Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಾಯಿ ಚಪ್ಪರಿಸೋ ಆಂಬೊಡೆ ರೆಸಿಪಿ
ಹಬ್ಬದ ಅಡುಗೆ ಎಂದರೆ ಮೊದಲಿಗೆ ನೆನಪಾಗುವುದೇ ಆಂಬೊಡೆ ಅಥವಾ ಮಸಾಲ ವಡೆ. ಆಂಬೊಡೆಯ ರುಚಿ ಅದನ್ನು ಸವಿದವರಿಗೇ ಗೊತ್ತು. ಅದರ ಹೆಸರು ಕೇಳುತ್ತಲೇ ಬಾಯಿಯಲ್ಲಿ ನೀರೂರುತ್ತದೆ. ಹಬ್ಬದ ಮೆನುವಿನಲ್ಲಿ ಎಷ್ಟೇ ವೈವಿಧ್ಯತೆಗಳಿದ್ದರೂ, ನಾಲಿಗೆಗೆ ಖುಷಿ ನೀಡುವ ಆಂಬೊಡೆ ಇಲ್ಲದ ಅಡುಗೆ ಅಪೂರ್ಣವೇ. ಮದುವೆ, ಮುಂಜಿ, ಸಮಾರಂಭದ ಊಟಗಳಲ್ಲಿ ಸಹ ಆಂಬೋಡೆ ಇರಲೇಬೇಕು. ಹಬ್ಬಕ್ಕೆ ಮಾತ್ರ ಸೀಮಿತವಾಗದೇ ಮಳೆಗಾಲದಲ್ಲಿ ಕಾಫಿ, ಟೀ ಜತೆ ಬೆಸ್ಟ್ ಕಾಂಬಿನೇಷನ್ ಈ ಆಂಬೊಡೆ.

ಆರೋಗ್ಯಕ್ಕೂ ಸೈ, ನಾಲಿಗೆ ರುಚಿಗೂ ಸೈ. ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಖ್ಯಾತ ಖಾದ್ಯ ಆಂಬೋಡೆಯನ್ನು ತಯಾರಿಸುವ ಹಂತ ಹಂತದ ವಿಧಾನಗಳನನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ನೀವು ಇದುವರೆಗೂ ಆಂಬೊಡೆ ತಿಂದೇ ಇಲ್ಲ ಎಂದಾದರೆ ಕಡ್ಡಾಯವಾಗಿ ಇಂದೇ ಮಾಡಿ, ಮತ್ತೊಮ್ಮೆ, ಮಗದೊಮ್ಮೆ ತಿನ್ನಬೇಕು ಎನಿಸುವ ಅಂಬೋಡೆ ಖಂಡಿತ ನಿಮಗೆ ಇಷ್ಟವಾಗದೇ ಇರದು.

