Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾವಿನ ಹಣ್ಣಿನ ಜಾಮ್: ಮೂರೇ ಮೂರು ಸಾಮಗ್ರಿ ಸಾಕು, ರುಚಿಯಾದ ಜಾಮ್ ರೆಡಿ
ಜಾಮ್ ಅಂದರೆ ಮಕ್ಕಳಿಗೆ ಪಂಚ ಪ್ರಾಣ, ಅದರಲ್ಲೂ ಮಾವಿನಹಣ್ಣಿನ ಜಾಮ್ ಅಂದರೆ ಕೇಳಬೇಕೇ ಇನ್ನೂ ರುಚಿ, ನೀವು ಈ ಸೀಸನ್‌ನಲ್ಲಿ ನೀವು ಮಾವಿನ ಹಣ್ಣಿನ ಜಾಮ್ ಮಾಡಿ, ತುಂಬಾ ಸುಲಭವಾಗಿ ಮಾಡಬಹುದು, ಯಾವುದೇ ಪ್ರಿಸರ್‌ವೇಟಿವ್ ಹಾಕದೆ ಮಾಡುವ ಜಾಮ್ ಇದಾಗಿದೆ, ಮಕ್ಕಳು ಈ ಸಮಯದಲ್ಲಿ ಇಷ್ಟಬಂದಷ್ಟು ಜಾಮ್ ಸವಿಯಲಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ದೊಡ್ಡ ತಿರುಳು ಹೆಚ್ಚಾಗಿರುವ ಮಾವಿನಹಣ್ಣು
( ಪೌಡರ್ ಹಾಕಿ ಹಣ್ಣು ಮಾಡಿದ್ದು ಅಲ್ಲ ಹಾಗೆಯೇ ನೈಸರ್ಗಿಕವಾಗಿ ಹಣ್ಣಾದ
ಮಾವಿನಹಣ್ಣು, ಅವಾಗ ಮಾತ್ರ ರಸ ಹೆಚ್ಚಿರುತ್ತದೆ)
1/2 ಕಪ್ ಸಕ್ಕರೆ, ಸಿಹಿ ಇನ್ನೂ ಬೇಕೆಂದರೆ ಇನ್ನೂ ಹಾಕಬಹುದು
1 ಚಮಚ ನಿಂಬೆರಸ
ಮಾಡುವ ವಿಧಾನ
ಮಾವಿನ ತಿರುಳು ಮಾತ್ರ ಒಂದು ಕಪ್‌ನಲ್ಲಿ ಹಾಕಿ, ನಂತರ ಮಿಕ್ಸಿಯಲ್ಲಿ ನುಣ್ಣನೆ
ರುಬ್ಬಿ
ಈಗ ಮಾವಿನ ತಿರುಳು ಒಂದು ಕಡಾಯಿನಲ್ಲಿ ಹಾಕಿ 2 ನಿಮಿಷ ಬಿಸಿ ಮಾಡಿ.
ಸಕ್ಕರೆ ಸೇರಿಸಿ, ಸಕ್ಕರೆ ಸೇರಿಸುವಾಗ ಮಿಶ್ರಣ ಗಟ್ಟಿಯಾಗಿಸುತ್ತದೆ. ನಂತರ
ಉರಿಯಿಂದ ಇಳಿಸಿ 8-10 ನಿಮಿಷ ಬಿಡಿ
ನಂತರ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ
ನಂತರ ಗಾಳಿಯಾಡದ ಗಾಜಿನ ಡಬ್ಬದಲ್ಲಿ ಹಾಕಿಡಿ.
ಇದನ್ನು ನೀವು ಒಂದು ತಿಂಗಳವರೆಗೆ ಬಳಸಬಹುದು.
ಇತರ ಸಲಹೆ
- ನೀವು ಬೇಕಿದ್ದರೆ ಸ್ವಲ್ಪ ವೆನಿಲ್ಲಾ ಎಸೆನ್ಸ್ 1/2 ಚಮಚ ಸೇರಿಸಬಹುದು. ಏಲಕ್ಕಿ ಪುಡಿ ಕೂಡ ಸೇರಿಸಿ
- ನಾರಿನಂಶ ಕಡಿಮೆ ಇರುವ ಮಾವಿನ ಹಣ್ಣು ಜಾಮ್ ಮಾಡಲು ಒಳ್ಳೆಯದು
- ಮಾವಿನ ಹಣ್ಣು, ಸಕ್ಕರೆ ಹೆಚ್ಚು ಸೇರಿಸಿ ಹೆಚ್ಚು ಜಾಮ್ ಬಳಸಬಹುದು.
- ಇನ್ನು ನೀವು ತುಂಬಾ ಹಣ್ಣಾದ ಮಾವಿನಹಣ್ಣು ಕೂಡ ಬಳಸಬೇಡಿ, ತುಂಬಾನೇ ಹಣ್ಣಾಗಿದ್ದರೆ ಸಕ್ಕರೆ ಸೇರಿಸಿದಾಗ ಟೇಸ್ಟ್ ಹಾಳಾಗುವುದು.
- ಇನ್ನು ನಿಂಬೆರಸ ಸೇರಿಸುವುದರಿಂದ ಸಕ್ಕರೆ ಮತ್ತ ಗಟ್ಟಿಯಾಗುವುದನ್ನು ತಪ್ಪಿಸಬಹುದು.
- ಇದರಲ್ಲಿ ಪ್ರಿಸರ್‌ವೇಟಿವ್ ಸೇರಿಸದ ಕಾರಣ ಹೆಚ್ಚು ಸಮಯ ಇಡಲು ಸಾಧ್ಯವಿಲ್ಲ, ಹಾಗಾಗಿ ಹೊರಡಗೆ ಇಡಬೇಡಿ, ಫ್ರಿಡ್ಜ್‌ನಲ್ಲಿ ಇಟ್ಟು ಬಳಸಬೇಕು.
- ಜಾಮ್‌ಗೆ ನೀರಿನಂಶವಿರುವ ಸ್ಪೂನ್ ಹಾಕಬೇಡಿ, ಬೇಗೆ ಹಾಳಾಗುವುದು.



Click it and Unblock the Notifications
