Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾವಿನಕಾಯಿ ಸಾಂಬಾರ್ : ಸೀಸನ್ ಮುಗಿದಿದೆ ಸಿಗುತ್ತಿಲ್ಲ ಎಂದರೆ ಉಪ್ಪಲ್ಲಿ ಹಾಕಿದ ಮಾವಿನಕಾಯಿ ಇದ್ರೂ ಒಕೆ
ಕೆಲವೊಂದಿಷ್ಟು ಹಣ್ಣು, ತರಕಾರಿಗಳು ಸೀಸನ್ ಮುಗಿದ್ರು ಮತ್ತೆ ಮತ್ತೆ ಅದನ್ ತಿನ್ಬೇಕು ಅನ್ಸತ್ತೆ. ಅದ್ರಲ್ಲೂ ಮುಖ್ಯವಾಗಿ ಮಾವಿನ್ ಕಾಯಿ. ಈಗ ಅದ್ರ ಸೀಸನ್ ಮುಗಿತಾ ಬಂದಿದೆ. ಆದ್ರೆ ಮಾರ್ಕೇಟ್ನಲ್ಲಿ ಈಗ್ಲೂ ಮಾವಿನ ಕಾಯಿ ಮತ್ತು ಹಣ್ಣಿಗ್ ಕೊರತೆ ಇಲ್ಲ. ನೀವೇನಾದ್ರು ಮಾವಿನ್ ಕಾಯಿ ಸಿಸನ್ ನಲ್ಲಿ ಈ ರೀತಿ ಒಂದ್ ಸ್ವೆಷಲ್ ರೆಸಿಪಿ ಮಾಡ್ಕೊಂಡ್ ತಿಂದಿಲ್ದೇ ಇದ್ರೆ, ಇವತ್ತೇ ಹೋಗಿ ಒಂದ್ ಮಾವಿನಕಾಯಿ ತಗೊಂಡ್ ಬನ್ನಿ.

ಈ ರೀತಿ ರೆಸಿಪಿ ಒಂದ್ ಸಲ ಮಾಡಿ ನ್ಡಿ, ಮನೆಯವರೆಲ್ಲಾ ನಾಲಿಗೆ ಚಪ್ಪರಿಸಿಕೊಂಡು ಊಟ ಮಾಡ್ತಾರೆ. ಹಾಗಾದ್ರೆ ಬನ್ನಿ ಸ್ಪೆಷಲ್ಲಾಗಿ ಮಾವಿನ ಕಾಯಿ ಸಾಂಬಾರ್ ಮಾಡೋದ್ ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಹುಳಿ ಮಾವಿನಕಾಯಿ - ಒಂದು
ತೊಗರಿ ಬೇಳೆ - ಒಂಡು ಕಪ್
ಕೊತ್ತಂಬರಿ ಬೀಜ- ಒಂದು ಚಮಚ
ಜೀರಿಗೆ - ಒಂದು ಚಮಚ
ಕಾಳು ಮೆಣಸು - ಐದು
ಮೆಂತೆ ಕಾಳು - ಅರ್ಧ ಚಮಚ
ಬಿಳಿ ಎಳ್ಳು - ಅರ್ಧ ಚಮ
ಕೆಂಪು ಮೆಣಸು - ಖಾರಕ್ಕೆ ತಕ್ಕಷ್ಟು
ಬೆಲ್ಲ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಹಸಿ ಕಾಯಿ ತುರಿ - ಅರ್ಧ ಕಪ್
ಹಸಿಮೆಣಸಿನ ಕಾಯಿ - 4-5
ಬೆಳ್ಳುಳ್ಳಿ ಎಸಳು -ಹತ್ತು
ಕೊಬ್ಬರಿ ಎಣ್ಣೆ - ಒಗ್ಗರಣೆಗೆ
ಅರಿಶಿನ - ಚಿಟಿಕೆಯಷ್ಟು
ಮಾಡುವ ವಿಧಾನ
- ಮೊದಲಿಗೆ ಒಂದು ಕಪ್ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಪಾತ್ರೆಗೆ ಹಾಕಿ. ಅದಕ್ಕೆ ಮಾವಿನಕಾಯಿ, ಸ್ವಲ್ಪ ಅರಿಶಿನ, ಸ್ವಲ್ಪ ಎಣ್ಣೆ, ನೀರು ಹಾಕಿ ಬೇಯಿಸಿಕೊಳ್ಳಿ. ಮೂರು ವಿಜಲ್ ಕೂಗಿಸಿಕೊಂದರೆ ಸಾಕು. (ತೊಗರಿ ಬೇಳೆ ಹಾಗೂ ಮಾವಿನ ಕಾಯಿಯನ್ನು ನೀವು ಎಷ್ಟು ಜನರಿಗೆ ಸಾಂಬಾರ್ ಮಾಡುತ್ತೀರಿ ಎನ್ನುವದರ ಆಧಾರದ ಮೇಲೆ ಹೆಚ್ಚುಕಡಿಮೆ ಮಾಡಿಕೊಳ್ಳಬಹುದು).
