For Quick Alerts
ALLOW NOTIFICATIONS  
For Daily Alerts

ರೆಸಿಪಿ: ಸವಿಯಲು ಬಲು ಚೆನ್ನಾ ಮಡಿಕೆ ಕುಲ್ಫಿ

Posted By:
|

ಐಸ್ ಕ್ರೀಮ್, ಕುಲ್ಫಿ ಇವೆಲ್ಲಾ ಸವಿಯುವುದೇ ಚೆಂದ. ಮಟ್ಕಾ ಮಲೈ ಕುಲ್ಫಿ ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಇಷ್ಟಪಟ್ಟು ಸಿಹಿ ಆಗಿದೆ. ಇದನ್ನು ವಿಶೇಷ ದಿನಗಳಲ್ಲಿ ಮಾಡಿದರೆ ಆ ಡಿನ್ನರ್ ಮತ್ತಷ್ಟು ಸ್ಪೆಷಲ್ ಅನಿಸುವುದು.

matka malai kulfi recipe

ಇದನ್ನು ಮಾಡಲು ನೀವು ಕನಿಷ್ಠ ಒಂದು ಗಂಟೆ ಸಮಯ ವ್ಯಯಿಸಬೇಕಾಗುತ್ತದೆ. ನಾವು ಇಲ್ಲಿ ಮಡಿಕೆ ಕುಲ್ಫಿಯ ರೆಸಿಪಿ ನೀಡಲಾಗಿದೆ ನೋಡಿ:

matka malai kulfi recipe, ಮಟ್ಕಾ ಮಲೈ ಕುಲ್ಫಿ ರೆಸಿಪಿ
matka malai kulfi recipe, ಮಟ್ಕಾ ಮಲೈ ಕುಲ್ಫಿ ರೆಸಿಪಿ
Prep Time
10 Mins
Cook Time
1H0M
Total Time
1 Hours10 Mins

Recipe By: Reena TK

Recipe Type: Icecream

Serves: 6

Ingredients
  • ಬೇಕಾಗುವ ಸಾಮಗ್ರಿ

    2 ಕಪ್ ಹಾಲು

    1 ಕಪ್ ಕ್ರೀಮ್‌

    1 ಕಪ್ ಮಂದವಾದ ಹಾಲು (2 ಕಪ್ ಲೀಟರ್ 1 ಕಪ್ ಆಗಬೇಕು)

    1/4 ಕಪ್ ಡ್ರೈ ಫ್ರೂಟ್ಸ್

    10-15 ಕೇಸರಿ

Red Rice Kanda Poha
How to Prepare
  • ಮಡಿಕೆ ಕುಲ್ಫಿ ಮಾಡುವುದು ಹೇಗೆ?

    * ದಪ್ಪ ತಳವಿರುವ ಪಾತ್ರೆಗೆ ಹಾಲು ಹಾಕಿ ಸಾಧಾರಣ ಉರಿಯಲ್ಲಿ ಕುದಿಸಿ.

    * ನಂತರ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ತಿರುಗಿಸುತ್ತಲೇ ಇರಿ.

    * ಈಗ ಮಂದವಾದ ಹಾಲನ್ನು ಹಾಕಿ ಮಿಶ್ರ ಮಾಡಿ.

    * ನಂತರ ಕೇಸರಿ, ಮತ್ತು ಡ್ರೈ ಫ್ರೂಟ್ಸ್ ಮೇಲೆ ಹಾಕಿ, ಸಾಧಾರಣ ಉರಿಯಲ್ಲಿ ತಿರುಗಿಸುತ್ತಲೇ ಇರಿ. ಮಿಶ್ರಣ ಒಂದು ಕಪ್ ಇದ್ದರೆ ಮುಕ್ಕಾಲು ಕಪ್ ಆಗುವಷ್ಟು ಹೊತ್ತು ಕುದಿಸಿ.

    * ನಂತರ ಗ್ಯಾಸ್‌ ಆಫ್‌ ಮಾಡಿ ತಣ್ಣಗಾಗಲು ಇಡಿ.

    * ಮಟ್ಕಾ ಕುಲ್ಫಿಯನ್ನು ಮಣ್ಣಿನ ಕಪ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಿ.

    * ನಂತರ ಡ್ರೈ ಫ್ರೂಟ್ಸ್ ಮೇಲೆ ಉದುರಿಸಿ ಸರ್ವ್ ಮಾಡಿ.

Instructions
  • *ಉರಿಯಿಂದ ಇಳಿಸಿ ಕುಲ್ಫಿಗೆ ಮಣ್ಣಿನ ಚಿಕ್ಕ-ಚಿಕ್ಕ ಮಡಿಕೆಯಲ್ಲಿ ಹಾಕಿಡಿ, ಮಡಿಕೆ ಇಲ್ಲದಿದ್ದರೆ ಕುಲ್ಫಿ ಮೌಲ್ಡ್‌ನಲ್ಲಿ ಹಾಕಿಡಬಹುದು.
Nutritional Information
  • ಸರ್ವ್ - 1 ಕಪ್
  • ಕ್ಯಾಲೋರಿ - 240ಕ್ಯಾ
  • ಕೊಬ್ಬು - 10ಗ್ರಾಂ
  • ಪ್ರೊಟೀನ್ - 3 ಗ್ರಾಂ
  • ಕಾರ್ಬ್ಸ್ - 25ಗ್ರಾಂ
[ 3.5 of 5 - 86 Users]
X
Desktop Bottom Promotion