುವುದನ್ನು ಪರೀಕ್ಷಿಸಿ.
 • 3. ಖೋಯಾ ಹಾಕುವುದು ನಿಮ್ಮ ಆಯ್ಕೆ. ಬಳಸದೆಯೇ ಪಾಯಸ ತಯಾರಿಸಬಹುದು.
 • 4. ಹೆಚ್ಚುವರಿ ಪರಿಮಳ ಹಾಗೂ ರುಚಿಗೆ ಖರ್ಜೂರಾ ಹಾಗೂ ಇನ್ನಿತರ ಒಣ ಹಣ್ಣುಗಳನ್ನು ಸೇರಿಸಬಹುದು.
Nutritional Information
 • ಬಡಿಸುವ ಪ್ರಮಾಣ - 1 ಕಪ್
 • ಕ್ಯಾಲೋರಿ - 170 ಕ್ಯಾಲ್
 • ಕೊಬ್ಬು - 6.0 ಗ್ರಾಂ
 • ಪ್ರೋಟೀನ್ - 4.9 ಗ್ರಾಂ.
 • ಕಾರ್ಬೋಹೈಡ್ರೇಟ್ಸ್ - 24.5 ಗ್ರಾಂ.
 • ಸಕ್ಕರೆ - 19.4
 • ನಾರಿನಂಶ - 0.2 ಗ್ರಾಂ

ಹಂತ ಹಂತವಾದ ಪಾಕವಿಧಾನ:

1. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆಯನ್ನು ಸೇರಿಸಿ ಹುರಿಯಿರಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ

2. ಶ್ಯಾವಿಗೆ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

ಮೇಥಿ ಸೇವೈ ಪಾಕವಿಧಾನ

3. ಇದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ

4. ನಂತರ 4-5 ನಿಮಿಷಗಳ ಕಾಲ ಕುದಿಯಲು ಬಿಡಿ.

ಮೇಥಿ ಸೇವೈ ಪಾಕವಿಧಾನ

5. ಖೋಯಾವನ್ನು ಬೆರೆಸಿ 2 ನಿಮಿಷಗಳ ಕಾಲ ಚೆನ್ನಾಗಿ ಕಲುಕಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ

6. ನಂತರ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗು ತನಕ ಕೈಯಾಡಿಸುತ್ತಲೇ ಇರಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ

7. ಒಣ ದ್ರಾಕ್ಷಿಯನ್ನು ಸೇರಿಸಿ ಕಲುಕುತ್ತಿರಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ

8. ನಂತರ ಬಡಿಸುವ ಬಟ್ಟಲಿಗೆ ಹಾಕಿ

ಮೇಥಿ ಸೇವೈ ಪಾಕವಿಧಾನ

9. ಗೋಡಂಬಿ, ಹೆಚ್ಚಿದ ಬಾದಾಮಿ ಮತ್ತು ಪಿಸ್ತಗಳಿಂದ ಅಲಂಕರಿಸಿ.

ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ
ಮೇಥಿ ಸೇವೈ ಪಾಕವಿಧಾನ
[ 4 of 5 - 47 Users]
Please Wait while comments are loading...
Subscribe Newsletter