Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
1 ಕಪ್ ಗೋಧಿ ಹಿಟ್ಟಿನಿಂದ ಮಾಡಿ ಅದ್ಭುತ ತಿಂಡಿ: ಮಾಡುವ ವಿಧಾನ ಇಲ್ಲಿದೆ
ಗೋಧಿ ಹಿಟ್ಟಿನಿಂದ ನೀವು ಅತ್ಯಂತ ರುಚಿಕರ ಖಾದ್ಯಗಳ ಮಾಡಿ ಸವಿಯಬಹುದು ಎಂಬುದನ್ನು ತಿಳಿದಿದ್ದೀರಿ. ಗೋಧಿ ಹಿಟ್ಟಿನಿಂದ ಮಾಡುವಂತಹ ಚಪಾತಿ ಎಲ್ಲರಿಗೂ ಇಷ್ಟವಾಗುತ್ತೆ. ಚಪಾತಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಚಪಾತಿಯ ಜೊತೆಗೆ ಅದೇ ಹಿಟ್ಟಿನಿಂದ ಪೂರಿ ಕೂಡ ಮಾಡುವುದು ನೋಡಬಹುದು. ಇದೆಲ್ಲ ಹೊರತುಪಡಿಸಿದಂತೆ ಸಣ್ಣ ಪುಟ್ಟ ರುಚಿ ರುಚಿಯ ಸಿಹಿ ತಿಂಡಿಗಳು ಕೂಡ ಗೋಧಿ ಹಿಟ್ಟಿನಿಂದ ಮಾಡಬಹುದು.
ಹಾಗೆ ಈ ಗೋಧಿ ಹಿಟ್ಟಿನಿಂದ ಮಾಡುವಂತಹ ಸ್ಪೆಷಲ್ ಸಿಹಿ ತಿಂಡಿಯೊಂದರ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಈ ರೀತಿಯಾಗಿ ನೀವು ಸಿಹಿ ತಿಂಡಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ. ಹಾಗಾದ್ರೆ ಈ ಹೊಸ ರೀತಿಯಲ್ಲಿ 1 ಕಪ್ ಗೋಧಿ ಹಿಟ್ಟು ಬಳಸಿ ಮಾಡುವಂತಹ ಸಿಹಿ ತಿಂಡಿಯ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಗೋಧಿ ಹಿಟ್ಟಿನ ಈ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನಿಂದ ಮಾಡುವ ಸಿಹಿತಿಂಡಿಗೆ ಯಾವೆಲ್ಲಾ ವಸ್ತುಗಳ ಬಳಸಬೇಕು?
ಗೋಧಿ ಹಿಟ್ಟು
ಸಕ್ಕರೆ ಪುಡಿ
ಚಿರೋಟಿ ರವೆ
ಎಣ್ಣೆ
ತುಪ್ಪ
ಗೋಧಿ ಹಿಟ್ಟಿನಿಂದ ಸಿಹಿ ತಿಂಡಿ ಮಾಡುವುದು ಹೇಗೆ?
