Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳ ಮೂಳೆ ಬೆಳವಣಿಗೆಗೆ ಬೆಸ್ಟ್ ತಿಂಡಿ ಇದು! ಮಾಡೋದು ಸಹ ಸುಲಭ
ಮಕ್ಕಳ ಆರೋಗ್ಯಕ್ಕೆ ಪೂಕರವಾಗುವಂತಹ ತಿಂಡಿಯನ್ನು ಮನೆಯಲ್ಲಿ ಮಾಡಿ ಸವಿಯೋದು ನೋಡಿರುತ್ತೀರಿ. ಹಾಗೆ ಯಾವುದಾದರು ತಿಂಡಿ ಮಾಡಿದ್ರೆ ಅದು ಆರೋಗ್ಯದ ದೃಷ್ಟಿಯಿಂದಲೂ ಬೆಸ್ಟ್ ಎನಿಸಿಕೊಳ್ಳಬೇಕು. ಹಾಗೆ ಮಕ್ಕಳ ಮೂಳೆ ಬಲವಾಗಬೇಕು ಅಂದ್ರೆ ಹಲವು ರೀತಿಯ ತಿಂಡಿಗಳ ಮಾಡಿ ಸವಿಯೋದು ಕಾಮನ್. ಹಾಗೆ ಮಕ್ಕಳು ಮಾತ್ರವಲ್ಲ ಹಿರಿಯರ ಮೂಳೆ ಆರೋಗ್ಯಕ್ಕೂ ಬೆಸ್ಟ್ ಎನಿಸುವ ತಿಂಡಿಯನ್ನು ನಾವಿಂದು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಮೂಳೆಗಳು ಬಲವಾಗಬೇಕು ಅಂದ್ರೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕಾಗುತ್ತೆ. ಕ್ಯಾಲ್ಸಿಯಂ ಹಲವು ಖಾದ್ಯಗಳ ಮೂಲಕ ಪಡೆಯಬಹುದು. ಹಾಗೆ ಮೂಳೆ ಬಲವಾಗಲು ಹಲವು ರೀತಿಯ ಹಸಿ ತರಕಾರಿಗಳು, ಆಹಾರ ಪದಾರ್ಥಗಳು, ಕಾಳುಗಳನ್ನು ಸವಿಯಬೇಕಾಗತ್ತೆ. ಹೀಗಾಗಿ ನಾವಿಂದು ಬೇಳೆಗಳ ಬಳಸಿಕೊಂಡು ಮಾಡುವ ಸಿಹಿ ತಿಂಡಿ ಕುರಿತು ತಿಳಿಯೋಣ.

ಈ ಸಿಹಿ ತಿಂಡಿಯನ್ನು ಸವಿದರೆ ನಿಮ್ಮ ಮೂಳೆಗಳೂ ಸ್ಟ್ರಾಂಗ್ ಆಗೋದು ಖಚಿತ. ಹಾಗೆ ಸವಿಯಲು ಸಹ ಬಹಳ ರುಚಿ ನೀಡಲಿದೆ. ಹೀಗಾಗಿ ಮೂಳೆಗಳ ಬೆಳವಣಿಗೆಗೆ ಸಹಾಯವಾಗುವ ಈ ಖಾದ್ಯ ಮಾಡಿ ಸವಿಯುವ ಕುರಿತು ತಿಳಿಯೋಣ.
ಮೂಳೆ ಬೆಳವಣಿಗೆಗೆ ಸಹಕಾರಿಯಾಗುವ ಸಿಹಿ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಉದ್ದಿನ ಬೇಳೆ
- ಹೆಸರುಬೇಳೆ
- ಬೆಲ್ಲ
- ಹಾಲು
- ತುಪ್ಪ
- ಏಲಕ್ಕಿ ಪೌಡರ್
- ಉಪ್ಪು
ಮೂಳೆ ಬೆಳವಣಿಗೆಗೆ ಸಹಕಾರಿಯಾಗುವ ಸಿಹಿ ತಿಂಡಿ ಮಾಡುವ ವಿಧಾನವೇನು?
ಮೊದಲಿಗೆ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 1 ಕಪ್ ಉದ್ದಿನ ಬೇಳೆ ಹಾಕಿಕೊಂಡು ಹುರಿದುಕೊಳ್ಳಬೇಕು. ಹಾಗೆ ಇದಕ್ಕೆ ಅರ್ಧ ಕಪ್ ಹೆಸರು ಬೇಳೆ ಹಾಕಿಕೊಂಡು ಎರಡನ್ನು ಒಟ್ಟಿಗೆ ಚೆನ್ನಾಗಿ ಗರಿ ಗರಿಯಾಗಿ ಹುರಿಯಬೇಕು. ಅನಂತರ ಎರಡನ್ನು ತೆಗೆದು ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಗೆ 2 ಕಪ್ ಬೆಲ್ಲ ಹಾಕಿ 1 ಕಪ್ ನೀರು ಹಾಕಿ ಕರಗಲು ಬಿಡಿ.
ಬೆಲ್ಲ ಕರಗಿದ ಬಳಿಕ ಇದಕ್ಕೆ 1 ಸ್ಪೂನ್ ತುಪ್ಪ ಸೇರಿಸಿ ಗಟ್ಟಿಯಾಗಲು ಬಿಡಬೇಕು. 5 ನಿಮಿಷ ಕುದಿಬಂದು ಗಟ್ಟಿಯಾಗಬೇಕು. ಈಗ ಒಂದು ಮಿಕ್ಸಿ ಜಾರ್‌ನಲ್ಲಿ ಮೊದಲು ಹುರಿದುಕೊಂಡಿದ್ದ ಎರಡು ಬೇಳೆಗಳನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈಗ ಒಲೆಯಲ್ಲಿ ಕುದಿಯುತ್ತಿದ್ದ ಬೆಲ್ಲಕ್ಕೆ ಈ ಪುಡಿಯನ್ನು ಹಾಕಿಕೊಳ್ಳಬೇಕು. ಈಗ ಒಲೆ ಆಫ್ ಮಾಡಿಕೊಂಡಿರಬೇಕು.
ಹಾಗೆ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಬೇಕು, ಗಂಟುಗಳು ಇಲ್ಲದಂತೆ ಕಲಸಿಕೊಂಡು 3 ನಿಮಿಷ ಬಿಟ್ಟು ಮತ್ತೆ ಸಣ್ಣ ಉರಿಯಲ್ಲಿ ಒಲೆ ಇಟ್ಟು ಮಿಕ್ಸ್ ಮಾಡಿ. ಈಗ ಒಂದು ಕಪ್ ಹಾಲು ಹಾಕಿಕೊಳ್ಳಿ. ಹಾಗೆ ಇದಕ್ಕೆ ಏಲಕ್ಕಿ ಪುಡಿ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಈ ಹಿಟ್ಟನ್ನು ಒಂದು ತಟ್ಟೆಗೆ ಹಾಕಿಕೊಳ್ಳಬೇಕು. ತಟ್ಟೆಗೆ ಎಣ್ಣೆ ಅಥವಾ ತುಪ್ಪ ಸವರಿಕೊಂಡು ಬಳಿಕ ಈ ಹಿಟ್ಟನ್ನು ಹಾಕಿಡಬೇಕು. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಬೇಳೆ ಕಾಳುಗಳ ರುಚಿಯಾದ ತಿಂಡಿ ಸಿದ್ದವಾಗುತ್ತೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಉತ್ತಮ ಖಾದ್ಯ ಆಗಿರಲಿದೆ.
ನೀವು ಸಹ ಮನೆಯಲ್ಲಿ ಮಕ್ಕಳಿಗೆ ಇದನ್ನು ಮಾಡಿ ನೀಡಿ. ಮಕ್ಕಳ ಮೂಳೆಗಳ ಆರೋಗ್ಯಕ್ಕೆ ಇದು ಉತ್ತಮ ತಿಂಡಿ, ಹಾಗೆ ಬೆಲ್ಲ ಹಾಕಿ ಮಾಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ.



Click it and Unblock the Notifications
