Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಾಮೂಲಿ ದೋಸೆ ಬಿಡಿ.. ಬಟಾಣಿ-ಪನೀರ್ ಬಳಸಿ ಈ ದೋಸೆ ಮಾಡಿ! ಒಂದು ತಿಂದ್ರೆ ಸಾಲದು, ರುಚಿ ಅಷ್ಟು ಅದ್ಭುತ
ಸಾದಾ ದೋಸೆ ಬಿಟ್ಟು ಇದನ್ನೊಮ್ಮೆ ಟ್ರೈ ಮಾಡಿ! ಹೋಟೆಲ್ ಸ್ಟೈಲ್ ಮಟರ್ ಪನೀರ್ ದೋಸೆ.. ಒಂದು ತಿಂದರೆ ಸಾಲದು, ರುಚಿ ಅಷ್ಟು ಅದ್ಭುತ. ಹೌದು, ದೋಸೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ನಿತ್ಯದ ಸಾದಾ ದೋಸೆ ಅಥವಾ ಮಸಾಲಾ ದೋಸೆಗೆ ಭಿನ್ನವಾದ, ಹೊಸ ರುಚಿಯೊಂದನ್ನು ಹುಡುಕುತ್ತಿದ್ದರೆ, ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹ 'ಮಟರ್ ಪನೀರ್ ದೋಸೆ' (Matar Paneer Dosa) ಉತ್ತಮ ಆಯ್ಕೆ.
ಈಗ ತಾಜಾ ಹಸಿ ಬಟಾಣಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಪೌಷ್ಟಿಕ ಬಟಾಣಿ ಮತ್ತು ಪ್ರೋಟೀನ್ ಸಮೃದ್ಧ ಪನೀರ್ ಸಂಯೋಜನೆಯಲ್ಲಿ ತಯಾರಿಸುವ ಈ ದೋಸೆ ರುಚಿಕರ ಹಾಗೂ ಆರೋಗ್ಯಕರವಾಗಿದೆ. ಇದು ನಿಜಕ್ಕೂ ವಿಶೇಷವಾದ ಭಕ್ಷ್ಯವಾಗಿದೆ. ರುಚಿಯ ಜೊತೆಗೆ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು, ಆಲೂಗಡ್ಡೆಯ ಬದಲು ಪನೀರ್ ಮತ್ತು ಬಟಾಣಿಯನ್ನು ಬಳಸುವುದರಿಂದ ಈ ದೋಸೆಯು ಪ್ರೋಟೀನ್ ಮತ್ತು ಫೈಬರ್ ಅಂಶಗಳನ್ನು ಹೆಚ್ಚಿಸುತ್ತದೆ.

ಮಕ್ಕಳು ಹಾಗೂ ಜಿಮ್‌ಗೆ ಹೋಗುವವರು ಇದನ್ನು ಉತ್ತಮ ಉಪಹಾರವಾಗಿ ಸೇವಿಸಬಹುದು. ಅಲ್ಲದೆ, ಚಳಿಗಾಲದ ಸಂಜೆಗೆ ಬಿಸಿಬಿಸಿಯಾದ ಈ ದೋಸೆ ತಿನ್ನಲು ಅತ್ಯಂತ ಹಿತವೆನಿಸುತ್ತದೆ. ಹೋಟೆಲ್ ಶೈಲಿಯ ಗರಿಗರಿಯಾದ ದೋಸೆಯನ್ನು ಮನೆಯಲ್ಲೇ ತಯಾರಿಸಲು ಸರಳ ವಿಧಾನ (Matar Paneer Dosa Recipe) ಇಲ್ಲಿದೆ.
ಬಟಾಣಿ ಪನೀರ್ ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಹಿಟ್ಟಿಗೆ
• ಅಕ್ಕಿ
• ಉದ್ದಿನ ಬೇಳೆ
• ಮೆಂತ್ಯ ಕಾಳು
• ರುಚಿಗೆ ತಕ್ಕಷ್ಟು ಉಪ್ಪು
• ನೀರು
ಬಟಾಣಿ ಪನೀರ್ ಸ್ಟಫಿಂಗ್‌ಗಾಗಿ
• ತುರಿದ ಪನೀರ್ -
• ಬೇಯಿಸಿದ ಹಸಿ ಬಟಾಣಿ
• ಈರುಳ್ಳಿ
• ಟೊಮೆಟೊ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಹಸಿ ಮೆಣಸಿನಕಾಯಿ
ಮಸಾಲೆ ಪುಡಿಗಳು
• ಅರಿಶಿನ
• ಕೆಂಪು ಮೆಣಸಿನ ಪುಡಿ
• ಧನಿಯಾ ಪುಡಿ
• ಗರಂ ಮಸಾಲಾ
• ಎಣ್ಣೆ ಅಥವಾ ಬೆಣ್ಣೆ - ದೋಸೆ ಮತ್ತು ಮಸಾಲೆಗೆ
ಬಟಾಣಿ ಪನೀರ್ ದೋಸೆ ತಯಾರಿಸುವ ವಿಧಾನ
- ದೋಸೆ ಹಿಟ್ಟನ್ನು ಸಿದ್ಧಪಡಿಸಲು, ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳುಗಳನ್ನು ದೋಸೆ ಮಾಡುವ 8 ರಿಂದ 10 ಗಂಟೆಗಳ ಮೊದಲು ಚೆನ್ನಾಗಿ ತೊಳೆದು ನೆನೆಸಿ.
