Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಮೀನು, ಚಿಕನ್ ಸಾರಿಗೆ ಬೊಂಬಾಟ್ ಆಗಿರುತ್ತೆ ಈ ಮರಗೆಣಸಿನ ಉಪ್ಪಿಟ್ಟು
ಹೆಚ್ಚಿನವರಿಗೆ ಮರಗೆಣಸಿನಿಂದ ಉಪ್ಪಿಟ್ಟು ಮಾಡಬಹುದು ಎಂಬುವುದೇ ಗೊತ್ತೇ ಇರಲ್ಲ, ಆದರೆ ಇದರಿಂದ ರುಚಿಕರವಾದ ಉಪ್ಪಿಟ್ಟು ತಯಾರಿಸಬಹುದಾಗಿದ್ದು, ರೆಸಿಪಿ ಕೂಡ ಅಷ್ಟೇ ಸರಳವಾಗಿದೆ. ಇದನ್ನು ಬ್ರೇಕ್‌ಫಾಸ್ಟ್ ಆಗಿ ಬಳಸಬಹುದು, ಇಲ್ಲಾ ಸಂಜೆ ಸ್ನ್ಯಾಕ್ಸ್ ಆಗಿ ಬಳಸಬಹುದು.

ಮರಗೆಣಸಿನ ಉಪ್ಪಿಟ್ಟು ಅನ್ನು ಕೇರಳ ಕಡೆ ಕಪ್ಪಪುಯಿಕ್ ಎಂದು ಕರೆಯುತ್ತಾರೆ. ಕೇರಳದ ಪ್ರಸಿದ್ಧ ರೆಸಿಪಿಗಳಲ್ಲಿ ಇದೂ ಒಂದು. ಅಲ್ಲಿಯ ಹೋಟೆಲ್‌ಗಳಲ್ಲಿ ನಿಮಗೆ ಕಪ್ಪಪುಯಿಕ್ ಸಿಗುತ್ತದೆ.
ಆದರೆ ಕರ್ನಾಟಕದ ಹೋಟೆಲ್‌ಗಳಲ್ಲಿ ಸಿಗುವುದು ಬಲು ಅಪರೂಪ, ಏನಿದ್ದರೂ ನೀವು ಮನೆಯಲ್ಲಿಯೇ ಮಾಡಿ ರುಚಿ ನೋಡಬೇಕಷ್ಟೆ. ಬನ್ನಿ ಮರಗೆಣಸಿನ ಉಪ್ಪಿಟ್ಟು ಮಾಡುವುದು ಹೇಗೆ ಎಂದು ನೋಡೋಣ.....
Recipe By: Reena TK
Recipe Type: Breakfast
Serves: 4
-
ಬೇಕಾಗುವ ಸಾಮಗ್ರಿ
ಮರಗೆಣಸು 1 ಕೆಜಿ
ಹಸಿ ಮೆಣಸು 3
ತೆಂಗಿನಕಾಯಿ ತುರಿ 1 ಕಪ್
ಅರಿಶಿಣ ಪುಡಿ ಅರ್ಧ ಕಪ್
ಈರುಳ್ಳಿ 2
ರುಚಿಗೆ ತಕ್ಕ ಉಪ್ಪು
ಸಾಸಿವೆ 1 ಚಮಚ
ಎಣ್ಣೆ 2 ಚಮಚ
ಸ್ವಲ್ಪ ಕರಿಬೇವಿನ ಎಲೆ
-
ಮಾಡುವ ವಿಧಾನ
* ಮೊದಲಿಗೆ ಮರಗೆಣಸಿನ ಸಿಪ್ಪೆ ಸುಲಿದು ಅದನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ, ಚೆನ್ನಾಗಿ ನೀರಿನಲ್ಲಿ ತೊಳೆದು
ಒಂದು ಮಡಿಕೆಯಲ್ಲಿ ಹಾಕಿ, ಬೇಯಲು ತಕ್ಕ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಕೊಳ್ಳಬೇಕು.
* ಇದೇ ಸಮಯಕ್ಕೆ ತೆಂಗಿನಕಾಯಿಗೆ ಹಸಿ ಮೆಣಸು, ಅರಿಶಿಣ ಹಾಕಿ ರುಬ್ಬಿಟ್ಟುಕೊಳ್ಳಬೇಕು (ಜೀರಿಗೆ ಮೆಣಸು ಹಾಕಿದರೆ ಅಧಿಕ ರುಚಿ).
* ಚೆನ್ನಾಗಿ ಬೇಯುವ ಗೆಣಸಾದರೆ 15 ನಿಮಿಷಕ್ಕೆ ಬೇಯುತ್ತದೆ, ಅದರ ನೀರು ಸೋಸಿ ಗೆಣಸನ್ನು ಸೌಟ್‌ನಿಂದ ಚುಚ್ಚಿ ಪುಡಿ-ಪುಡಿ ಮಾಡಿಡಿ.
* ಈಗ ದಪ್ಪ ತಳ ಇರುವ ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ, ಕರಿಬೇವು ಹಾಕಿ ಎರಡು ನಿಮಿಷ ಫ್ರೈ ಮಾಡಿ.
* ಈಗ ಉರಿ ಕಡಿಮೆ ಮಾಡಿ ಪುಡಿ -ಪುಡಿ ಮಾಡಿದ ಗೆಣಸು ಹಾಕಿ.
*ರುಬ್ಬಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿ, ಬೇಯಿಸುವಾಗ ಉಪ್ಪು ಸರಿಯಾಗಿದ್ದರೆ ಮತ್ತೆ ಉಪ್ಪು ಸೇರಿಸಬೇಕಾಗಿ, ಇಲ್ಲದಿದ್ದರೆ ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್ ಮಾಡಿದರೆ ಮರಗೆಣಸು ಉಪ್ಪಿಟ್ಟು ರೆಡಿ.
- * ಇದನ್ನು ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಸವಿಯುವುದಾದರೆ ಈರುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿ, ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ ಹಾಗೂ ನಿಂಬೆ ರಸ ಸೇರಿಸಿ ಖಾರ ಚಟ್ನಿ ರೆಡಿ, ಅದರ ಜೊತೆ ತಿನ್ನಲು ಸೂಪರ್ ಆಗಿರುತ್ತೆ. * ಇನ್ನು ಈ ರೀತಿಯ ಮರಗೆಣಸು ಉಪ್ಪಿಟ್ಟಿಗೆ ಚಿಕನ್ ಅಥವಾ ಮೀನು ಸಾರ್ ಕೂಡ ಬೊಂಬಾಟ್ ಕಾಂಬಿನೇಷನ್.
- ಸರ್ವ್ - 1 ಕೆಜಿ
- ಕ್ಯಾಲೋರಿ - 390ಕ್ಯಾ
- ಪ್ರೊಟೀನ್ - 2 ಗ್ರಾಂ
- ಕಾರ್ಬ್ಸ್ - 94ಗ್ರಾಂ



Click it and Unblock the Notifications
