Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಹಾ ಎಷ್ಟೊಂದು ರುಚಿ ಗೊತ್ತಾ ಮಾವಿನ ಹಣ್ಣಿನ ಸಾಸಿವೆ: ಉತ್ತರ ಕನ್ನಡ ಶೈಲಿಯ ಸಾಸಿವೆ
ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ ಎಲ್ಲರೂ ಕೂಡ ಬಹಳ ಇಷ್ಟಪಟ್ಟು ಮಾವಿನಹಣ್ಣನ್ನು ಸೇವನೆ ಮಾಡುತ್ತಾರೆ. ಇನ್ನು ಮಾವಿನ ಹಣ್ಣಿನಲ್ಲಿ ಸಿಗುವಷ್ಟು ವೇರೈಟಿ ಬೇರೆ ಯಾವ ಹಣ್ಣಿನಲ್ಲಿ ಸಿಗಲ್ಲ ಅನ್ನಬಹುದು. ಮಾವಿನ ಹಣ್ಣು ಎಷ್ಟು ಕಾಸ್ಟ್ಲಿ ಆದ್ರೂ ಸರಿ ಜನ ಖರೀದಿ ಮಾಡ್ತಾರೆ. ಇನ್ನು ಮಾವಿನ ಹಣ್ಣಿನಿಂದ ತರಾವರಿ ತಿಂಡಿ ತಿನಿಸುಗಳನ್ನ ತಯಾರು ಮಾಡಬಹುದು.
ಈಗ ನಾವು ಉತ್ತರ ಕನ್ನಡ ವಿಭಾಗದಲ್ಲಿ ಮಾಡುವ ಒಂದು ಅತ್ಯಂತ ರುಚಿಕರವಾದ ಮಾವಿನ ಹಣ್ಣಿನ ರೆಸಿಪಿ ಮಾಡೋಣ. ಇದು ಬಹಳ ಉತ್ತಮ ಆರೋಗ್ಯಕರವಾದ ಆಹಾರ ಪದಾರ್ಥ ಕೂಡ ಹೌದು. ಅದರಲ್ಲೂ ಹಳ್ಳಿಯಲ್ಲಿ ಸಿಗುವ ಹುಳಿ ಮಾವಿನ ಹಣ್ಣು ಸಿಕ್ತು ಅಂದ್ಕೊಳ್ಳಿ, ಅದರಿಂದ ಈ ರೆಸಿಪಿ ತಯಾರು ಮಾಡಿದರೆ ಮೃಷ್ಠಾನ ಭೋಜನ ಮಾಡಿದ ಫೀಲ್ ಬರುತ್ತೆ. ಹಾಗಾದ್ರೆ ಇಷ್ಟು ಅದ್ಭುತವಾಗಿರುವ ರೆಸಿಪಿ ಯಾವುದು ಹೇಗೆ ಮಾಡೋದು ನೋಡೋಣ.

ಮಾವಿನ ಹಣ್ಣಿನ ಸಾಸಿವೆ, ಇದನ್ನ ನೀವು ಕಾರವಾಗಿ ಸಿಹಿಯಾಗಿ ಎರಡು ರೀತಿಯಲ್ಲಿಯೂ ಮಾಡಬಹುದು. ಮಾವಿನಹಣ್ಣಿನ ಸಾಸಿವೆ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು;
ಹುಳಿ ಮಾವಿನ ಹಣ್ಣು
ತೆಂಗಿನ ತುರಿ
ಸಾಸಿವೆ
ಕೆಂಪು ಮೆಣಸು
ಅರಿಶಿಣ
ಬೆಲ್ಲ
ಉಪ್ಪು
ಉದ್ದಿನ ಬೇಳೆ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ;
ಮೊದಲು ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಇಟ್ಟು ಕೊಳ್ಳಬೇಕು.
ಈಗ ಮಸಾಲೆ ರೆಡಿ ಮಾಡಿಕೊಳ್ಳಬೇಕು. ಅದಕ್ಕೆ, ಒಂದು ಮಿಕ್ಸರ್ ಜಾರ್ ಗೆ ಒಂದು
ಹಿಡಿಯಷ್ಟು ತೆಂಗಿನ ತುರಿ ಹಾಕಿ. ನಂತರ ನಿಮ್ಮ ಕಾರಕ್ಕೆ ಅನುಗುಣವಾಗಿ ಕೆಂಪು
ಮೆಣಸು, ಚಿಟಿಕೆಯಷ್ಟು ಸಾಸಿವೆ ಮತ್ತು ಸ್ವಲ್ಪ ಅರಿಶಿಣ ಹಾಕಿ ಚೆನ್ನಾಗಿ ರುಬ್ಬಿ.
ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಮಾವಿನ ಹಣ್ಣಿನ ರಸವನ್ನು ತೆಗೆದಿಟ್ಟುಕೊಳ್ಳಬೇಕು. ಮಾವಿನ ಹಣ್ಣಿನ ರಸಕ್ಕೆ ರುಬ್ಬಿ ಇಟ್ಟುಕೊಂಡ ಮಸಾಲೆಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ (ಮಾವಿನ ಹಣ್ಣು ತುಂಬಾ ಹುಳಿಯಾಗಿದ್ದರೆ ಸ್ವಲ್ಪ ಹೆಚ್ಚು ಬೆಲ್ಲ ಸೇರಿಸಬಹುದು)

ಕೊನೆಯಲ್ಲಿ ಒಂದು ಒಗ್ಗರಣೆ ಮಾಡಬೇಕು. ಅದಕ್ಕೆ ಒಂದು ಪ್ಯಾನ್ ನಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಉದ್ದಿನ ಬೇಳೆ, ಸಾಸಿವೆ, ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ.
ಈಗ ಹುಳಿ ಖಾರ ಸಿಹಿ ಆಗಿರುವ ಮಾವಿನ ಹಣ್ಣಿನ ಸಾಸಿವೆ ರೆಡಿ. ಬಿಸಿ ಬಿಸಿ ಅನ್ನದ ಜೊತೆಗೆ ಸವಿಯಲು ತುಂಬಾ ಚೆನ್ನಾಗಿರುತ್ತೆ.



Click it and Unblock the Notifications