ಒಂದು ಬೌಲ್ಗೆ ಗೋಧಿ ಹಿಟ್ಟು ಹಾಕಿ ಈಗ ನೀವು ಎಷ್ಟು ಗೋಧಿ ಹಿಟ್ಟು ತೆಗೆದುಕೊಂಡಿದ್ದೀರೋ ಅದರ ಅರ್ಧ ಅಳತೆಯಷ್ಟು ಸಕ್ಕರೆಯನ್ನು ತೆಗೆದುಕೊಂಡು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಿ. ಪುಡಿ ಮಾಡುವಾಗ ಇದಕ್ಕೆ ಸ್ವಲ್ಪ ಚಿರೋಟಿ ರವೆ ಕೂಡ ಸೇರಿಸಿಕೊಳ್ಳಿ. ಈ ಪುಡಿಯನ್ನು ಗೋಧಿ ಹಿಟ್ಟಿನ ಜೊತೆ ಸೇರಿಸಿಕೊಳ್ಳಿ. ಹಾಗೆ ಇದಕ್ಕೆ ಉಪು ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಸಣ್ಣ ಕಪ್ಗೆ ಕಾಲು ಕಪ್ ತುಪ್ಪ ಹಾಕಿ ಅದನ್ನು ಬಿಸಿ ಮಾಡಿಕೊಂಡು ಈ ಹಿಟ್ಟಿಗೆ ಹಾಕಿಕೊಳ್ಳಿ. ನಂತರ ಚಮಚದ ಸಹಾಯದಿಂದ ಮಿಕ್ಸ್ ಮಾಡಿಕೊಳ್ಳಿ. ತಣ್ಣಗಾದ ಬಳಿಕ ಕೈಯಿಂದ ಈ ಹಿಟ್ಟನ್ನು ಕಲಸಿಕೊಳ್ಳಿ. ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಹಿಟ್ಟಿನಂತೆ ಹದ ಬರುವಂತೆ ಹಿಟ್ಟು ಮಾಡಿಕೊಳ್ಳಿ. ಸ್ವಲ್ಪ ಗಟ್ಟಿಯಾಗಿಯೇ ಇರಲಿ. ಈ ಹಿಟ್ಟನ್ನು ಮುಚ್ಚಳ ಮುಚ್ಚಿ 10 ನಿಮಿಷ ಇಡಿ.
ನಂತರ ಹಿಟ್ಟನ್ನು ಚಪಾತಿಗೆ ಹದ ಮಾಡುವಂತೆ ಒತ್ತಿ ಹದ ಮಾಡಬೇಕು. ಹಿಟ್ಟನ್ನು ದೊಡ್ಡ ಉಂಡೆ ಮಾಡಿಕೊಂಡು ಮಧ್ಯಕ್ಕೆ ಕತ್ತರಿಸಿ ಮೊದಲು ಅರ್ಧ ಭಾಗವನ್ನು ಮಾತ್ರವೇ ತಿಂಡಿಗೆ ಬಳಸಿ. ಈಗ ಹಿಟ್ಟನ್ನು ಮತ್ತೆ ಉಂಡೆ ಮಾಡಿ ಚಪಾತಿ ಮಣೆಯಲ್ಲಿ ಲಟ್ಟಿಸಬೇಕು ರೊಟ್ಟಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ. ನಂತರ ತುದಿಯನ್ನು ಕತ್ತರಿಸಿ ಔಕಾಕಾರವಾಗಿ ಹಿಟ್ಟು ಮಾಡಿಕೊಳ್ಳಿ. ನಂತರ ಹಿಟ್ಟನ್ನು ನೇರವಾಗಿ ಬೆರಳಿನ ದಪ್ಪದಷ್ಟು ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಹಾಗೆ ಚಾಕೊಲೆಟ್ ರೀತಿಯಲ್ಲಿ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದಾಗ ಈ ಕತ್ತರಿಸಿಕೊಂಡ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿಕೊಳ್ಳಿ. 8 ನಿಮಿಷಗಳ ಕಾಲ ಡೀಪ್ ಫ್ರೈ ಮಾಡಬೇಕು. ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಎಣ್ಣೆಯಿಂದ ಹೊರತೆಗೆದ ಬಳಿಕ ಅದರಿಂದ ಎಣ್ಣೆ ಉಳಿಯಲು ಜರಡಿಯಲ್ಲಿ ಹಾಕಿಡಿ. ಇದೇ ವಿಧಾನವಾಗಿ ಎಲ್ಲಾ ಹಿಟ್ಟನ್ನು ಸಹ ಮಾಡಿಕೊಳ್ಳಿ. ಇಷ್ಟಾದರೆ ಗೋಧಿ ಹಿಟ್ಟಿನಿಂದ ಸಿಹಿ ತಿಂಡಿಯೊಂದು ರೆಡಿಯಾಗುತ್ತದೆ. ಮಕ್ಕಳಿಗಂತು ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications
