Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯ ಪ್ರಸಾದ ಇಲ್ಲಿದೆ.! ಈ ಮೂರು ರೆಸಿಪಿ ಟ್ರೈ ಮಾಡಿ!
ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಅಲ್ಲಿ ಸಂಭ್ರಮ ಇದ್ದೇ ಇರುತ್ತೆ. ಹಾಗೆ ವರಮಹಾಲಕ್ಷ್ಮಿ ಹಬ್ಬದಲ್ಲಿ ಸಿಹಿ ಮಾಡೋದು ಕಾಮನ್. ಅದ್ರಲ್ಲೂ ಪೂಜೆ ಕಾರ್ಯಗಳಲ್ಲಿ ವೈವೇದ್ಯ ಮಾಡುವುದು ನೋಡಬಹುದು. ಹಾಗೆ ನೈವೇದ್ಯಕ್ಕಾಗಿ ಹಲವು ರೀತಿಯ ಪ್ರಸಾದ ಮನೆಯಲ್ಲಿ ಮಾಡಬಹುದು. ಇದನ್ನು ಪೂಜೆಯ ಸಮಯದಲ್ಲಿ ಮಾಡಿ ಸವಿಯುವಂತಹ ನೈವೇದ್ಯ ಮಾಡುವ ಕುರಿತು ತಿಳಿಯೋಣ.
ವರಮಹಾಲಕ್ಷ್ಮಿಯ ದಿನದಂದು ಮನೆಯಲ್ಲಿ ಈ ರೀತಿಯಾಗಿ ನೈವೇದ್ಯಗಳ ಮಾಡಿ ಪೂಜೆಯೊಂದಿಗೆ ಇಟ್ಟು ಸವಿಯಬಹುದು, ಹಾಗಾದ್ರೆ ನಾವಿಂದು ಪೂಜೆಗೆ ಮಾಡಬಹುದಾದ ನೈವೇದ್ಯ ಪ್ರಸಾದ ಮಾಡುವುದು ಹೇಗೆ?

ವರಮಹಾಲಕ್ಷ್ಮಿ ಪೂಜೆಯ ನೈವೇದ್ಯ ಪ್ರಸಾದ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ನೈವೇದ್ಯ ಮಾಡುವ ವಿಧಾನವೇನು? ಎಷ್ಟಯ ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ. ಇಂದು ನೈವೇದ್ಯಕ್ಕೆ 2 ರೀತಿಯ ಸಿಹಿ ಮಾಡಿ ನೋಡೋಣ.
ವರಮಹಾಲಕ್ಷ್ಮಿಯ ದಿನಕ್ಕೆ ನೈವೇದ್ಯ ಪ್ರಸಾದವಾಗಿ ಸ್ವೀಟ್ ಪೊಂಗಲ್
ಮಾಡುವ ವಿಧಾನ
ಮೊದಲು ಒಲೆ ಮೇಲೆ ಚಿಕ್ಕದ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ತುಪ್ಪ ಬಿಸಿಯಾದಾಗ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಈಗ ಕುಕ್ಕರ್ಗೆ ಒಂದು ಗ್ಲಾಸ್ ಹೆಸರು ಬೇಳೆ, ಒಂದು ಕಪ್ ಅಕ್ಕಿ ಹಾಕಿಕೊಂಡು ಚೆ್ನಾಗಿ ತೊಳೆದು ನಂತರ 2 ಕಪ್ ಹಾಲು, 3ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ.
ಈ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಕಪ್ ನೀರು ಸ್ವಲ್ಪ ಬೆಲ್ಲ ಹಾಕಿ ಕರಗಲು ಬಿಡಿ. ಈಗ 4 ಸೀಟಿ ಹೊಡೆಸಿದ ಬೇಳೆ ಅನ್ನವನ್ನು ಒಲೆ ಮೇಲೆ ಕುದಿಯುತ್ತೀರುವ ಬೆಲ್ಲದ ನೀರಿಗೆ ಹಾಕಿಕೊಳ್ಳಬೇಕು. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಬೇಕು. ಹಾಗೆ ಇದಕ್ಕೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಶುಂಠಿ ಪುಡಿ, ಹಾಗೆ ಫ್ರೈ ಮಾಡಿಕೊಂಡಿದ್ದ ಗೋಡಂಬಿ, ದ್ರಾಕ್ಷಿ ಬದಾಮಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಸ್ವೀಟ್ ಪೊಂಗಲ್ ರೆಡಿಯಾಗುತ್ತೆ.
ವರಮಹಾಲಕ್ಷ್ಮಿಯ ದಿನಕ್ಕೆ ನೈವೇದ್ಯ ಪ್ರಸಾದವಾಗಿ ಸಜ್ಜಿಗೆ ಮಾಡುವ
ವಿಧಾನ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು 1 ಕಪ್ ಚಿರೋಟಿ ರವೆ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ 4 ಕಪ್ ಹಾಲು ಹಾಕಿಕೊಳ್ಳಬೇಕು. 2ರಿಂದ 3 ನಿಮಿಷ ಚೆನ್ನಾಗಿ ತಿರುಗಿಸಿಕೊಂಡ ಬಳಿಕ 2 ಕಪ್ ಸಕ್ಕರೆಯನ್ನು ಸಹ ಹಾಕಿಕೊಳ್ಳಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡಿರುವ ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಬೇಕು. ಇದು ಬಹಳ ತೆಳಿವಾಗಿ ಇಲ್ಲವೆ ಬಹಳ ದಪ್ಪವಾಗಿಯೂ ಬಾರದಂತೆ ನೋಡಿಕೊಳ್ಳಬೇಕು.
ಇದರ ಜೊತೆಗೆ ಇನ್ನೊಂದು ಪ್ರಸಾದವಾಗಿ ಮೊಸರನ್ನ ಮಾಡಿಕೊಳ್ಳಿ. ಲಕ್ಷ್ಮಿ ದೇವಿಗೆ ಮೊಸರನ್ನು ಹೆಚ್ಚಾಗಿ ನೈವೇದ್ಯ ಮಾಡುತ್ತಾರೆ. ಹೊಸದಾಗಿ ಅನ್ನ ಮಾಡಿಕೊಂಡು ಅದಕ್ಕೆ ಗಟ್ಟಿ ಮೊಸರು ಹಾಕಿ ನಂತರ ಒಂದು ಕಪ್ ಹಾಲು ಸಹ ಹಾಕಿ ಗೋಡಂಬಿ ಬಾದಾಮಿ, ಸಾಸಿವೆ ಕರಿಬೇವು, ಮೆಣಸಿನ ಒಗ್ಗರಣೆ ಮಾಡಿಕೊಂಡು ಇದಕ್ಕೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ದಾಳಿಂಬೆ ಅಥವಾ ಹಸಿ ದ್ರಾಕ್ಷಿಯನ್ನು ಕತ್ತರಿಸಿ ಈ ಮೊಸರನ್ನಕ್ಕೆ ಹಾಕಿದರೆ ನೈವೇದ್ಯ ಮಾಡಲು ಸಿದ್ಧವಾಗಲಿದೆ.
ಈ ಮೂರು ಖಾದ್ಯಗಳನ್ನು ನೀವು ವರಮಹಾಲಕ್ಷ್ಮಿ ಹಬ್ಬದಂದು ಮಾಡಿ ನೈವೇದ್ಯಕ್ಕೆ ಬಳಸಬಹುದು. ಬಳಿಕ ಊಟದೊಂದಿಗೆ ಇಲ್ಲವೆ ಪ್ರಸಾದವಾಗಿ ಸವಿಯಬಹುದು.



Click it and Unblock the Notifications
