Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿಗೆ ಸ್ಪೆಷಲ್ ಸ್ವೀಟ್ ರೆಸಿಪಿ: ಮಲಾಯಿ ಚುಮ್ ಚುಮ್
ನಮ್ಮೆಲ್ಲರ ಸಡಗರ ಹಬ್ಬ ದೀಪಾವಳಿ ಇನ್ನೇನು ಬಂದೇ ಬಿಡ್ತು, ದೀಪಾವಳಿ ಅಂದ ಮೇಲೆ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ ಅಲ್ವಾ? ಈ ದೀಪಾವಳಿಗೆ ಸವಿಯಲು ನೀವು ಸ್ಪೆಷಲ್ ರೆಸಿಪಿ ನೋಡುತ್ತಿದ್ದರೆ ಮಾಡಲು ಸರಳವಾದ ಸ್ವೀಟ್‌ವೊಂದರ ರೆಸಿಪಿ ಇಲ್ಲಿದೆ.

ಇದು ಬೆಂಗಾಳಿ ಶೈಲಿಯ ಸ್ವೀಟ್ ರೆಸಿಪಿ ಆಗಿದ್ದು ಮಾಡಲು ಸುಲಭ, ರುಚಿಯೂ ಸೂಪರ್. ಇದನ್ನು ಪನ್ನೀರ್ ಬಳಸಿ ಮಾಡಲಾಗುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena Tk
Recipe Type: Sweet
Serves: depends
-
ಬೇಕಾಗುವ ಸಾಮಗ್ರಿ
ಪನ್ನೀರ್ 2 ಕಪ್
ಸಕ್ಕರೆ 2 ಕಪ್
ನೀರು 4-5 ಕಪ್
ಕೇಸರಿ ಬಣ್ಣ 1/2 ಚಮಚ
ಮಲೈ ಸ್ಟಫ್‌ಗೆ ಬೇಕಾಗುವ ಸಾಮಗ್ರಿ
ಹಾಲು 3 ಕಪ್
ಸಕ್ಕರೆ 2 ಕಪ್
ಏಲಕ್ಕಿ ಪುಡಿ 1 ಚಮಚ
ಅಲಂಕಾರಕ್ಕೆ
ಪಿಸ್ತಾ 1 ಚಮಚ
ಬಾದಾಮಿ ಸ್ವಲ್ಪ
ಕೇಸರಿ
-
ಮಾಡುವ ವಿಧಾನ
* ಒಂದು ಬೌಲ್‌ಗೆ ಪನ್ನೀರ್ ಹಾಕಿ ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಕಲೆಸಿ. ಮಿಶ್ರಣ ಮೃದುವಾಗಿರಲಿ.
* ಈಗ ಇದರಿಂದ ಚಿಕ್ಕ ಉಂಡೆ ಕಟ್ಟಿ ಪ್ಲೇಟ್‌ನಲ್ಲಿ ಇಡಿ.
* ಈಗ ಅಗಲ ಬಾಯಿ ಇರುವ ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ನೀರು ಕುದಿಯಲಾರಂಭಿಸಿದಾಗ ಅದರಲ್ಲಿ ಕೇಸರಿ ಬಣ್ಣ ಮತ್ತು ಸಕ್ಕರೆ ಹಾಕಿ ಕುದಿಸಿ.
* ಸಕ್ಕರೆ ಪಾಕ ರೆಡಿಯಾದ ಮೇಲೆ ಮೇಲೆ ಪನ್ನೀರ್ ಉಂಡೆ ಹಾಕಿ ಮೆಲ್ಲನೆ ತಿರುಗಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು, ಪನ್ನೀರ್ ಉಂಡೆ ಸಕ್ಕರೆ ಪಾಕವನ್ನು ಹೀರಿಕೊಂಡು ದಪ್ಪಗಾಗಿರುತ್ತದೆ.
* ಈಗ ದಪ್ಪ ತಳವಿರುವ ಮತ್ತೊಂದು ಪಾತ್ರೆ ತೆಗೆದುಕೊಂಡು ಕುದಿಸಿ, 3 ಕಪ್ ಹಾಲು ಒಂದೂವರೆ ಕಪ್ ಆಗುವಷ್ಟು ಹೊತ್ತು ಕುದಿಸಿ, ನಂತರ ಸಕ್ಕರೆ, ಕೇಸರಿ ಹಾಕಿ ಮಿಶ್ರ ಮಾಡಿ, ನಂತರ ಕುದಿಸುತ್ತಾ ಇರಿ. ಹಾಲು ಕೋಯಾದ ಹದಕ್ಕೆ ಬಂದಾಗ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ.
* ಈಗ ಪನ್ನೀರ್ ಉಂಡೆಯನ್ನು ಮೆಲ್ಲನೆ ನೈಫ್‌ನಿಂದ ಕತ್ತರಿಸಿ, ಅದರೊಳಗೆ ಮಲೈ ತುಂಬಿ.
ಈಗ ರೆಡಿಯಾದ ಮಲಾಯಿ ಚುಮ್‌ಚುಮ್ ಅನ್ನು ಪಿಸ್ತಾ, ಬದಾಮಿ, ಕೇಸರಿಯಿಂದ ಅಲಂಕರಿಸಿದರೆ ಸರ್ವ್ ಮಾಡಲು ರೆಡಿ.
- ಶೇಪ್ ನೀವು ಬೇಕಾದರೆ ಮೊಟ್ಟೆಯಾಕಾರದಲ್ಲಿ ಕೂಡ ಮಾಡಬಹುದು, ನೋಡಲು ಆಕರ್ಷಕವಾಗಿರುತ್ತದೆ. ಕೇಸರಿ ಬಣ್ಣ ಹಾಕದಿದ್ದರೆ ಬಿಳಿ ಬಣ್ಣದಲ್ಲಿ ಕಾಣುವುದು.
- ಸರ್ವ್ - 184ಕ್ಯಾ
- ಪ್ರೊಟೀನ್ - 3ಗ್ರಾಂ
- ಕಾರ್ಬ್ಸ್ - 25ಗ್ರಾಂ
- ಕೊಬ್ಬು - 2 ಗ್ರಾಂ



Click it and Unblock the Notifications
