Just In
- 20 min ago
Beauty tips: ಮುಲೇತಿಯ ಈ ಫೇಸ್ಪ್ಯಾಕ್ ಬಳಸಿದರೆ ಮುಖದ ಕಾಂತಿ ಹೆಚ್ಚುತ್ತೆ ನೋಡಿ
- 49 min ago
ಪ್ರಸಿದ್ಧ ಗಾಯಕ ಅದ್ನಾನ್ ಸಾಮಿಯ ಮಾಲ್ಡೀವ್ಸ್ ಫೋಟೋಗಳು ವೈರಲ್, ಅದಕ್ಕೆ ಕಾರಣವೇ ಈ ಲುಕ್
- 2 hrs ago
ಯಮ್ಮೀ... ಯಮ್ಮೀ... ಚಿಕನ್ ಚಾಪ್ಸ್ ರೆಸಿಪಿ
- 4 hrs ago
ಮಕ್ಕಳು ವೈವಾಹಿಕ ಸಂಬಂಧದಲ್ಲಿ ದೌರ್ಜನ್ಯಕ್ಕೊಳಗಾದರೆ ಪೋಷಕರು ಹೇಗೆ ಪತ್ತೆ ಮಾಡಬೇಕು?
Don't Miss
- Movies
ಮದುವೆಗೂ ಮುನ್ನ ಗರ್ಭ ಧರಿಸಿದ ತಾರೆಯರಿವರು!
- News
ಕುಮಾರಸ್ವಾಮಿಗೆ ಹತಾಶರಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್
- Automobiles
2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್ ರೈಲು
- Technology
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!
- Sports
ಭಾರತದ ಮುಂದಿನ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಆಯ್ಕೆ ಆಗಲಿ: ಸುನಿಲ್ ಗವಾಸ್ಕರ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಮಾವಿನಕಾಯಿ ಚಿತ್ರಾನ್ನ ರೆಸಿಪಿ: ಚಿತ್ರಾನ್ನ ಇಷ್ಟವಿಲ್ಲದವರೂ ಇನ್ನೂ ಬೇಕು ಎಂದು ಹೇಳುವುದು ಗ್ಯಾರಂಟಿ
ಇದು ಮಾವು ಸೀಸನ್, ಈ ಸೀಸನ್‌ನ್ ಅಂದ್ರೆ ಮಾವಿನಕಾಯಿ, ಮಾವಿನ ಹಣ್ಣು ಇವುಗಳನ್ನು ಬಳಸಿ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ತಿನ್ನುವ ಸಮಯ. ಅದರಲ್ಲಿ ಹಸಿ ಮಾವಿನಕಾಯಿಂದ ನೀವು ನೂರಕ್ಕ ಅಧಿಕ ಬಗೆಯ ಉಪ್ಪಿಟ್ಟು, ಗೊಜ್ಜು ಅಂತೆಲ್ಲಾ ಮಾಡಿ ಸವಿಯಬಹುದು.
ಇಲ್ಲಿ ಮಾವಿನಕಾಯಿ ಚಿತ್ರಾನ್ನ ರೆಸಿಪಿ ನೀಡಿದ್ದೇವೆ, ನಿಮಗೆ ಚಿತ್ರಾನ್ನ ಇಷ್ಟ ಇದೆಯೋ, ಇಲ್ವೋ ಗೊತ್ತಿಲ್ಲ ಆದರೆ ಈ ಮಾವಿನ ಕಾಯ ಚಿತ್ರಾನ್ನ ಸವಿದರೆ ಮಾತ್ರ ಇನ್ನು ಸ್ವಲ್ಪ ಹಾಕಿಸಿಕೊಂಡು ತಿನ್ನುವುದು ಗ್ಯಾರಂಟಿ. ಬನ್ನಿ ಮಾವಿನ ಕಾಯಿ ಚಿತ್ರಾನ್ನ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: breakfast
Serves: 4
-
ಬೇಕಾಗುವ ಸಾಮಗ್ರಿ
* ಹಸಿ ಮಾವಿನಕಾಯಿ ಸಾಧಾರಣ ಗಾತ್ರದ್ದು (ಅರ್ಧ) ಹುಳಿ ಕಡಿಮೆಯಿರುವ ಮಾವಿನಕಾಯಿ ಆದರೆ 1 ಬಳಸಿ.
* ಅಕ್ಕಿ ಒಂದೂವರೆ ಲೋಟ
* ನೀರು ಮೂರು ಲೋಟ
* 2 ಚಮಚ ಎಣ್ಣೆ
* 2 ಈರುಳ್ಳಿ
* 4 ಹಸಿ ಮೆಣಸು
* ಸ್ವಲ್ಪ ಶೇಂಗಾ
* 1 ಚಮಚ ಕಡಲೆ ಬೇಳೆ
* 1 ಚಮಚ ಉದ್ದಿನ ಬೇಳೆ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕರಿಬೇವು
* ಸ್ವಲ್ಪ ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ
* ಅನ್ನ ಮಾಡಿಡಿ.
* ಅನ್ನ ಬೇಯುವ ಹೊತ್ತಿನಲ್ಲಿ ಮಾವಿನ ಕಾಯಿ ಸೊಪ್ಪೆ ಸುಲಿದು ತುರಿದಿಡಿ. ಬೀಜ ಹಾಕಬೇಡಿ.
* ಈರುಳ್ಳಿ, ಹಸಿ ಮೆಣಸು ಕತ್ತರಿಸಿ ಇಡಿ.
* ಈಗ ಪ್ಯಾನ್ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಕಡಲೆ ಬೀಜ , ಉದ್ದು, ಶೇಂಗಾ ಬೀಜ ಹಾಕಿ ಒಂದೆರಡು ನಿಮಿಷ ಹುರಿತಯಿರಿ, ನಂತರ ಕರಿಬೇವು ಹಾಕಿ ಈರುಳ್ಳಿ, ಹಸಿ ಮೆಣಸು ಹಾಕಿ.
* ಈರುಳ್ಳಿ ಸ್ವಲ್ಪ ಫ್ರೈ ಮಾಡಿದರೆ ಸಾಕು, ಈಗ ತುರಿದ ಮಾವಿನಕಾಯಿ ತುರಿ ಹಾಕಿ, ಚಿಕ್ಕ ಚಮಚದಲ್ಲಿ 2 ಚಮಚ (ರುಚಿಗೆ ತಕ್ಕಂತೆ) ಉಪ್ಪು, 1/2 ಚಮಚ ಅರಿಶಿಣ ಪುಡಿ ಹಾಕಿ 5 ನಿಮಿಷ ಬೇಯಿಸಿ ಸ್ಟೌವ್ ಆಫ್ ಮಾಡಿ.
* ಈಗ ರೆಡಿಯಾದ ಗೊಜ್ಜುವಿಗೆ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಾವಿನಕಾಯಿ ಗೊಜ್ಜು ರೆಡಿ.
- ತುಂಬಾ ಹುಳಿ ಇರುವ ಮಾವಿನಕಾಯಿ ಬಳಸಿದರೆ ಒಳ್ಳೆಯದು