Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಟರ್-ಮಶ್ರೂಮ್: ಹೆಚ್ಚು ಟೇಸ್ಟಿಯಾಗಿಸುವ ಸಿಂಪಲ್ ರೆಸಿಪಿ
ಅಣಬೆ ಮತ್ತು ಬಟಾಣಿ ಕಾಂಬಿನೇಷನ್ ಸಾರಿನ ಟೇಸ್ಟ್ ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಅದರಲ್ಲೂ ರೊಟ್ಟಿ, ಚಪಾತಿ, ನಾನ್ ಈ ರೀತಿಯ ಅಡುಗೆ ಮಾಡಿದಾಗ ನೆಚ್ಚಿಕೊಂಡು ತಿನ್ನಲು ಈ ಮಟರ್-ಮಶ್ರೂಮ್ ಗ್ರೇವಿ ಸೂಪರ್ ಕಾಂಬಿನೇಷನ್.

ಇಲ್ಲಿ ನಾವು ಮಟರ್-ಮಶ್ರೂಮ್‌ನ ಹೆಚ್ಚು ಟೇಸ್ಟಿಯಾಗಿ ತಯಾರಿಸುವ ಸಿಂಪಲ್ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: curry
Serves: 4
-
ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
1/2 ಚಮಚ ಜೀರಿಗೆ
ಈರುಳ್ಳಿ1-2
ಟೊಮೆಟೊ 3-4
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಖಾರದ ಪುಡಿ 1 ಚಮಚ
ಗರಂ ಮಸಾಲ 1/2 ಚಮಚ / ಮೀಟ್ ಮಸಾಲ
ಅರಿಶಿಣ ಪುಡಿ ಅರ್ಧ ಚಮಚ
ಅಣಬೆ 100ಗ್ರಾಂ
ಬಟಾಣಿ 1 ಕಪ್
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ.
* ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ.
* ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
* ಈಗ ಟೊಮೆಟೊ ಹಾಕಿ ಅದರ ಮೇಲೆ ಉಪ್ಪನ್ನು ಉದುರಿಸಿ. ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.
* ಅದರ ಮೇಲೆ ಖಾರದ ಪುಡಿ, ಗರಂ ಮಸಾಲ ಅಥವಾ ಮೀಟ್ ಮಸಾಲ ಹಾಕಿ.
* ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಸೌಟ್‌ನಿಂದ ಆಡಿಸುತ್ತಾ ಇರಿ.
* ಈಗ ಬಟಾಣಿ, ಅಣಬೆ, ಅರಿಶಿಣ ಹಾಕಿ.
*ಈಗ ಸಾಧಾರಣ ಉರಿಯಲ್ಲಿ 3-4 ನಿಮಿಷ ಬೇಯಿಸಿ.
*ನಂತರ ಸ್ವಲ್ಪ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.
* ಸೌಟ್‌ನಿಂದ ತಳ ಹಿಡಿಯದಂತೆ ಆಗಾಗ ಆಡಿಸುತ್ತಾ ಇರಿ.
* ಈಗ ಮಿಶ್ರಣ ಬೆಂದ ಮೇಲೆ ಪಾತ್ರೆಯ ಮುಚ್ಚಳ ತೆಗೆದು ಮಿಶ್ರಣ ಸ್ವಲ್ಪ ಗಟ್ಟಿ ಗ್ರೇವಿಯಾಗುವವರೆಗೆ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಬಟಾಣಿ-ಅಣಬೆಯ ಗ್ರೇವಿ ರೆಡಿ.
- ನೀವು ಅಣಬೆ ಬದಲಿಗೆ ಬಟಾಣಿ ಜೊತೆ ಪನ್ನೀರ್ ಕೂಡ ಹಾಕಿ ಇದೇ ವಿಧಾನದಲ್ಲಿ ಅಡುಗೆ ಮಾಡಬಹುದು. ಇದನ್ನು ಡ್ರೈಯಾಗಿ ಮಾಡಬಯಸುವುದಾದರೆ ನೀರು ಹಾಕದೆ ಬೇಯಿಸಿ.
- ಸರ್ವ್ -
- ಕೊಬ್ಬು - 2 ಗ್ರಾಂ
- ಕಾರ್ಬ್ಸ್ - 18ಗ್ರಾಂ
- ನಾರಿನಂಶ - 5 ಗ್ರಾಂ



Click it and Unblock the Notifications
