Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!
ಕಲ್ಲಂಗಡಿ ಹೆಚ್ಚು ಕಡಿಮೆ ಎಲ್ಲರಿಗೂ ಪ್ರಿಯವಾದ ಹಣ್ಣಾಗಿದೆ. ಕಲ್ಲಂಗಡಿ ಹಣ್ಣಿನ ಸೀಸನ್ ಇದಾಗಿದ್ದು, ಕಲ್ಲಂಗಡಿಯ ಕೆಂಪು ರಸದಿಂದ ಆರೋಗ್ಯಯುತವಾದ ದೇಹವನ್ನು ಪಡೆದುಕೊಳ್ಳಬಹುದು. ಕಲ್ಲಂಗಡಿ ಹೆಚ್ಚು ಪ್ರೊಟೀನ್ ನ್ಯೂಟ್ರೀನ್ ಅಡಕವಾಗಿರುವ ಆರೋಗ್ಯದಾಯಿ ಪೇಯವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಬ್ಬಿನ ಜ್ಯೂಸ್ ಅನ್ನು ಈ ಎರಡು ವಿಧಾನಗಳಲ್ಲಿ ಮಾಡಿ
ಒಂದು ಗ್ಲಾಸ್ನಷ್ಟು ಕಲ್ಲಂಗಡಿ ಜ್ಯೂಸ್ ನಿಮ್ಮನ್ನು ರೋಗಗಳಿಂದ ಮುಕ್ತಗೊಳಿಸುತ್ತದೆ. ಉದಾಹರಣೆಗೆ, ಕಲ್ಲಂಗಡಿ ಹಣ್ಣು ನಿಮ್ಮನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಕಿಡ್ನಿಯನ್ನು ಸ್ವಚ್ಛಮಾಡುತ್ತದೆ ಮತ್ತು ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಉಂಟುಮಾಡುತ್ತದೆ. ನಿಮ್ಮ ತ್ವಚೆಗೂ ಹೊಳಪನ್ನು ತರುವ ಕೆಲಸವನ್ನು ಕಲ್ಲಂಗಡಿ ಮಾಡುತ್ತದೆ.
ಹಲವಾರು ಜನರು ಬೆಳಗ್ಗಿನ ಉಪಹಾರದಲ್ಲಿ ಹಣ್ಣಿನ ಜ್ಯೂಸ್ ಅನ್ನು ಸೇವಿಸುತ್ತಾರೆ. ನೀವು ಒಬ್ಬ ಹಣ್ಣಿನ ಜ್ಯೂಸ್ ಪ್ರೇಮಿಯಾಗಿದ್ದರೆ, ಭಾರತೀಯ ಶೈಲಿಯಲ್ಲಿ ತಯಾರು ಮಾಡಲಾದ ಪ್ರೋಟೀನ್ ನ್ಯೂಟ್ರೀನ್ ಭರಿತ ಜ್ಯೂಸ್ ರೆಸಿಪಿ ಇಲ್ಲಿದೆ. ಮಸಾಲಾ ಕಲ್ಲಂಗಡಿ ಜ್ಯೂಸ್ನಲ್ಲಿ ಜೀರಿಗೆ ಹುಡಿ, ಚಾಟ್ ಮಸಾಲಾ ಮುಂತಾದ ಸಾಂಬಾರು ಪದಾರ್ಥಗಳಿದ್ದು ನಿಮ್ಮ ಕಲ್ಲಂಗಡಿ ಜ್ಯೂಸ್ ಅನ್ನು ರುಚಿಕರವನ್ನಾಗಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆ ಮಾಡುವ ರೆಸಿಪಿಯಿದು
ಪ್ರಮಾಣ: 1 ಗ್ಲಾಸ್
ಸಿದ್ಧತಾ ಸಮಯ: 10 ನಿಮಿಷಗಳು
ಸಾಮಾಗ್ರಿಗಳು
1.ಕಲ್ಲಂಗಡಿ - 1 ಕಪ್
2.ಜೀರಿಗೆ ಹುಡಿ - 1 ಸ್ಪೂನ್
3.ಮೆಣಸಿನ ಹುಡಿ - ಸ್ವಲ್ಪ
4.ಚಾಟ್ ಮಸಾಲಾ - ಸ್ವಲ್ಪ
5.ಉಪ್ಪು - ರುಚಿಗೆ ತಕ್ಕಷ್ಟು
6.ನೀರು - ಬೇಕದಷ್ಟು
ಮಾಡುವ ವಿಧಾನ:
1.ಗ್ರಿಡ್ಡಲ್ ಅನ್ನು ಬಿಸಿ ಮಾಡಿ. ಜೀರಿಗೆ ಬೀಜಗಳನ್ನು ಹಾಕಿ ಮತ್ತು ಅವು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
2.ಅದನ್ನು ತಣಿಯಲು ಬಿಡಿ ಮತ್ತು ಗ್ರೈಂಡರ್ನಲ್ಲಿ ಅದನ್ನು ಹುಡಿ ಮಾಡಿಕೊಳ್ಳಿ.
3.ಸ್ವಲ್ಪ ನೀರಿನೊಂದಿಗೆ ಕಲ್ಲಂಗಡಿ ಹಣ್ಣನ್ನು ಗ್ರೈಂಡ್ ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆಗಾಗಿ ಲಿಂಬೆ ಚಹಾ
4.ಈಗ ಜೀರಿಗೆ ಹುಡಿ, ಮೆಣಸಿನ ಹುಡಿ, ಉಪ್ಪು ಮತ್ತು ಚಾಟ್ ಮಸಾಲಾವನ್ನು ಸೇರಿಸಿ.
5.ಸ್ವಲ್ಪ ಹೊತ್ತು ಅದನ್ನು ಗ್ರೈಂಡ್ ಮಾಡಿಕೊಳ್ಳಿ ಮತ್ತು ಗ್ಲಾಸ್ಗೆ ಹಾಕಿ.
ನಿಮಗೆ ಬೇಕಿದ್ದರೆ, ಐಸ್ ಕ್ಯೂಬ್ ಅನ್ನು ಹಾಕಿ ಚಿಲ್ ಆಗಿ ಸರ್ವ್ ಮಾಡಿ.



Click it and Unblock the Notifications