Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇಲ್ಲಿದೆ ಸುಲಭವಾಗಿ ಮಾಡಬಹುದಾದ ಮಂಗಳೂರು ಸೌತೆ ಸಾರು
ಮಂಗಳೂರು ಸೌತೆ ಸೇವನೆಯಿಂದ ಇದೆ ನೂರೆಂಟು ಲಾಭ : ಮದುವೆ ಮನೆಯಲ್ಲಿ ತಯಾರಿಸೋ ಶೈಲಿಯ ಸೌತೆ ಹುಳಿ ಮಾಡುವ ವಿಧಾನ ಇಲ್ಲಿದೆ
ಮಂಗಳೂರು ಸೌತೆಯನ್ನು ನೀವು ನೋಡಿದ್ದಿರಬಹುದು. ಮದುವೆ ಮನೆಗಳಲ್ಲಿ ಘಮ ಘಮ ಎನ್ನುವ ಸೌತೆ ಹುಳಿಯನ್ನು ನೀವು ಎರಡೆರಡು ಬಾರಿ ಬಡಿಸಿಕೊಂಡು ಸವಿದಿದ್ದರಲೂಬಹುದು.

ಆದರೆ ಅನೇಕರಿಗೆ ಮನೆಯಲ್ಲಿ ಎಷ್ಟೇ ಬಾರಿ ಪ್ರಯತ್ನಿಸಿದರೂ ಆ ಮದುವೆ ಮನೆ ಶೈಲಿಯ ಸೌತೆ ಹುಳಿ ತಯಾರಿಸಲು ಸಾಧ್ಯವಾಗುವುದಿಲ್ಲ. ಸೌತೆಕಾಯಿ ಹುಳಿ ತಯಾರಿಸುವ ಸರಳ ವಿಧಾನವನ್ನು ಕಲಿಯುವ ಮುನ್ನ ನಾವು ಸೌತೆಕಾಯಿಯಿಂದ ದೇಹಕ್ಕೆ ಯಾವೆಲ್ಲ ರೀತಿಯ ಆರೋಗ್ಯ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ
ಮಂಗಳೂರು ಸೌತೆಯಿಂದ ಆರೋಗ್ಯ ಲಾಭ : ಸೌತೆಕಾಯಿಯು ಮೆಗ್ನಿಷಿಯಂ, ಫಾಸ್ಪರಸ್ ಹಾಗೂ ಪೊಟ್ಯಾಷಿಯಂನಂತಹ ಖನಿಜಾಂಶಗಳನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುವ ಕಾರ್ಯವನ್ನು ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಸೌತೆಕಾಯಿ ಸೇವಿಸುವುದು ಒಳ್ಳೆಯದು ಎಂದು ವೈದ್ಯರೇ ಶಿಫಾರಸು ಮಾಡಿದ್ದಾರೆ. ಸೌತೆಕಾಯಿಯಲ್ಲಿ ನೀರಿನಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ನಿಶ್ಶಕ್ತಿಯಿಂದ ಬಳಲುತ್ತಿರುವವರು ಸೌತೆಕಾಯಿ ಸೇವನೆ ಮಾಡುವುದು ಒಳ್ಳೆಯದು. ಒಣಚರ್ಮದ ಸಮಸ್ಯೆಯಿಂದಬಳಲುತ್ತಿರುವವರು ಸಹ ಈ ಸೌತೆಯನ್ನು ಸೇವಿಸಬಹುದಾಗಿದೆ.