- ನಂತರ ಇದನ್ನು ನುಣ್ಣಗೆ ರುಬ್ಬಿ, ಮುಂದಿನ 8 ಗಂಟೆಗಳ ಕಾಲ ಹುದುಗಲು ಬಿಡಿ. ದೋಸೆ ಮಾಡುವ ಮೊದಲು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
- ಮಟರ್ ಪನೀರ್ ಮಸಾಲೆಯನ್ನು ತಯಾರಿಸಲು, ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಕೆಂಪಾಗುವವರೆಗೆ ಹುರಿಯಿರಿ.
- ಬಳಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹೆಚ್ಚಿದ ಹಸಿರು ಮೆಣಸಿನಕಾಯಿ ಸೇರಿಸಿ. ಈಗ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
- ಬಳಿಕ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ, ಎಣ್ಣೆ ಬಿಡುವವರೆಗೆ ಬಾಡಿಸಿ.
- ಮಸಾಲೆ ಸಿದ್ಧವಾದಾಗ, ಬೇಯಿಸಿದ ಹಸಿ ಬಟಾಣಿ ಮತ್ತು ತುರಿದ ಪನೀರ್ ಸೇರಿಸಿ ಮೂರು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ.
- ಅಂತಿಮವಾಗಿ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ, ಒಲೆಯಿಂದ ಕೆಳಗಿಳಿಸಿ. ಇದು ದೋಸೆಗೆ ನೀಡುವ ಸ್ವಾದಿಷ್ಟ ಮಸಾಲೆ.
- ದೋಸೆ ತಯಾರಿಸಲು, ದೋಸೆ ಹಂಚನ್ನು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಅಥವಾ ನೀರು ಚಿಮುಕಿಸಿ ಒರೆಸಿ.
- ಒಂದು ಸೌಟು ದೋಸೆ ಹಿಟ್ಟು ತೆಗೆದುಕೊಂಡು ತೆಳ್ಳಗೆ ಹರಡಿ. ದೋಸೆಯ ಸುತ್ತಲೂ ಎಣ್ಣೆ ಅಥವಾ ಬೆಣ್ಣೆ ಹಾಕಿ ಗರಿಗರಿಯಾಗುವಂತೆ ಬೇಯಿಸಿ.
- ದೋಸೆ ಕೆಂಪಾದಾಗ, ಅದರ ಮಧ್ಯಭಾಗದಲ್ಲಿ ಸಿದ್ಧಪಡಿಸಿದ ಮಟರ್ ಪನೀರ್ ಮಸಾಲೆಯನ್ನು ಇಡಿ. ನಂತರ ದೋಸೆಯನ್ನು ಮಡಚಿ ಪ್ಲೇಟ್‌ಗೆ ವರ್ಗಾಯಿಸಿ.
- ಈ ಮಟರ್ ಪನೀರ್ ದೋಸೆಯನ್ನು ತಾಜಾ ತೆಂಗಿನಕಾಯಿ ಚಟ್ನಿ ಅಥವಾ ಬಿಸಿಬಿಸಿ ಸಾಂಬಾರ್ ಜೊತೆಗೆ ಸವಿಯಿರಿ.
- ಈ ವಿಶಿಷ್ಟ ದೋಸೆ ಚಳಿಗಾಲದ ಸಂಜೆಗಳಿಗೆ ಅಥವಾ ಯಾವುದೇ ಸಮಯದಲ್ಲಿ ವಿಭಿನ್ನ ಹಾಗೂ ಆರೋಗ್ಯಕರ ಉಪಹಾರವಾಗಿ ಸೂಕ್ತ.



Click it and Unblock the Notifications
