For Quick Alerts
ALLOW NOTIFICATIONS  
For Daily Alerts

ರೆಸಿಪಿ: ಮೂರೇ ಸಾಮಗ್ರಿ ಬಳಸಿ ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್ ಮನೆಯಲ್ಲೇ ಮಾಡಬಹುದು!

Posted By:
|

ಇದು ಮಾವಿನ ಹಣ್ಣಿನ ಸೀಸನ್‌, ಜೊತೆಗೆ ಬೇಸಿಗೆ ಮಾವಿನ ಹಣ್ಣಿನ ಐಸ್‌ಕ್ರೀಮ್‌ ಸವಿಯಲು ಇದಕ್ಕಿಂತ ಬೆಸ್ಟ್‌ ಸಮಯ ಬೇಕೆ? ಮಾವಿನ ಹಣ್ಣಿನ ಐಸ್‌ಕ್ರೀಮ್‌ ಅನ್ನು ನೀವು ಮನೆಯಲ್ಲಿಯೇ ಮಾಡಿ ಸವಿಯಬಹುದು. ಅಲ್ಲದೆ ಈ ಐಸ್‌ಕ್ರೀಮ್‌ ಮಾಡಲು ನಿಮಗೆ ಹೆಚ್ಚಿನ ಸಾಮಗ್ರಿ ಬೇಕಾಗಿಲ್ಲ. ಮೂರೇ-ಮೂರು ವಸ್ತುಗಳನ್ನು ರುಚಿ-ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್ ರೆಡಿ ಮಾಡಬಹುದು.

ಹೊರಗಡೆಯಿಂದ ತರುವುದಾದರೆ ಕೆಮಿಕಲ್ ಮಿಕ್ಸ್ ಮಾಡಿರಬಹುದೇ ಎಂಬ ಆತಂಕವಿರುತ್ತದೆ, ನೀವೇ ಮಾಡಿದರೆ ಆ ಚಿಂತೆಯಿಲ್ಲ, ಆರಾಮವಾಗಿ ಮಕ್ಕಳಿಗೆ ಸವಿಯಲು ನೀಡಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Mango Ice Cream Recipe, ಮ್ಯಾಂಗೋಐಸ್‌ ಕ್ರೀಮ್‌ ರೆಸಿಪಿ
Mango Ice Cream Recipe, ಮ್ಯಾಂಗೋಐಸ್‌ ಕ್ರೀಮ್‌ ರೆಸಿಪಿ
Prep Time
30 Mins
Cook Time
6M
Total Time
36 Mins

Recipe By: Reena TK

Recipe Type:

Serves: 4

Ingredients
  • ಬೇಕಾಗುವ ಸಾಮಗ್ರಿ

    * 200 ಗ್ರಾಂ ಹೆವಿ ಗ್ರೀಮ್‌ ಅಥವಾ ವ್ಹಿಪ್ಪಿಂಗ್ ಕ್ರೀಮ್‌ (heavy cream or whipping cream)

    4 ಕಪ್‌ ಸಿಪ್ಪೆ, ಬೀಜ ತೆಗೆದ ಮಾವಿನ ಹಣ್ಣು

    * 1/2 ಕಪ್‌ ಸಕ್ಕರೆ

Red Rice Kanda Poha
How to Prepare
  • ಮಾಡುವ ವಿಧಾನ

    * ನೀವು ಮಾವಿನ ಹಣ್ಣಿನ ತುಂಡುಗಳನ್ನು ಜಾರ್‌ಗೆ ಹಾಕಿ ಸಕ್ಕರೆ ಸೇರಿಸಿ ಬ್ಲೆಂಡ್‌ ಮಾಡಿ. ಹೀಗೆ ಬ್ಲೆಂಡ್‌ ಮಾಡುವಾಗ ಸ್ವಲ್ಪ ನೀರು ಸೇರಿಸಬೇಡಿ.

    * ಹ್ಯಾಂಡ್‌ ಮಿಕ್ಸರ್‌ನಿಂದ ಐಸ್‌ಕ್ರೀಮ್‌ ಅನ್ನು ಚೆನ್ನಾಗಿ ಕದಡಿ. ಸ್ಟ್ಯಾಂಡ್‌ ಮಿಕ್ಸರ್ ಬಳಸಿದರೆ ಇನ್ನೂ ಒಳ್ಳೆಯದು. ಒಟ್ಟಿನಲ್ಲಿ ಚೆನ್ನಾಗಿ ಕದಡಬೇಕು.

    * ಈಗ ವ್ಹಿಪ್ಪಡ್ ಕ್ರೀಮ್‌ಗೆ ಮಾವಿನಹಣ್ಣಿನ ರಸ ಸೇರಿಸಿ, ನಂತರ ಹ್ಯಾಂಡ್‌ ಬ್ಲೆಂಡರ್‌ನಿಂದ ಮತ್ತೆ 2 ನಿಮಿಷ ಕದಡಿ, ಸಕ್ಕರೆ ಬೇಕಿದ್ದರೆ ಸೇರಿಸಿ.

    * ಈಗ ಮುಚ್ಚಳ ಇರುವ ಪಾತ್ರೆಯಲ್ಲಿ ಮಿಶ್ರಣವನ್ನು ಸುರಿಯಿರಿ. ನಂತರ 5-6 ಗಂಟೆ ಫ್ರೀಝರ್‌ನಲ್ಲಿಡಿ.

Instructions
  • ಟಿಪ್ಸ್ * ನೀವು ಭಾರತದಲ್ಲಿದ್ದರೆ ಮದರ್‌ ಡೈರಿ, ಅಮೂಲ್‌ ಕ್ರೀಮ್‌ ಬಳಸಿ. * ಮಾವಿನ ರಸಕ್ಕೆ ರಕ್ಕಂತೆ ಸಕ್ಕರೆಯನ್ನು ಸೇರಿಸಿ. * ನಿಮ್ಮ ಮಾವಿನ ರಸದ ಶೇ.25ರಷ್ಟು ವ್ಹಿಪ್ಪಡ್‌ ಕ್ರೀಮ್‌ ಬಳಸಿ. * ಮಾವಿನ ಹಣ್ಣಿನ ಐಸ್‌ಕ್ರೀಮ್ ಮಾಡುವಾಗ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ಬಳಸಿ, ಇಲ್ಲದಿದ್ದರೆ ಸಿಹಿ ಇರಲ್ಲ. * ಮಾವಿನ ಹಣ್ಣಿನ ರಸ ಹಾಗೂ ವ್ಹಿಪ್ಪಡ್‌ ಕ್ರೀಮ್‌ ಅನ್ನು ತುಂಬಾ ಮಿಕ್ಸ್ ಹೊತ್ತು ಮಿಕ್ಸ್ ಮಾಡಬೇಡಿ. 1-2 ನಿಮಿಷ ಮಿಕ್ಸ್ ಮಾಡಿದರೆ ಸಾಕು.
Nutritional Information
  • 1 ಸ್ಕೂಪ್ -
  • ಕ್ಯಾಲೋರಿ - 3ಕ್ಯಾ
  • ಕೊಬ್ಬು - 1 ಗ್ರಾಂ
  • ಪ್ರೊಟೀನ್ - 1ಗ್ರಾಂ
  • ಕಾರ್ಬ್ಸ್ - 1 ಗ್ರಾಂ
[ 5 of 5 - 16 Users]
X
Desktop Bottom Promotion