Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink
ರೆಸಿಪಿ: ಮೂರೇ ಸಾಮಗ್ರಿ ಬಳಸಿ ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್ ಮನೆಯಲ್ಲೇ ಮಾಡಬಹುದು!
ಇದು ಮಾವಿನ ಹಣ್ಣಿನ ಸೀಸನ್, ಜೊತೆಗೆ ಬೇಸಿಗೆ ಮಾವಿನ ಹಣ್ಣಿನ ಐಸ್‌ಕ್ರೀಮ್ ಸವಿಯಲು ಇದಕ್ಕಿಂತ ಬೆಸ್ಟ್ ಸಮಯ ಬೇಕೆ? ಮಾವಿನ ಹಣ್ಣಿನ ಐಸ್‌ಕ್ರೀಮ್ ಅನ್ನು ನೀವು ಮನೆಯಲ್ಲಿಯೇ ಮಾಡಿ ಸವಿಯಬಹುದು. ಅಲ್ಲದೆ ಈ ಐಸ್‌ಕ್ರೀಮ್ ಮಾಡಲು ನಿಮಗೆ ಹೆಚ್ಚಿನ ಸಾಮಗ್ರಿ ಬೇಕಾಗಿಲ್ಲ. ಮೂರೇ-ಮೂರು ವಸ್ತುಗಳನ್ನು ರುಚಿ-ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್ ರೆಡಿ ಮಾಡಬಹುದು.

ಹೊರಗಡೆಯಿಂದ ತರುವುದಾದರೆ ಕೆಮಿಕಲ್ ಮಿಕ್ಸ್ ಮಾಡಿರಬಹುದೇ ಎಂಬ ಆತಂಕವಿರುತ್ತದೆ, ನೀವೇ ಮಾಡಿದರೆ ಆ ಚಿಂತೆಯಿಲ್ಲ, ಆರಾಮವಾಗಿ ಮಕ್ಕಳಿಗೆ ಸವಿಯಲು ನೀಡಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type:
Serves: 4
-
ಬೇಕಾಗುವ ಸಾಮಗ್ರಿ
* 200 ಗ್ರಾಂ ಹೆವಿ ಗ್ರೀಮ್ ಅಥವಾ ವ್ಹಿಪ್ಪಿಂಗ್ ಕ್ರೀಮ್ (heavy cream or whipping cream)
4 ಕಪ್ ಸಿಪ್ಪೆ, ಬೀಜ ತೆಗೆದ ಮಾವಿನ ಹಣ್ಣು
* 1/2 ಕಪ್ ಸಕ್ಕರೆ
-
ಮಾಡುವ ವಿಧಾನ
* ನೀವು ಮಾವಿನ ಹಣ್ಣಿನ ತುಂಡುಗಳನ್ನು ಜಾರ್‌ಗೆ ಹಾಕಿ ಸಕ್ಕರೆ ಸೇರಿಸಿ ಬ್ಲೆಂಡ್ ಮಾಡಿ. ಹೀಗೆ ಬ್ಲೆಂಡ್ ಮಾಡುವಾಗ ಸ್ವಲ್ಪ ನೀರು ಸೇರಿಸಬೇಡಿ.
* ಹ್ಯಾಂಡ್ ಮಿಕ್ಸರ್‌ನಿಂದ ಐಸ್‌ಕ್ರೀಮ್ ಅನ್ನು ಚೆನ್ನಾಗಿ ಕದಡಿ. ಸ್ಟ್ಯಾಂಡ್ ಮಿಕ್ಸರ್ ಬಳಸಿದರೆ ಇನ್ನೂ ಒಳ್ಳೆಯದು. ಒಟ್ಟಿನಲ್ಲಿ ಚೆನ್ನಾಗಿ ಕದಡಬೇಕು.
* ಈಗ ವ್ಹಿಪ್ಪಡ್ ಕ್ರೀಮ್‌ಗೆ ಮಾವಿನಹಣ್ಣಿನ ರಸ ಸೇರಿಸಿ, ನಂತರ ಹ್ಯಾಂಡ್ ಬ್ಲೆಂಡರ್‌ನಿಂದ ಮತ್ತೆ 2 ನಿಮಿಷ ಕದಡಿ, ಸಕ್ಕರೆ ಬೇಕಿದ್ದರೆ ಸೇರಿಸಿ.
* ಈಗ ಮುಚ್ಚಳ ಇರುವ ಪಾತ್ರೆಯಲ್ಲಿ ಮಿಶ್ರಣವನ್ನು ಸುರಿಯಿರಿ. ನಂತರ 5-6 ಗಂಟೆ ಫ್ರೀಝರ್‌ನಲ್ಲಿಡಿ.
- ಟಿಪ್ಸ್ * ನೀವು ಭಾರತದಲ್ಲಿದ್ದರೆ ಮದರ್ ಡೈರಿ, ಅಮೂಲ್ ಕ್ರೀಮ್ ಬಳಸಿ. * ಮಾವಿನ ರಸಕ್ಕೆ ರಕ್ಕಂತೆ ಸಕ್ಕರೆಯನ್ನು ಸೇರಿಸಿ. * ನಿಮ್ಮ ಮಾವಿನ ರಸದ ಶೇ.25ರಷ್ಟು ವ್ಹಿಪ್ಪಡ್ ಕ್ರೀಮ್ ಬಳಸಿ. * ಮಾವಿನ ಹಣ್ಣಿನ ಐಸ್‌ಕ್ರೀಮ್ ಮಾಡುವಾಗ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ಬಳಸಿ, ಇಲ್ಲದಿದ್ದರೆ ಸಿಹಿ ಇರಲ್ಲ. * ಮಾವಿನ ಹಣ್ಣಿನ ರಸ ಹಾಗೂ ವ್ಹಿಪ್ಪಡ್ ಕ್ರೀಮ್ ಅನ್ನು ತುಂಬಾ ಮಿಕ್ಸ್ ಹೊತ್ತು ಮಿಕ್ಸ್ ಮಾಡಬೇಡಿ. 1-2 ನಿಮಿಷ ಮಿಕ್ಸ್ ಮಾಡಿದರೆ ಸಾಕು.
- 1 ಸ್ಕೂಪ್ -
- ಕ್ಯಾಲೋರಿ - 3ಕ್ಯಾ
- ಕೊಬ್ಬು - 1 ಗ್ರಾಂ
- ಪ್ರೊಟೀನ್ - 1ಗ್ರಾಂ
- ಕಾರ್ಬ್ಸ್ - 1 ಗ್ರಾಂ



Click it and Unblock the Notifications