Recipe By: Meghashree Devaraju
Recipe Type: Snacks
Serves: 10 piece
-
ಬೇಕಾಗುವ ಸಾಮಾಗ್ರಿಗಳು
ಕಡಲೆ ಬೇಳೆ - 1 ಕಪ್
ನೀರು - 2 ಗ್ಲಾಸ್
ತುರಿದ ತೆಂಗಿನಕಾಯಿ - 1 ಕಪ್ (ತೆಂಗಿನಕಾಯಿ ಇಲ್ಲದೆಯೂ ಮಾಡಬಹುದು)
ಈರುಳ್ಳಿ- 2
ಹಸಿರು ಮೆಣಸಿನಕಾಯಿ - 4
ಶುಂಠಿ - 1 ಇಂಚು
ಕೊತ್ತಂಬರಿ ಸೊಪ್ಪು - 1 ಕಪ್
ಸಬ್ಬಸಿಗೆ ಸೊಪ್ಪು - 1 ಕಪ್
ಚಕ್ಕೆ -ಸಣ್ಣ ತುಂಡು
ಜೀರಿಗೆ- ಕಾಲು ಚಮಚ
ಲವಂಗ - ಒಂದು
ಉಪ್ಪು ರುಚಿಗೆ
ಎಣ್ಣೆ
-
ಮಾಡುವ ವಿಧಾನ
1. ಸ್ವಚ್ಛಗೊಳಿಸಿದ ಕಡಲೆ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ತೊಳೆದು ನಂತರ ಕನಿಷ್ಠ 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. 4 ಗಂಟೆಗಳ ನಂತರ ನೆನಸಿದ ಬೇಳೆಯ ಅರ್ಧಭಾಗವನ್ನು ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಸೇರಿಸಿ.
3. ಜತೆಗೆ ಹಸಿರು ಮೆಣಸಿನಕಾಯಿ, ಶುಂಠಿ, ಚಕ್ಕೆ, ಲವಂಗ ಮತ್ತು ಜೀರಿಗೆಯನ್ನು ಸೇರಿಸಿ.
4. ಅದನ್ನು ಚೆನ್ನಾಗಿ ಮಿಕ್ಸಿ ಮಾಡಿ ಪಾತ್ರೆಗೆ ವರ್ಗಾಯಿಸಿ.
6. ಕತ್ತರಿಸಿದ ಕೊತ್ತಂಬರಿ, ಸಬ್ಬಸಿಗೆ ಸೊಪ್ಪು ಮತ್ತು ಈರುಳ್ಳಿಯನ್ನು ಅದಕ್ಕೆ ಸೇರಿಸಿ
7. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿಮಿಶ್ರಣ ಮಾಡಿ
8. ನಂತರ ಸಣ್ಣ ಲಾಡೂ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
9.ಈ ನಡುವೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಗೆ ಇಡಿ (ಉರಿ ಸಣ್ಣ ಅಥವಾ ಮಧ್ಯಮವಾಗಿರಲಿ)
10. ಉಂಡೆ ಮಾಡಿಟ್ಟುಕೊಂಡಿದ್ದ ಮಿಶ್ರಣವನ್ನು ಕೈಯಲ್ಲಿ ಸ್ವಲ್ಪ ಚಪ್ಪಟೆ ಮಾಡಿ ನಿಧಾನವಾಗಿ ಎಣ್ಣೆಯಲ್ಲಿ ಬಿಡಿ.
11. ಮಿಶ್ರಣ ಗೋಲ್ಡನ್ ಬ್ರೌನ್ ಆಗುವವರೆಗೆ ಅದನ್ನು ಫ್ಲಿಪ್ ಮಾಡಿ ಫ್ರೈ ಮಾಡಿ.
- ತೆಂಗಿನಕಾಯಿ ತುರಿ ಆಯ್ಕೆಯಾಗಿದ್ದು, ಬಳಸದೆಯೂ ಇರಬಹುದು. ಹಬ್ಬದ ದಿನಗಳಲ್ಲಿ ಈರುಳ್ಳಿಯ ಪದಾರ್ಥ ಬೇಡ ಈರುಳ್ಳಿ ಬದಲಿಗೆ ಎಂದಾದರೆ ಕಡ್ಡಾಯವಾಗಿ ತೆಂಗಿನತುರಿ ಹಾಕಿ. ಸಬ್ಬಸಿಗೆ ಸೊಪ್ಪು ಸಹ ನಿಮ್ಮ ಆಯ್ಕೆ ಮಾತ್ರ. ವಡೆಯನ್ನು ತಪ್ಪದೇ ಕಡಿಮೆ ಅಥವಾ ಮಧ್ಯಮ ಫ್ಲೇಮ್‌ನಲ್ಲೇ ಬೇಯಿಸಿ, ಇಲ್ಲವಾದರೆ ಬೇಗ ಸುಟ್ಟುಹೋಗುತ್ತದೆ.
- Piece - 1
- ಕ್ಯಾಲೋರಿಗಳು - - 150
- ಕೊಬ್ಬು - - 3 ಗ್ರಾಂ
- ಪ್ರೋಟೀನ್ - - 4 ಗ್ರಾಂ
- ಫೈಬರ್ - - 5 ಗ್ರಾಂ



Click it and Unblock the Notifications
