Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ನಂಗ್ ಮೀನಿನ ತವಾ ಫ್ರೈ ರೆಸಿಪಿ
ಇಂಗ್ಲಿಷ್‌ನಲ್ಲಿ ಮಲ್ಬಾರ್ ಸೋಲೆ (Malbar Sole Fish) ಎಂದು ಕರೆಯಲ್ಪಡುವ ಮೀನನ್ನು ಮಂಗಳೂರು ಕಡೆ ನಂಗ್ ಎಂದು ಕರೆಯಲಾಗುವುದು. ಇನ್ನು ಕೇರಳದಲ್ಲಿ ಮಾಂದಲ್ ಎಂದು, ತಮಿಳುನಾಡಿನಲ್ಲಿ ನಾಕು ಮೀನು ಎಂದು ಕರೆಯುತ್ತಾರೆ.

ಒಣ ಮೀನು ಇಷ್ಟ ಪಡುವವರಿಗೆ ಈ ಮೀನು ತುಂಬಾನೇ ಇಷ್ಟವಾಗುತ್ತದೆ. ಇನ್ನು ಹಸಿಯಾದರೂ ಕೂಡ ಇದನ್ನು ಫ್ರೈ ಮಾಡಿದರೆ ಅಥವಾ ಪುಳಿಮುಂಜಿ ಅಂದ್ರೆ ಮೆಣಸು, ಹುಳಿ ಹಾಕಿ ತಯಾರಿಸಿದರೂ ಸೂಪರ್ ಆಗಿರುತ್ತದೆ.
ನಂಗ್ ಮೀನಲ್ಲಿ ಮುಳ್ಳು ಸ್ವಲ್ಪ ಅಧಿಕವಿರುತ್ತದೆ, ಆದರೆ ಬಿಡಿಸಿಕೊಂಡು ತಿನ್ನಬಹುದಾಗಿದ್ದು ಫ್ರೈ ಮಾಡಲು ಸ್ವಲ್ಪ ದೊಡ್ಡ ಮೀನು ಕೊಂಡರಂತೂ ಮುಳ್ಳು ಬಿಡಿಸಿ ತಿನ್ನಲು ಸುಲಭವಾಗುವುದು.
ನಾವಿಲ್ಲಿ ನಂಗ್ ಮೀನಿನ ತವಾ ಫ್ರೈ ರೆಸಿಪಿ ನೀಡಿದ್ದೇವೆ ನೋಡಿ:
{recipe}
ಮಾಡುವುದು ಹೇಗೆ?
* ಮೆಣಸು, ಹುಣಸೆ ರಸ, ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ. ಅದರಲ್ಲಿ ನಂಗ್ ಮೀನನ್ನು ಹಾಕಿ, ಮೀನಿಗೆ ಮಸಾಲೆ ಹಚ್ಚಿ.

* ಮಸಾಲೆ ಹಚ್ಚಿ 2 ತಾಸು ಇಟ್ಟರೆ ಮೀನು ಮಸಾಲೆ ಹೀರಿ ಕೊಂಡಿರುತ್ತದೆ.

* ಈಗ ತವಾಕ್ಕೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಗ್ಯಾಸ್ ಉರಿ ಕಡಿಮೆ ಮಾಡಿ ಅದರಲ್ಲಿ ಮೀನು ಹಾಕಿ ಒಂದೊಂದು ಬದಿ 5-6 ನಿಮಿಷ ಬೇಯಿಸಿ.

* ಬೇಕಿದ್ದರೆ ಸ್ವಲ್ಪ ನಿಂಬೆರಸ ಕೂಡ ಹಾಕಿದರೆ ಸವಿಯಲು ನಂಗ್ ಮೀನು ಫ್ರೈ ರೆಡಿ.



Click it and Unblock the Notifications