- ಈಗ ಒಂದು ಬಾಣಲೆಯನ್ನು ಬಿಸಿಗಿಡಿ. ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯಕಾಳು. ಕಾಳುಮೆಣಸು, ಬಿಳಿ ಎಳ್ಳು, ಕೆಂಪು ಮೆಣಸು/ ಒಣಮೆಣಸು ಎಲ್ಲವನ್ನೂ ಹಾಕಿ ಎಣ್ಣೆ ಹಾಕದೆ ಡ್ರೈ ಆಗಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಅದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಬೇಕು.
- ಕುಕ್ಕರ್ನಲ್ಲಿ ಬೇಯಿಸಿದ ಮಾವಿನ ಕಾಯಿಯ ಸಿಪ್ಪೆ ತೆಗೆದು ಅದರ ಪಲ್ಪ್ ತೆಗೆದುಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆ ಬಿಸಿಗಿಟ್ಟು, ಅದಕ್ಕೆ ಎಣ್ಣೆ ಹಾಕಿ ಸ್ವಲ್ಪ ಜೀರಿಗೆ, ಹಸಿಮೆಣಸಿನ ಕಾಯಿ, ಜಜ್ಜಿಟ್ಟ ಬೆಳ್ಳುಳ್ಳಿ ಹಾಕಿ ಬಾಡಿಸಿಕೊಳ್ಳಿ. ಬಳಿಕ ಅದಕ್ಕೆ ಮಾವಿನಕಾಯಿ ಪಲ್ಪ್ ಸೇರಿ. ಈಗ ಬೇಯಿಸಿಟ್ಟ ತೊಗರಿ ಬೇಳೆ, ಪುಡಿ ಮಾಡಿದ ಮಸಾಲಾ ಸೇರಿಸಿ ಬೇಕಾದಷ್ಟು ನೀರನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಸ್ವಲ್ಪ ಕಾಯಿ ತುರಿ ಸೇರಿಸಿ ಚೆನ್ನಾಗಿ ಕುದಿಸಬೇಕು. ಈ ಮಿಶ್ರಣ ತುಂಬಾ ಗಟ್ಟಿಯಾಗಿ ಇರಬಾರದು. ಅಗತ್ಯ ಇದ್ದರೆ ಮತ್ತೆ ನೀರು ಸೇರಿಸಿಕೊಂಡು ಕುದಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಮಾವಿನಕಾಯಿ ಸಾಂಬಾರ್ ರೆಡಿ . ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಹಾಗೂ ಮಾವಿನಕಾಯಿ ಸಾಂಬಾರ್ ಸೇರಿಸಿ ತಿಂದರೆ ತುಂಬಾ ರುಚಿಯಾಗಿ ಇರುತ್ತದೆ. ಟ್ರೈ ಮಾಡಿ.



Click it and Unblock the Notifications