ಮದುವೆ ಮನೆ ಶೈಲಿಯ ಮಂಗಳೂರು ಸೌತೆ ಹುಳಿ ತಯಾರಿಸುವ ಸಿಂಪಲ್ ವಿಧಾನ
ಇಲ್ಲಿದೆ :
ಬೇಕಾಗುವ ಸಾಮಗ್ರಿಗಳು :
ಕತ್ತರಿಸಿದ ಮಂಗಳೂರು ಸೌತೆ 1 ಕಪ್,
ಸಣ್ಣಗೆ ಕತ್ತರಿಸಿದ ಟೊಮೆಟೋ 1 ,
ಉದ್ದನಾಗಿ ಕತ್ತರಿಸಿದ ಈರುಳ್ಳಿ 1/2 ಕಪ್,
ಹಸಿಮೆಣಸು 1, ಬೆಲ್ಲ ಸ್ವಲ್ಪ,
ತೊಗರಿಬೇಳೆ 1 ಟೇಬಲ್ ಚಮಚ,
ನೀರು ಅಳತೆಗೆ ತಕ್ಕಷ್ಟು, ಸಾಸಿವೆ 1ಚಿಟಿಕೆ ,
ಕೊತ್ತಂಬರಿ ಬೀಜ 1 ದೊಡ್ಡ ಚಮಚ,
ಜೀರಿಗೆ 1/2 ಚಮಚ ,
ಮೆಂತೆ 1/4 ಚಮಚ, ಕಡ್ಲೆ ಬೇಳೆ 1/2 ಚಮಚ,
ಒಣಮೆಣಸು 5,
ಬೇವಿನ ಸೊಪ್ಪು 1 ಎಸಳು,
ಕೊತ್ತಂಬರಿ ಸೊಪ್ಪು 1/4 ಕಪ್,ಕಾಯಿ ತುರಿ 1 ಹೋಳು, ಅರಿಶಿಣ 1 ಚಿಟಿಕೆ,
ಅಡುಗೆ ಎಣ್ಣೆ 1ಚಮಚ,
ಬೆಳ್ಳುಳ್ಳಿ 2 ಎಸಳು ,
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
- ಮೊದಲಿಗೆ ಒಂದು ಕುಕ್ಕರ್ ತೆಗೆದುಕೊಂಡು ಇದಕ್ಕೆ ಕತ್ತರಿಸಿದ ಸೌತೆಕಾಯಿ, ಈರುಳ್ಳಿ, ಟೊಮೆಟೋ, ಹಸಿ ಮೆಣಸು, ತೊಗರಿಬೇಳೆ, ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ. ಸ್ವಲ್ಪ ನೀರನ್ನು ಸೇರಿಸಿ ಮೂರು ವಿಶಲ್ ಬರುವವರೆಗೂ ಬೇಯಿಸಿ. ನೆನಪಿಡಿ ಅತಿಯಾಗಿ ಬೆಲ್ಲವನ್ನು ಸೇರಿಸಿದರೆ ಹುಳಿ ತುಂಬಾನೇ ಸಿಹಿಯಾಗಿ ಬಿಡುತ್ತದೆ. ಹೀಗಾಗಿ ಸ್ವಲ್ಪವೇ ಸ್ವಲ್ಪ ಬೆಲ್ಲವನ್ನು ಸೇರಿಸಿದರೆ ಸಾಕಾಗುತ್ತದೆ.
- ಈಗ ಒಂದು ಬಾಣಲೆಗೆ ತೆಗೆದುಕೊಂಡು ಅದಕ್ಕೆ ಎಣ್ಣೆ, ಕೊತ್ತಂಬರಿ ಬೀಜ, ಬೇವಿನಸೊಪ್ಪು, ಜೀರಿಗೆ, ಮೆಂತೆ, ಕಡಲೆಬೇಳೆ, ಸಾಸಿವೆ ಹಾಕಿ ಹುರಿದುಕೊಳ್ಳಿ. ಬಳಿಕ ಇದೇ ಬಾಣಲೆಯಲ್ಲಿ ಒಣ ಮೆಣಸನ್ನು ಹುರಿದುಕೊಳ್ಳಿ. ಮಸಾಲೆ ಪದಾರ್ಥಗಳು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಇದನ್ನು ಹಾಕಿ. ಬಳಿಕ ತುರಿದಿಟ್ಟುಕೊಂಡ ಕಾಯಿ ತುರಿ, ಬೆಳ್ಳುಳ್ಳಿ ಹಾಗೂ ಅರಿಶಿಣವನ್ನು ಸೇರಿಸಿ ಮಸಾಲೆಯನ್ನು ರುಬ್ಬಿಕೊಳ್ಳಿ.
- ಈಗ ಕುಕ್ಕರ್ನಲ್ಲಿಟ್ಟ ತರಕಾರಿಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ರುಬ್ಬಿಕೊಂಡ ಮಸಾಲೆ ಪದಾರ್ಥವನ್ನು ಹಾಕಿ ಅವಶ್ಯಕತೆ ಬಿದ್ದರೆ ಅಳತೆಗೆ ತಕ್ಕಷ್ಟು ನೀರನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸೌತೆ ಹುಳಿಯನ್ನು ಅಲಂಕರಿಸಿದರೆ ಘಮ ಘಮ ಮದುವೆ ಮನೆ ಶೈಲಿಯ ಸೌತೆಕಾಯಿ ಹುಳಿ ಸವಿಯಲು ಸಿದ್ಧ . ಬಿಸಿ ಬಿಸಿ ಅನ್ನದೊಂದಿಗೆ ಮಂಗಳೂರು ಸೌತೆಯಿಂದ ತಯಾರಿಸಿದ ಹುಳಿ ಸವಿಯಲು ತುಂಬಾನೇ ಮಜವಾಗಿರುತ್ತದೆ.



Click it and Unblock the Notifications