Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
5 ನಿಮಿಷದಲ್ಲಿ ಮಸಾಲಾ ಮ್ಯಾಗಿ! ಹೀಗೆ ಮಾಡಿದ್ರೆ ಹೋಟೆಲ್ ಟೇಸ್ಟ್ ಗ್ಯಾರಂಟಿ; ತಿಂದ್ರೆ ವಾವ್ ಅಂತೀರಿ
ಮಕ್ಕಳಿಗೆ ಮ್ಯಾಗಿ ಎಂದರೆ ಅಚ್ಚುಮೆಚ್ಚು. ಮಕ್ಕಳು ಮತ್ತು ಮ್ಯಾಗಿ ನಡುವಿನ ಸಂಬಂಧ ಹೊಸದೇನಲ್ಲ. ನೀವು ಪ್ರತಿದಿನ ನಿಮ್ಮ ಮಕ್ಕಳಿಗೆ ಮ್ಯಾಗಿಯನ್ನು ನೀಡಿದರೂ ಬೇಡ ಎನ್ನಲಾರರು. ನೀವೇನಾದರೂ ಬೇಗನೆ ತಯಾರಿಸಬಹುದಾದ ಮತ್ತು ರುಚಿಕರವಾದ ತಿಂಡಿಯನ್ನು ಮಾಡಲು ಬಯಸಿದರೆ, ಮಸಾಲಾ ಮ್ಯಾಗಿ (Masala Maggi) ನಿಮಗೆ ಹೇಳಿ ಮಾಡಿಸಿದ ಆಯ್ಕೆ. ಅದರಲ್ಲೂ ಹೊರಗೆ ಮಳೆ ಸುರಿಯುತ್ತಿದ್ದರೆ ಮತ್ತು ಬಿಸಿಯಾದದ್ದನ್ನು ತಿನ್ನಲು ಬಯಸಿದರೆ, ಮಸಾಲೆಯುಕ್ತ ಮ್ಯಾಗಿಯ ರುಚಿ ನಿಮ್ಮ ಮೂಡ್ ಅನ್ನು ಇನ್ನಷ್ಟು ರಿಫ್ರೆಶ್ ಮಾಡುತ್ತದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.
ಮಸಾಲಾ ಮ್ಯಾಗಿ ಎಂದರೆ ಮ್ಯಾಗಿ ನೂಡಲ್ಸ್ಗೆ ಮಸಾಲಾ ಸೇರಿಸಿ ಮಾಡುವ ಒಂದು ತಿಂಡಿ. ಇದು ಬೇಗನೆ ತಯಾರಾಗುವ ಮತ್ತು ರುಚಿಕರವಾದ ತಿಂಡಿ. ಮಸಾಲಾ ಮ್ಯಾಗಿ ಮಾಡಲು, ಮೊದಲು ಮ್ಯಾಗಿ ನೂಡಲ್ಸ್ ಅನ್ನು ಬೇಯಿಸಿ. ಬಳಿಕ, ಅದಕ್ಕೆ ಮ್ಯಾಗಿ ಮಸಾಲಾ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಿಮಗೆ ಬೇಕಾದಲ್ಲಿ ತರಕಾರಿಗಳನ್ನು ಕೂಡ ಬಳಸಬಹುದು. ಅಂದರೆ ಈರುಳ್ಳಿ, ಟೊಮೆಟೊ, ಬಟಾಣಿ, ಇತ್ಯಾದಿಗಳನ್ನು ಹಾಕಬಹುದು. ಹಾಗೆಯೇ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಸವಿಯಬಹುದು. ಹಾಗಿದ್ರೆ, ಮಸಾಲಾ ಮ್ಯಾಗಿ (Masala Maggi Recipe) ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

ಮಸಾಲಾ ಮ್ಯಾಗಿ ಮಾಡಲು ಬೇಕಾಗುವ ಪದಾರ್ಥಗಳು
• ಮ್ಯಾಗಿ ನೂಡಲ್ಸ್ - 1 ಪ್ಯಾಕೆಟ್
• ಮ್ಯಾಗಿ ಮಸಾಲ - 1 ಪ್ಯಾಕೆಟ್
• ಈರುಳ್ಳಿ - 1 ಸಣ್ಣಗೆ ಹೆಚ್ಚಿದ್ದು
• ಟೊಮೆಟೊ - 1 ಸಣ್ಣಗೆ ಹೆಚ್ಚಿದ್ದು
• ಕ್ಯಾಪ್ಸಿಕಂ - 1 ಸಣ್ಣಗೆ ಹೆಚ್ಚಿದ್ದು
• ಹಸಿರು ಮೆಣಸಿನಕಾಯಿ - 1 ಸಣ್ಣಗೆ ಹೆಚ್ಚಿದ್ದು
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
• ಎಣ್ಣೆ - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - 1 ಕಪ್
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಮಸಾಲಾ ಮ್ಯಾಗಿ ಮಾಡುವ ಸುಲಭ ವಿಧಾನ
ಮಸಾಲಾ ಮ್ಯಾಗಿ ತಯಾರಿಸುವ ವಿಧಾನ
ಮೊದಲು, ಒಂದು ಬಾಣಲೆ ಅಥವಾ ಪ್ಯಾನ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ಬಳಿಕ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಅದು ತಿಳಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಟೊಮೆಟೊ, ಕ್ಯಾಪ್ಸಿಕಂ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ, ತರಕಾರಿಗಳು ಮೃದುವಾಗುವವರೆಗೆ 2 ರಿಂದ 3 ನಿಮಿಷ ಬೇಯಿಸಿ. ಬಳಿಕ ಮ್ಯಾಗಿ ನೂಡಲ್ಸ್ ಮತ್ತು ಮಸಾಲಾ ಹಾಕಿ. ಮೇಲೆ 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ನೂಡಲ್ಸ್ ಸಂಪೂರ್ಣವಾಗಿ ಬೆಂದು ನೀರು ಆವಿಯಾಗುವವರೆಗೆ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ. ಇಷ್ಟು ಮಾಡಿದರೆ ಬಿಸಿ ಬಿಸಿಯಾದ ಮಸಾಲಾ ಮ್ಯಾಗಿ ಸಿದ್ಧ.
ಮಸಾಲಾ ಮ್ಯಾಗಿ ಒಂದು ತ್ವರಿತವಾಗಿ ತಯಾರಿಸಬಹುದಾದ ಮತ್ತು ರುಚಿಕರವಾದ ತಿಂಡಿ. ಮಕ್ಕಳು ಮತ್ತು ದೊಡ್ಡವರು ಇಬ್ಬರೂ ಇಷ್ಟಪಡುತ್ತಾರೆ. ಈ ಮಸಾಲಾ ಮ್ಯಾಗಿಯನ್ನು ಬಿಸಿಯಾಗಿ ಸವಿಯಬಹುದು. ಬೇಕಿದ್ದರೆ, ಮೇಲೆ ಚೀಸ್ ಅಥವಾ ಬೆಣ್ಣೆಯನ್ನು ಸೇರಿಸಿ ಇನ್ನಷ್ಟು ರುಚಿಕರವಾಗಿರುತ್ತದೆ. ಇದು ಮಕ್ಕಳ ಟಿಫಿನ್ ಅಥವಾ ಮಳೆಯ ಸಮಯದಲ್ಲಿ ಸಂಜೆಯ ತಿಂಡಿಗೆ ಹೇಳಿಮಾಡಿಸಿದಂತಿದೆ.



Click it and Unblock the Notifications
