Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರೆಸಿಪಿ: ನಾಲ್ಕೇ ಸಾಮಗ್ರಿ ಸಾಕು ಮಾವಿನಹಣ್ಣಿನ ರಸಾಯನ ಮಾಡಲು
ಮಾವಿನ ಹಣ್ಣಿನಿಂದ ಮಾಡುವ ರಸಾಯನ ರೆಸಿಪಿಯಿದು. ಇದನ್ನು ಮಾಡಲು ತುಂಬಾನೇ ಸುಲಭವಾಗಿದ್ದು ಅಷ್ಟೇ ರುಚಿಯಾಗಿರುತ್ತದೆ. ಅದರಲ್ಲೂ ದೋಸೆ, ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
3 ಮಾವಿನಹಣ್ಣು
1 ಕಪ್ ತೆಂಗಿನಹಾಲು
1/2 ಕಪ್ ಬೆಲ್ಲದ ಪುಡಿ
1/4 ಚಮಚ ಏಲಕ್ಕಿ
ಮಾಡುವ ವಿಧಾನ
ಮಾವಿನಹಣ್ಣಿನ ಸಿಪ್ಪೆ ಸುಲಿಯಿರಿ
ನಂತರ ತಿರುಳು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ, ಕೆಲವರು ಕೈಯಲ್ಲಿ
ಹಿಸುಕುತ್ತಾರೆ ಅದಕ್ಕಿಂತ ಮಿಕ್ಸಿಯಲ್ಲಿ ರುಬ್ಬಿದರೆ ಒಳ್ಳೆಯದು, ಮೃದುವಾಗಿ
ಬರುವುದು
ಈಗ ತೆಂಗಿನಕಾಯಿ ಹಾಲು, ಏಲಕ್ಕಿ ಪುಡಿಸೇರಿಸಿ
ಬೆಲ್ಲದ ಪುಡಿಗೆ ಸ್ವಲ್ಪ ನೀರು ಹಾಕಿ ಬೆಲ್ಲದ ಪಾಕ ಮಾಡಿ, ತಣ್ಣಗಾದ ಮೇಲೆ
ಮಾವಿನಹಣ್ಣಿನ ಪೇಸ್ಟ್ಹಾಕಿ ಮಿಕ್ಸ್ ಮಾಡಿ
ನಂತರ ಒಂದು 4-5 ಗಂಟೆ ಫ್ರಿಡ್ಜ್ನಲ್ಲಿಟ್ಟು ಸರ್ವ್ ಮಾಡಿ. ಇದು ದೋಸೆ, ಚಪಾತಿ
ಜೊತೆ ತಿನ್ನಲು ಸೂಪರ್ ಆಗಿರುತ್ತದೆ.
ಇತರ ಟಿಪ್ಸ್
ನೀವು ಈ ರಸಾಯನ ಮಾಡಲು ಯಾವುದೇ ಬಗೆಯ ಮಾವಿನಹಣ್ಣುಗಳನ್ನು ಬಳಸಬಹುದು.
ಬೆಲ್ಲದ ಬದಲಿಗೆ ಸಕ್ಕರೆ ಕೂಡ ಬಳಸಬಹುದು, ಆದರೆ ಬೆಲ್ಲ ಹೆಚ್ಚು ಆರೋಗ್ಯಕರ
ನೀವು ತೆಂಗಿನಕಾಯಿ ತುರಿದು ಅದನ್ನು ಹಿಂಡಿ ತೆಂಗಿನಕಾಯಿ ಹಾಲು ತೆಗೆದು ಬಳಸಬಹುದು
ಅಥವಾ ಡಬ್ಬಗಳಲ್ಲಿ ಸಿಗುವ ತೆಂಗಿನಕಾಯಿ ಹಾಲು ಸೇರಿಸಬಹುದು.
ಇನ್ನು ತೆಂಗಿನಕಾಯಿ ಹಾಲು ಬದಲಿಗೆ ಹಾಲು ಅಥವಾ ಬಾದಾಮಿ ಹಾಲು ಬಳಸಬಹುದು
ನೀವು ಇದಕ್ಕೆ ಬಾಳೆಹಣ್ಣು, ಹಲಸಿನಹಣ್ಣು, ಕರ್ಬೂಜ ಹಣ್ಣು ಮಿಕ್ಸ್ ಮಾಡಿ
ಹಾಕಬಹುದು.
ತೆಂಗಿನ ಕಾಯಿ ಹಾಲು ತೆಗೆಯುವುದು ಹೇಗೆ?
ತೆಂಗಿನಕಾಯಿ ತುರಿದು ಅದನ್ನು ಸ್ವಲ್ಪ ನೀರು ಹಾಕಿ, ಮಿಕ್ಸಿಯಲ್ಲಿ ರುಬ್ಬಿ ನಂತರ
ಶುದ್ಧ ಬಟ್ಟೆಯಲ್ಲಿ ಹಾಕಿ ಹಿಂಡಿ, ಹೀಗೆ ಮಾಡಿದರೆ ಕಾಯಿಹಾಲು ತೆಗೆಯುವುದು
ಸುಲಭವಾಗುವುದು.
ಮಾವಿನ ಹಣ್ಣು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಾವಿನಹಣ್ಣು ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಹೃದಯದ ಆರೋಗ್ಯಕ್ಕೆ
ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮಾವಿನಹಣ್ಣು ಸೀಸನಲ್ ಹಣ್ಣು, ಇದು ರೋಗ
ನಿರೋಧಕ ಶಕ್ತಿ ಹೆಚ್ಚಿಸುತ್ತದೆ.



Click it and Unblock the Notifications