Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಸಾಲ ಕಾರ್ನ್ ರೆಸಿಪಿ: ಚಟ್ ಪಟ್ ಸ್ನ್ಯಾಕ್ಸ್
ನಿಮಗೂ ಊಟದ ಹೊತ್ತಿಗೆ ಸೈಡ್ ಲ್ಲಿ ಒಂದು ಟೆಸ್ಟಿ ಸ್ಟಾಟರ್ ಇದ್ರೆ ಚೆನ್ನಾಗಿರತ್ತೆ ಅಂತ ಅನ್ಸತ್ತಾ? ಅಥವಾ ಸಾಂಜೆ ಹೊತ್ತಲ್ಲಿ ಏನಾದ್ರೂ ಖಾರ್ಖಾರವಾಗಿ ತಿನ್ನ್ಬೇಕು ಅನ್ಸತ್ತಾ? ಹಾಗಂತಾ ಯಾವಾಗ್ಲೂ ಹೊಟೆಲ್ಲಿಗೂ ಅಥವಾ ಬೀದಿ ಬದಿಯಲ್ಲೋ ಆಹಾರ ಸೇವಿಸುವುದು ಒಳ್ಳೇದಲ್ಲ, ಆದ್ರೆ ನಾಲಿಗೆ ರುಚಿ ಹೆಚ್ಚಿಸೋವಂಥ ರೆಸಿಪಿಯನ್ನ ನೀವ್ ಮನೆಯಲ್ಲೇ ಮಾಡಿ ಸವಿಬಹುದು. ಅಂತಹ ಒಂದು ಟೆಸ್ಟಿ ರೆಸಿಪಿ ನಿಮಗಾಗಿ.

ಮಸಾಲ ಕಾರ್ನ್ ಮಾಡಲು ಬೇಕಾಗುವ ಸಮಯ: ಕೇವಲ ಹತ್ತು ನಿಮಿಷಗಳು
ಮಸಾಲ ಕಾರ್ನ್ ಮಾಡಲು ಬೇಕಾಗುವ ಪದಾರ್ಥಗಳು
ಕಾರ್ನ್ / ಜೋಳ - ಒಂದು
ಈರುಳ್ಳಿ - ಒಂದು, ದೊಡ್ದಗಾತ್ರದ್ದು (ಸಣ್ಣದಾಗಿ ಹೆಚ್ಚಿಕೊಳ್ಳಿ)
ಟೊಮೆಟೊ - ಒಂದು, ಮಧ್ಯಮಗಾತ್ರದ್ದು (ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ)
ಬೆಣ್ಣೆ - ಸ್ವಲ್ಪ
ಗರಂ ಮಸಾಲ - ಅರ್ಧ ಚಮಚ
ಕಾಶ್ಮೀರಿ ಮೆಣಸಿನ ಪುಡಿ - ಅರ್ಧ ಚಮಚ
ಕೊತ್ತಂಬರಿ ಪುಡಿ - ಅರ್ಧ ಚಮಚ
ಜೀರಿಗೆ ಪುಡಿ - ಅರ್ಧ ಚಮಚ
ಕಾಳುಮೆಣಸಿನ ಪುಡಿ - ಕಾಲು ಚಮಚ
ಚಾರ್ಟ್ ಮಸಾಲಾ - ಅರ್ಧ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ನಿಂಬೆ ರಸ - ಅರ್ಧ ಚಮಚ
ಮಸಾಲಾ ಕಾರ್ನ್ ಮಾಡುವ ವಿಧಾನ:
- ಮೊದಲಿಗೆ ಹಸಿ ಕಾರ್ನ್ ನ್ನು ಬಿಡಿಸಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಬೇಕು. ನೀರು ಚೆನ್ನಾಗಿ ಕುದಿದ ನಂತರ ಅದಕ್ಕೆ ಬಿಡಿಸಿಟ್ಟ ಕಾರ್ನ್ ಸೇರಿಸಿ. ಬಳಿಕ ಮತ್ತೆ ಒಂದರಿಂದ ಎರಡು ನಿಮಿಷ ಕುದಿಸಿಕೊಳ್ಳಿ.
- ಕಾರ್ನ್ ಬೆಂದ ನಂತರ ನೀರನ್ನು ಸೋಸಿ ಕಾರ್ನ್ ನನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಸ್ವಲ್ಪವೂ ನೀರು ಇರದಂತೆ ನೋಡಿಕೊಳ್ಳಿ. ಈಗ ಒಂದು ಬಾಣಲೆಯನ್ನು ಬಿಸಿಗೆ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆಯನ್ನ ಹಾಕಬೇಕು. ಬೆಣ್ಣೆ ಕರಗುತ್ತಿದಂತೆ ಬೇಯಿಸಿಟ್ಟ ಕಾರ್ನ್ ಹಾಕಬೇಕು. ನಂತರ ಹೆಚ್ಚಿಟ್ಟ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಪುಡಿ, ಅಚ್ಚ ಖಾರದ ಪುಡಿ (ನಿಮ್ಮ ಖಾರಕ್ಕೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು), ಕಾಳು ಮೆನಸಿನ ಪುಡಿ, ಗರಂ ಮಸಾಲ ಪುಡಿ ಈ ಎಲ್ಲಾ ಮಸಾಲಾ ಪದಾರ್ಥ ಗಳನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು.
- ಕೊನೆಯಲ್ಲಿ ಸ್ವಲ್ಪ ನಿಂಬೆ ರಸ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿ ಯಾದ ಮಸಾಲಾ ಕಾರ್ನ್ ಮನೆಯಲ್ಲಿ ರೆಡಿ. ಬ್ಯಾಚುಲರ್ಸ್ ಕೂಡ ಸುಲಭವಾಗಿ ಮಾಡಿಕೊಳ್ಳಬಹುದು. ಟ್ರೈ ಮಾಡಿ!



Click it and Unblock the Notifications
