Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
ಊಟದ ಜೊತೆಗೆ ನಮಗೆ ಸೈಡ್ ಡಿಶ್ ಆಗಿ ಏನಾದರೂ ಇರಲೇ ಬೇಕು. ಅದು ಚಟ್ನಿ, ಬೋಂಡಾ, ಬಜ್ಜಿ, ಉಪ್ಪಿನಕಾಯಿ, ಹಪ್ಪಳ, ಪಲ್ಯ, ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಊಟದ ಜೊತೆ ಮಸಾಲ ತುಂಬಿರುವ ಎಗ್ ಬುರ್ಜಿ ಇದ್ದರೆ ಅದರ ರುಚಿಯೇ ಬೇರೆ. ಹೌದು ಊಟದ ಜೊತೆ ಮೊಟ್ಟೆ ಬುರ್ಜಿ ಇದ್ದರೆ ಹಸಿವಿಲ್ಲದವರು ಕೂಡ ಒಂದಿಷ್ಟು ಊಟ ಜಾಸ್ತಿ ಮಾಡುತ್ತಾರೆ. ಅದರಲ್ಲೂ ಮಸಾಲ ಮೊಟ್ಟೆ ಬುರ್ಜಿ ಮಾಡಿದರೆ ಎಲ್ಲ ಖಾಲಿಯಾಗುತ್ತೆ.
ನಿಮಗೆ ಗೊತ್ತಿರಬಹುದು ಮೊಟ್ಟೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಅದರಲ್ಲಿ ಕ್ಯಾಲ್ಸಿಯಂಯಿಂದ ಹಿಡಿದು ಪೋಷಕಾಂಶಗಳ ತುಂಬಿರುವ ಆಹಾರವಾಗಿದೆ. ದಿನಕ್ಕೊಂದು ಮೊಟ್ಟೆ ತಿನ್ನುವುದು ಅದೆಷ್ಟೋ ಆರೋಗ್ಯಕರ ಅಂಶಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ನಾವಿಂದು ಮೊಟ್ಟೆ ಬುರ್ಜಿ ಮಾಡುವ ರೆಸಿಪಿ ನೋಡೋಣ.

ಈ ಮಸಾಲ ಮೊಟ್ಟೆ ಬುರ್ಜಿ ಅನ್ನದ ಜೊತೆ ಬಹಳ ರುಚಿ ನೀಡಲಿದೆ. ಅದರ ಜೊತೆ ಯಾವುದೆ ಸಾಂಬಾರ್ ಇದ್ದರೂ ಮೊಟ್ಟೆ ಬುರ್ಜಿಯಿಂದ ಅದರ ರುಚಿ ಹಾಳಾಗುವುದಿಲ್ಲ. ಹಾಗಾದರೆ ಈ ಮಸಾಲ ಮೊಟ್ಟೆ ಬುರ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮೊಟ್ಟೆ ಬುರ್ಜಿ ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಮೊಟ್ಟೆ ಬುರ್ಜಿಗೆ ಬೇಕಾಗುವ ಪದಾರ್ಥಗಳು
- ಮೊಟ್ಟೆ-4/5
- ಈರುಳ್ಳಿ-4/5
- ಹಸಿಮೆಣಸು
- ಪುದಿನ
- ಕರಿಬೇವಿನ ಸೊಪ್ಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅರಶಿನ ಪುಡಿ
- ಗರಂ ಮಸಾಲ
- ಧನಿಯಾ ಪುಡಿ
- ಖಾರದ ಪುಡಿ
- ಜೀರಿಗೆ ಪುಡಿ
- ಪೆಪ್ಪರ್ ಪುಡಿ
- ಟೊಮೆಟೋ-2
- ಉಪ್ಪು
- ಕಸೂರಿ ಮೇತೆ
- ಕೊತ್ತಂಬರಿ ಸೊಪ್ಪು
ಮಸಾಲ ಮೊಟ್ಟೆ ಬುರ್ಜಿ ಮಾಡೋದು ಹೇಗೆ
ಮೊದಲು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಣ್ಣಗೆ ಸ್ಲೈಸ್ ಮಾಡಿಕೊಂಡ ಈರುಳ್ಳಿ ಹಾಕಿ. ಈ ರೆಸಿಪಿಗೆ ಈರುಳ್ಳಿ ಸ್ವಲ್ಪ ಹೆಚ್ಚು ಹಾಕಿದರೆ ರುಚಿ ಹೆಚ್ಚಾಗುತ್ತದೆ. ಬಳಿಕ ಹಸಿಮೆಣಸು ಹಾಕಿ ಎರಡನ್ನೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಸುಮಾರು 5ರಿಂದ 6 ನಿಮಿಷ ಈರುಳ್ಳಿ ಬ್ರೌನ್ ಕಲರ್‌ಗೆ ಬರುವವರೆಗೆ ಫ್ರೈ ಮಾಡಿಕೊಳ್ಳಿ.
