Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಎಲ್ಲರಿಗೂ ಇಷ್ಟವಾಗುವ ಮಲೈ ಪನ್ನೀರ್ ರೆಸಿಪಿ
ಮಲೈ ಪನ್ನೀರ್ ಪ್ರತಿಯೊಬ್ಬರಿಗೂ ಇಷ್ವವಾಗುವ ಒಂದು ಅಡುಗೆಯಾಗಿದೆ. ಇದನ್ನು ಮನೆಯಲ್ಲಿ ವಿಶೇಷ ಅಡುಗೆ ಮಾಡುವಾಗ ಮಾಡಿದರೆ ಅಡುಗೆ ಮತ್ತಷ್ಟು ಸ್ಪೆಷಲ್ ಆಗುವುದು.
ಈ ಮಲೈ ಪನ್ನೀರ್ ರುಚಿ ಹೆಚ್ಚಿಸಲು ನಿಮಗೆ ಮುಖ್ಯವಾಗಿ ಬೇಕಾಗಿರುವುದು ಗೋಡಂಬಿ, ಬಾದಾಮಿ ಹಾಗೂ ಫ್ರೆಶ್ ಕ್ರೀಮ್ ಇವುಗಳ ಜೊತೆಗೆ ಇತರ ಸಾಮಗ್ರಿ ಹಾಕಿ ಮಾಡುವ ವಿಶೇಷ ಅಡುಗೆ ಇದಾಗಿದೆ.

ಇದನ್ನು ಮಾಡಲು ಸ್ವಲ್ಪ ಸಮಯ ಹಿಡಿದರೂ, ಇದರ ರುಚಿ ಸವಿದಾಗ ಪಟ್ಟ ಶ್ರಮ ಸಾರ್ಥಕ ಅನಿಸುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Gravy
Serves: 4
-
ಬೇಕಾಗುವ ಸಾಮಗ್ರಿ
ಪನ್ನೀರ್ 250ಗ್ರಾಂ
1/4 ಕಪ್ ಫ್ರೆಶ್ ಕ್ರೀಮ್
1/2 ಚಮಚ ಕಸೂರಿ ಮೇತಿ ( ಒಣಗಿದ ಮೆಂತೆ ಸೊಪ್ಪು)
1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
4 ಬಾದಾಮಿ
4 ಗೋಡಂಬಿ
1/2 ಚಮಚ ತುರಿದ ಶುಂಠಿ
2-3 ಬೆಳ್ಳುಳ್ಳಿ (ಜಜ್ಜಿದ್ದು)
1/4 ಚಮಚ ಗರಂ ಮಸಾಲ ಪುಡಿ
1/4 ಚಮಚ ಅರಿಶಿಣ ಪುಡಿ
1 ಚಮಚ ಖಾರದ ಪುಡಿ
1 ಚಮಚ ಕೊತ್ತಂಬರಿ ಪುಡಿ
2 ಚಮಚ ಎಣ್ಣೆ+ 1 ಚಮಚ ಎಣ್ಣೆ
ನೀರು
1 ಚಮಚ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ಮೊದಲಿಗೆ ಗೋಡಂಬಿ ಹಾಗೂ ಬಾದಾಮಿಯನ್ನುಮಿಕ್ಸಿಯಲ್ಲಿ ರುಬ್ಬಿ ಪೌಡರ್ ಮಾಡಿಕೊಳ್ಳಿ. ಇದನ್ನು ಚಿಕ್ಕ ಬೌಲ್‌ಗೆ ಹಾಕಿ 2 ಚಮಚ ನೀರು ಹಾಕಿ ಗಟ್ಟಿ ಪೇಸ್ಟ್ ಮಾಡಿ.
* ಪನ್ನೀರ್ ಅನ್ನು ಕತ್ತರಿಸಿ. ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ ಒಂದು ತಟ್ಟೆಗೆ ಹಾಕಿಡಿ.
* ಮತ್ತೊಂದು ಚಮಚ ಎಣ್ಣೆಯನ್ನು ಅದೇ ಪ್ಯಾನ್‌ಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ತುರಿದ ಶುಂಠಿ ಹಾಗೂ ಜಜ್ಜಿದ ಬೆಳ್ಳುಳ್ಳಿ ಹಾಕಿ ಒಂದೆರಡು ನಿಮಿಷ ಹುರಿಯಿರಿ.
* ಅದಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಹಾಕಿ 30 ಸೆಕೆಂಡ್ ಸೌಟ್‌ನಿಂದ ಆಡಿಸಿ.
* ಈಗ ಗೋಡಂಬಿ-ಬಾದಾಮಿ ಪೇಸ್ಟ್ ಹಾಕಿ ಎರಡು ಸೆಕೆಂಡ್ ಸೌಟ್‌ನಿಂದ ಆಡಿಸಿ.
* ಈಗ ಅರ್ಧ ಕಪ್ ನೀರು ಹಾಕಿ ಮಿಶ್ರಣವನ್ನು ಕುದಿಸಿ.
* ಮಿಶ್ರಣ ಕುದಿಯಲಾರಂಭಿಸಿದಾಗ ಉರಿ ಕಡಿಮೆ ಮಾಡಿ ಪನ್ನೀರ್, ಗರಂ ಮಸಾಲ ಪುಡಿ ಹಾಗೂ ಒಣ ಮೆಂತೆ ಸೊಪ್ಪು ಹಾಕಿ.
* ನಂತರ ಮಿಶ್ರ ಮಾಡಿ 3-4 ನಿಮಿಷ ಕುದಿಸಿ, ಈಗ 1/2 ಕಪ್ ಫ್ರೆಶ್ ಕ್ರೀಮ್ ಸೇರಿಸಿ.
* ಈಗ ಮಿಶ್ರ ಮಾಡಿ ಒಂದೆರಡು ನಿಮಿಷ ಕುದಿಸಿ ಸ್ಟೌವ್ ಆಫ್ ಮಾಡಿ. ಈಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಲೈ ಪನ್ನೀರ್ ರೆಡಿ.
ಚಪಾತಿ, ಬಟರ್ ನಾನ್, ಕುಲ್ಚಾ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.
- * ನಿಮಗೆ ಹೆಚ್ಚು ಗ್ರೇವಿ ಬೇಕೆಂದರೆ ಸ್ವಲ್ಪ ನೀರು ಅಧಿಕ ಹಾಕಿ, ಮಿಶ್ರಣ ಎಷ್ಟು ಬೇಕೋ ಅಷ್ಟು ಹದಕ್ಕೆ ಬರುವವರೆಗೆ ಕುದಿಸಿ ನಂತರ ಪನ್ನೀರ್ ಸೇರಿಸಿ. * ಪನ್ನೀರ್ ಜೊತೆ ಬಟಾಣಿ ಹಾಕಿದರೆ ಮತ್ತಷ್ಟು ರುಚಿಯಾಗಿರುತ್ತದೆ. * ಫ್ರೆಶ್ ಕ್ರೀಮ್ ಹಾಕಿದ ಮೇಲೆ ತುಂಬಾ ಹೊತ್ತು ಕುದಿಸಬೇಡಿ.
- ಸರ್ವ್ - 1 ಕಪ್
- ಕ್ಯಾಲೋರಿ - 366ಕ್ಯಾ
- ಪ್ರೊಟೀನ್ - 9.8ಗ್ರಾಂ
- ನಾರಿನಂಶ - 1.4ಗ್ರಾಂ



Click it and Unblock the Notifications