ಬಳಿಕ ಪುದಿನ ಹಾಗೂ ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಈ ಪೇಸ್ಟ್ ಇಲ್ಲದಿದ್ದರೆ ಬೆಳ್ಳುಳ್ಳಿ ಶುಂಠಿಯನ್ನ ಜಜ್ಜಿಯೂ ಸಹ ಹಾಕಿಕೊಳ್ಳಬಹುದು. ನಂತರ ಅರಶಿನ ಪುಡಿ, ಗರಂ ಮಸಾಲ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಪೆಪ್ಪರ್ ಪುಡಿಯನ್ನೂ ಹಾಕಿ ಚೆನ್ನಾಗಿ ಕಲಸಿ ಫ್ರೈ ಮಾಡಿ, ಇದಾದ ಬಳಿಕ ಟೊಮೆಟೋ ಹಾಕಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ರೆಸಿಪಿ ಮಾಡುವಾಗ ಪಾತ್ರೆಯ ತಳ ಹಿಡಿಯದಂತೆ ನೋಡಿಕೊಳ್ಳಿ ಇದಕ್ಕಾಗಿ ಮಧ್ಯಮ ಉರಿ ಇಟ್ಟುಕೊಳ್ಳಿ.
ಇದಾದ ಬಳಿಕ 4ರಿಂದ 5 ಮೊಟ್ಟೆಗಳನ್ನು ಒಡೆದು ಈ ಮಸಾಲೆಯೊಳಗೆ ಹಾಕಿ. ಆದರೆ ಮೊಟ್ಟೆ ಹಾಕಿದ ತಕ್ಷಣ ಅದನ್ನು ಮಿಶ್ರಣ ಮಾಡಬೇಡಿ. ಒಂದೆರಡು ನಿಮಿಷ ಅದನ್ನು ಹಾಗೆಯೇ ಒಡೆದು ಬಿಡಿ. ಮೊಟ್ಟೆ ಹಾಕಿದ ತಕ್ಷಣ ನೀವು ತಿರುಗಿಸಿದರೆ ಅದು ಒಡೆದು ಹಸಿ ವಾಸನೆ ಹಾಗೆ ಉಳಿಯುತ್ತದೆ. ಸ್ವಲ್ಪ ಸಮಯ ಬಿಟ್ಟು ತಿರುಗಿಸಿ. 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿದರೆ ಸಾಕು. ಕೊನೆಯದಾಗಿ ಕಸೂರಿ ಮೇತೆ, ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ.
ಈಗ ನಿಮ್ಮ ಮುಂದೆ ಮಸಾಲೆ ಮೊಟ್ಟೆ ಬುರ್ಜಿ ರೆಡಿಯಾಗಿದೆ. ಇದನ್ನು ಅನ್ನದ ಜೊತೆ, ಚಪಾತಿಗೂ ಸವಿಯಲು ನೀಡಬಹುದು.



Click it and Unblock the Notifications